ಈ ಆಹಾರ ತಿಂದು ಬಿ ಪಿ ಗೆ ಗುಡ್ ಬೈ ಹೇಳಿ! ಬಿಪಿ ಸಮಸ್ಸೆಗೆ ಮನೆಮದ್ದು!

ಬಿಪಿ ನಿವಾರಣೆ ಮಾಡುವ ಆಹಾರ ಪದ್ಧತಿ, ಜೀವನಕ್ರಮ ಹಾಗು ಮನೆಮದ್ದುಗಳನ್ನು ಕುರಿತಾಗಿ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.ಇವುಗಳನ್ನು ಸಮರ್ಪಕವಾಗಿ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳಿಂದ ಹೊರಬರಬಹುದು. ಆತ್ಮೀಯರೆ ಬಿಪಿ ಎನ್ನುವುದು ಜೀವನಕ್ರಮ ಮತ್ತು ಆಹಾರಕ್ರಮ ಎಂದೂ ಹೇಳಬಹುದು. ಇದರಲ್ಲಿ ಯಾವ ತಪ್ಪುಗಳನ್ನು ಮಾಡುತ್ತೇವೆ ಎಂದರೆ
-ಕರಿದ ಪದಾರ್ಥವನ್ನು ಹೆಚ್ಚಾಗಿ ಸೇವನೆ ಮಾಡುವುದು

ದುಷ್ಟಚಟಗಳನ್ನು ಮಾಡುವುದು
-ಜೀರ್ಣ ಆಗದೆ ಇರುವ ಆಹಾರವನ್ನು ಸೇವನೆ ಮಾಡುವುದು
-ತಡವಾಗಿ ನಿದ್ದೆ ಮಾಡುವುದು
-ವ್ಯಾಯಾಮ ಮಾಡದೇ ಇರುವುದು
-ಬೆಳಗ್ಗೆ ಎದ್ದೆಳತ ಮಾನಸಿಕ ಒತ್ತಡದಿಂದ ಏಳುವುದು

ಅರೋಗ್ಯವಾಗಿ ಇರಬೇಕು ಎಂದರೆ ಮೊದಲು ಒತ್ತಡವನ್ನು ತೆಗೆದು ಹಾಕಬೇಕು. ಇನ್ನು ಬೇಗ ಮಲಗಿ ಬೇಗ ಎದ್ದೇಳಬೇಕು ಹಾಗು ಬೆಳಗ್ಗೆ ಎದ್ದು ಶೌಚಾಲಯ ಮುಗಿಸಿ, ವಾಕಿಂಗ್ ಮಾಡುವುದು, ಯೋಗ ಪ್ರಾಣಯಾಮ ಮಾಡುವುದು ಮತ್ತು 8:00 ಗಂಟೆಯಿಂದ 9:00 ಗಂಟೆ ಒಳಗೆ ಹಣ್ಣು ತರಕಾರಿ ಸೇವನೆ ಮಾಡಬೇಕು. ನಂತರ ಒಂದು ತಾಸು ಬಳಿಕ ಹೊಟ್ಟೆ ಹಸಿವು ಆಗಿದ್ದರೆ ಲಘು ಆಹಾರವನ್ನು ಸೇವನೆ ಮಾಡಬೇಕು.

ಮಧ್ಯಾಹ್ನ 1:00 ಗಂಟೆಯಿಂದ 2:00 ಗಂಟೆ ಒಳಗೆ ಆಹಾರವನ್ನು ಸೇವನೆ ಮಾಡಬೇಕು. ಸರಿಯಾದ ಕ್ರಮದಲ್ಲಿ ಆಹಾರ ಸೇವನೆ ಮಾಡಬೇಕು. ಇನ್ನು ದೇಹದ ಒತ್ತಡವನ್ನು ನಿವಾರಣೆ ಮಾಡುವುದಕ್ಕೆ ವ್ಯಾಯಾಮದ ಅಗತ್ಯ ಇರುತ್ತದೆ. ಯಾರ ಮನಸ್ಥಿತಿ ಸರಿಯಾಗಿ ಇರುತ್ತದೇ ಅವರ ಮನಸ್ಸಿನಲ್ಲಿ ಮೆಟಬೋಲಿಕ್ ರೇಟ್ ಕ್ರಿಯಾಶೀಲವಾಗಿರುತ್ತದೆ.ಯಾರ ಮನಸ್ಸು ಪ್ರಸನ್ನವಾಗಿರುತ್ತದೆ ಅವರ ಶರೀರದಲ್ಲಿ ಸರ್ಕ್ಯುಲಷನ್ ಚೆನ್ನಾಗಿ ಇರುತ್ತದೆ.

