ಮಧುಮೆಹಿಗಳು ತಪ್ಪಿಯೂ ಇವುಗಳನ್ನು ಸೇವಿಸಬೇಡಿ!

ಮಧುಮೇಹವನ್ನು ತಡೆಗಟ್ಟಲು ಮತ್ತು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ. ಅದರೆ ಇದನ್ನು ನಿಯಂತ್ರಣದಲ್ಲಿ ಇಡಬೇಕಾದ್ರೆ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯ. ಆಯುರ್ವೇದ ವೈದ್ಯರ ಪ್ರಕಾರ ಮಧುಮೇಹ ರೋಗಿಗಳು ಏನನ್ನು ತಿನ್ನಬಾರದು ಮತ್ತು ಏನನ್ನು ತಿನ್ನಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

1, ಮೊಸರು—ಆಯುರ್ವೇದ ಪ್ರಕಾರ ಮೊಸರು ಪ್ರಕೃತಿಯಲ್ಲಿ ಬಿಸಿಯಾಗಿರುತ್ತದೆ. ಇದು ಜಿರ್ಣಿಸಿಕೊಳ್ಳಲು ಭಾರವಾಗಿದೆ. ದೇಹದಲ್ಲಿ ಕಫ ದೋಷವನ್ನು ಉಲ್ಬಾಣಗೊಳಿಸುತ್ತದೆ. ಹೆಚ್ಚಿದ ಕಫವು ಪೌಷ್ಟಿಕಾಂಶದ ಕೊರತೆಯನ್ನು ಕೊಲೆಸ್ಟ್ರೇಲ್ ಟ್ರೈ ಗ್ಲಿಸಾರೋಯಿಡ್ ಅನ್ನು ಹೆಚ್ಚಿಸಬಹುದು. ಅದರಿಂದ ಮಧುಮೇಹ ಇರುವವರು ಮೊಸರನ್ನು ಸೇವಿಸದೆ ಇರುವುದು ಉತ್ತಮ. ಮೋಸರಿನ ಬದಲಿಗೆ ಕೆಲವೊಮ್ಮೆ ಮಜ್ಜಿಗೆ ಸೇವನೆ ಮಾಡಬಹುದು.

2, ಬಿಳಿ ಉಪ್ಪು–ಮಧುಮೇಹದಿಂದ ಬಳಲುತ್ತಿರುವ ಜನರು ಅಧಿಕ ರಕ್ತದ ಒತ್ತಡದಿಂದ ಪ್ರಭಾವಿತರಾಗುವ ಸಾಧ್ಯತೆ ಇದೆ. ಇದು ಹೃದ್ರೂಗ ಪರ್ಶವಾಯು ಮೂತ್ರಪಿಂಡದ ಕಾಯಿಲೆ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಉಪ್ಪು ಸೇವನೆಯು ರಕ್ತದಲ್ಲಿನ ಸಕ್ಕರೆ ಮೇಲೆ ಪರಿಣಾಮ ಬಿರುವುದಿಲ್ಲ. ಅದರೆ ಉಪ್ಪನ್ನು ರಾಕ್ ಸಾಲ್ಟ್ ಹಿಮಾಲಯನ್ ಪಿಂಕ್ ಸಾಲ್ಟ್ ದೊಂದಿಗೆ ಬದಲಾಯಿಸುವುದರಿಂದ ಅಧಿಕ ಬಿಪಿ ಹೃದ್ರೂಗ ಮತ್ತು ಮಧುಮೆಹಕ್ಕೆ ಸಂಬಂಧಿಸಿದ ಇತರ ತೊಡಕುಗಳನ್ನು ತಡೆಯಲು ಅಥವಾ ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ.

3, ಸಕ್ಕರೆ–ಸಕ್ಕರೆ ಆಹಾರ ಮತ್ತು ಪಾನೀಯಗಳು ನಿಮ್ಮ ಇನ್ಸುಲಿನ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ ಮತ್ತು ಇದರಿಂದ ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ.ನೀವು ಸಕ್ಕರೆಯನ್ನು ಚಹಾ ಅಥವಾ ಕಾಫಿಗೆ ಸೇರಿಸುತ್ತಿದ್ದರು ಸಹ ,ಅದನ್ನು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರ ಪ್ರಕಾರ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಸಾಕಷ್ಟು ನೀರು ಮತ್ತು ಆಹಾರವನ್ನು ಆರೋಗ್ಯಕರ ಆಯ್ಕೆಗಳೊಂದಿಗೆ ಬದಲಾಯಿಸುವುದು ಉತ್ತಮ.

4.ಮಧುಮೆಹಿಗಳು ಏನನ್ನು ತಿನ್ನಬೇಕು–ನೆಲ್ಲಿಕಾಯಿ ಸೇವನೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಂಶ ಇರುತ್ತದೆ ಮತ್ತು ಇದು ಮಧುಮೇಹವನ್ನು ನಿಯಂತ್ರಣ ಮಾಡುತ್ತದೆ.
ಅಷ್ಟೇ ಅಲ್ಲದೆ ಹೆಸರು ಕಾಳು ಸುಲಭವಾಗಿ ಜೀರ್ಣ ಆಗುವ ಪ್ರೊಟೀನ್ ಆಗಿದ್ದು ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಇನ್ನು ಕರಿಬೇವನ್ನು ಗಿಡಮೂಲಿಕೆ ಚಹಾದಲ್ಲಿ ಸೇವನೆ ಮಾಡಬಹುದು ಅಥವಾ ನಿಮ್ಮ ಆಹಾರಕ್ಕೆ ಸೇವಿಸಬಹುದು.ಇನ್ನು ನುಗ್ಗೆ ಸೊಪ್ಪು ಒಂದು ಸೂಪರ್ ಆಹಾರವಾಗಿದ್ದು ಇದು ಇನ್ಶೂಲಿನ್ ಪ್ರತಿರೋದವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇನ್ನು ಬೆಳಗ್ಗೆ ತೆಂಗಿನಕಾಯಿ ಸೇವನೆ ಮಾಡುವುದು ಮಧುಮೇಹ ಇರುವವರಿಗೆ ಪ್ರಯೋಜನ.

Leave a Comment