ಈ ಎಲೆ ಇದ್ದರೆ ಸಾಕು ಮೂಲವ್ಯಾದಿ 21 ದಿನದಲ್ಲಿ ಶಾಶ್ವತ ವಾಸಿ!

ಸಾಮಾನ್ಯವಾಗಿ ಮುಟ್ಟಿದರೆ ಗಿಡವನ್ನು ಸಾಧಾರಣವಾಗಿ ಎಲ್ಲರ ಮನೆಯ ಹತ್ತಿರ ಇರುತ್ತಾದೆ. ಇದರಿಂದ ಹಲವಾರು ರೀತಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು, ಮುಚ್ಚಿದ ಮುಳ್ಳು ಎಂದು ಕರೆಯುತ್ತಾರೆ. ಹಲವಾರು ಹೆಸರಿನಲ್ಲಿ ಕರೆಸಿಕೊಳ್ಳುವ ಈ ಮುಳ್ಳಿನ ಗಿಡ ತುಂಬಾನೇ ಉಪಯೋಗವಾಗುತ್ತದೆ.ನಾಚಿಕೆ ಮುಳ್ಳು ಎಂದರೆ ಎಲ್ಲರಿಗೂ ಅಲಕ್ಷ್ಯ. ಅದನ್ನು ಕಳೆ ಎಂದು ಎಲ್ಲರೂ ಕಿತ್ತು ಹಾಕುತ್ತಾರೆ.

ಏಕೆಂದರೆ ಈ ಸಸ್ಯ ಎಲ್ಲಡೆ ಬೆಳೆಯುತ್ತದೆ. ಕಾರಣ ಈ ಗಿಡವು ಸಾವಿರಕ್ಕೂ ಹೆಚ್ಚು ಬೀಜಗಳನ್ನು ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಆ ಬೀಜಗಳು ಒಣಗಿದ ಬಳಿಕ ಗಾಳಿಯಲ್ಲಿ ಹೋಗಿ ಎಲ್ಲ ಕಡೆ ಸುಲಭವಾಗಿ ಬೆಳೆಯುತ್ತವೆ. ಮುಟ್ಟಿದರೆ ಮುನಿ ಗಿಡವು ಚಿಕ್ಕದಾಗಿದ್ದು, ಇದು ಸಣ್ಣ ಸಣ್ಣ ಮುಳ್ಳುಗಳನ್ನೂ, ತಿಳಿ ನೇರಳೆ ಬಣ್ಣದ ಸಣ್ಣ ಹೂವುಗಳನ್ನೂ ಹೊಂದಿರುತ್ತದೆ . ಅದರ ಹೂವುಗಳು ತುಂಬಾ ಆಕರ್ಷಕವಾಗಿರುತ್ತವೆ. ಈ ಗಿಡದ ಮುಳ್ಳು ತುಂಬಾ ಅಪಾಯಕಾರಿ. ಮುಟ್ಟಿದರೆ ಮುನಿ ಗಿಡದ ಕಾಂಡವನ್ನು ಕತ್ತರಿಸಿದರು ಬೇಗ ಸಾಯುವುದಿಲ್ಲ. ಅದು ಮತ್ತೆ ಚಿಗುರುತ್ತದೆ. ಈ ಗಿಡದ ಪ್ರತಿ ಭಾಗವು ಹೂವು, ಬೇರು, ಕಾಂಡ, ಎಲೆ, ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ.

ಮುಟ್ಟಿದರೆ ಮುನಿ ಗಿಡದ ಎಲೆಗಳನ್ನು ತೆಗೆದುಕೊಂಡು ಬರಬೇಕು. ಒಂದು ಲೋಟ ನೀರಿಗೆ ಎಲೆಗಳನ್ನು ತಂದು ಜಜ್ಜಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಳ್ಳಬೇಕು. ಈ ಕಷಾಯವನ್ನು ಕುಡಿಯುವುದರಿಂದ ಅಧಿಕ ರಕ್ತ ಸ್ರಾವ ಜಾಸ್ತಿ ಇದ್ದಾರೆ ಕಡಿಮೆ ಮಾಡುತ್ತದೆ ಮತ್ತು ರಕ್ತ ಮೂಲವ್ಯಾದಿಯಿಂದ ರಕ್ತ ಹೋಗುತ್ತದೆ. ಈ ಸಮಯದಲ್ಲಿ ಮುಟ್ಟಿದರೆಮುನಿ ಕಷಾಯವನ್ನು ಕುಡಿಯಬಹುದು.ಈ ಕಷಾಯವನ್ನು ಕುಡಿಯುವುದರಿಂದ ಎರಡು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಇದರಿಂದ ನೋವು ಮತ್ತು ಬಾವಿನಿಂದಾದ ಊತದ ಉಪಶಮನ ಸಾಧ್ಯವಾಗುತ್ತದೆ. ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಕುಡಿಸುವುದು ಮಂಡಿನೋವು, ಮಂಡಿ ಊತ, ಮಲಬದ್ಧತೆ, ಮೂತ್ರಪಿಂಡ ಹಾಗೂ ಲಿವರ್‌ನ ತೊಂದರೆಗೆ ಉತ್ತಮ ಔಷಧ

ಸಾಮಾನ್ಯ ಶೀತ ಆದರೆ ಇದು ಒಳ್ಳೆಯ ಮದ್ದು. ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೆ ಇದರ ಎಲೆಯನ್ನು ಜಜ್ಜಿ ರಸ ಹಚ್ಚಿದರೆ ರಕ್ತ ಸೋರುವುದು ನಿಲ್ಲುತ್ತದೆ. ಗಾಯ ಬೇಗನೆ ವಾಸಿಯಾಗುತ್ತದೆ.

ಮೂಲವ್ಯಾಧಿ, ಕಾಲರಾ ಮತ್ತು ಸಾಮಾನ್ಯ ವಾಂತಿಭೇದಿಗೂ ಉತ್ತಮ ಔಷಧಿ. ಚರ್ಮ ವ್ಯಾಧಿಯನ್ನೂ ಕಡಿಮೆ ಮಾಡುತ್ತದೆ. ಕೆಲವೊಂದು ಸ್ತ್ರೀ ರೋಗಕ್ಕೂ ಉತ್ತಮ ಮದ್ದು. ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.

https://www.youtube.com/watch?v=wyTmlrsKn9I&pp=wgIGCgQQAhgB

Leave a Comment