ಇನ್ನು ಬಿಪಿ ನಿವಾರಣೆಗೆ ಶರೀರ ಶುದ್ಧತೆ ಕೂಡ ಅಷ್ಟೇ ಮುಖ್ಯ. ಹಾಗಾಗಿ ಆಹಾರದಲ್ಲಿ 80% ಭಾಗ ಸೊಪ್ಪು ತರಕಾರಿ ಹಣ್ಣುಗಳಿಂದ ಕೂಡಿರಬೇಕು. ಏಕೆಂದರೆ ಇವುಗಳನ್ನು ಸೇವನೆ ಮಾಡುವುದರಿಂದ ಆಂಟಿ ಆಕ್ಸಿಡೆಂಟ್ ನೈಟ್ರಿಕ್ ಆಕ್ಸಿಡ್ ಜಾಸ್ತಿ ಇರುತ್ತದೆ. ಇನ್ನು ಜ್ಯೂಸ್ ಸೇವನೆ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ತಿಂಗಳು ಬರೀ ಹಣ್ಣು ತರಕಾರಿ ಸೇವನೆ ಮಾಡಿದರೆ ಪ್ರತಿ ಅಂಗಗಳು ಕೋಶಗಳು ಶುದ್ಧವಾಗುತ್ತದೆ.

ಒಂದು ವೇಳೆ ನಿಮಗೆ ಏನಾದರು ಸಮಸ್ಸೆ ಇದ್ದರೆ ವೈದ್ಯರ ಸಲಹೆಯನ್ನು ಪಡೆದುಕೊಂಡು ಪತ್ಯ ಮಾಡಬಹುದು. ಕಿಡ್ನಿ ಸಮಸ್ಸೆ ಇರುವವರು ಮಾಡುವಾಗಿಲ್ಲ, ಗರ್ಭಿಣಿ ಸ್ತ್ರೀಯರು ಮಾಡುವಾಗಿಲ್ಲ.ಇನ್ನು ಕೊಬ್ಬು ಕರಗಿಸುವುದಕ್ಕೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ ಮತ್ತು ಬೂದು ಕುಂಬಳಕಾಯಿ ಸೋರೆಕಾಯಿ ಮತ್ತು ಸೊಪ್ಪುಗಳ ಜ್ಯೂಸ್ ಅನ್ನು ಕುಡಿಯಬಹುದು. ಈ ರೀತಿ ಇವುಗಳನ್ನು ಸೇವನೆ ಮಾಡುತ್ತ ಬಂದರೆ ಕಂಡಿತಾ ಬಿಪಿ ಗುಣ ಆಗುತ್ತ ಬರುತ್ತದೆ. ಇದರ ಜೊತೆಗೆ ಯೋಗ ಪ್ರಾಣಯಾಮ ಮಾಡಬೇಕು.

ಇನ್ನು ಅಪಾನ ಮುದ್ರೆ ಯೋಗ ಮಾಡುವುದು, ಪ್ರಾಣಮುದ್ರೆ, ಹೃದಯ ಮುದ್ರೆ ಮಾಡಬೇಕು ಹಾಗು ನಾಡಿ ಶೋದ ಪ್ರಾಣಯಾಮವನ್ನು ಮಾಡಬೇಕು.ಈ ರೀತಿ ಮಾಡಿದರೆ ನಿಮ್ಮ್ ಬಿಪಿ ಸಮಸ್ಸೆ ಕಡಿಮೆ ಆಗುತ್ತದೆ ಮತ್ತು ಮನಸ್ಸು ಪ್ರಸನ್ನವಾಗುತ್ತದೆ.

Leave a Comment