ಪ್ರತಿದಿನ ಮೊಸರು ಸೇವನೆ ಮಾಡುವುದರಿಂದ ಅರೋಗ್ಯವು ಉತ್ತಮವಾಗಿ ಇರುತ್ತದೆ. ಮೊಸರಿನಲ್ಲಿ ಇರುವ ಕ್ಯಾಲ್ಸಿಯಂ ವಿಟಮಿನ್ ಕ್ಯಾಲೋರಿ ಪ್ರೊಟೀನ್ ಗಳು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತದೆ. ಅದರೆ ಮೊಸರನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಲಾಭ ಸಿಗುತ್ತದೆ. ಅದರೆ ಶೇಕಡಾ 90% ಜನರು ಮೊಸರನ್ನು ತಪ್ಪಾಗಿ ಸೇವನೆ ಮಾಡುತ್ತಾರೆ. ಇದೆ ಕಾರಣದಿಂದ ಮೋಸರಿನಿಂದ ದೇಹಕ್ಕೆ ಯಾವುದೇ ಲಾಭ ಸಿಗುವುದಿಲ್ಲ.
ಮೊಸರು ಸೇವನೆ ಮಾಡುವಾಗ ಕೆಲವು ಮಾಡುವ ತಪ್ಪಿನಿಂದ ಹಲವಾರು ಅರೋಗ್ಯಕರ ಸಮಸ್ಸೆಯನ್ನು ಎದುರಿಸಬೇಕಾಗುತ್ತದೆ. ನೆಗಡಿ ಜ್ವರ ಅಸ್ತಮಾ ತ್ವಚೆಯಲ್ಲಿ ಕಿರಿಕಿರಿ ಕೂದಲು ಉದುರುವ ಸಮಸ್ಸೆ ಮಲಬದ್ಧತೆ ಹೊಟ್ಟೆ ನೋವು, ಪಿತ್ತ, ಕಫದ ಸಮಸ್ಸೆಯನ್ನು ಅನುಭವಿಸಬೇಕಾಗುತ್ತದೇ. ಏಕೆಂದರೆ ಅರೋಗ್ಯಕರವಾದ ವಸ್ತುವನ್ನು ಅನುಚಿತವಾಗಿ ಸೇವನೆ ಮಾಡುವುದರಿಂದ ಉಂಟಾಗುವ ಲಾಭಕ್ಕಿಂತ ಹಾನಿಗಳೇ ಹೆಚ್ಚಾಗುತ್ತದೆ.
ಮೋಸರಿನಲ್ಲಿ ಇರುವ ಉತ್ತಮ ಬಾಕ್ಟೆರಿಯ ಚಯಪಾಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.ಈ ಬಾಕ್ಟೆರಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರೆ ಬಾಕ್ಟೆರಿಯ ನಾಶಿಸಿ ಹೋದ ಮೇಲೆ ಮೊಸರನ್ನು ಸೇವನೆ ಮಾಡಿದರೆ ದೇಹಕ್ಕೆ ಯಾವುದೇ ಲಾಭ ಸಿಗುವುದಿಲ್ಲ.
ಕೆಲವರು ಮೋಸರಿನ ಜೊತೆ ಉಪು ಬೆರೆಸಿ ಸೇವನೆ ಮಾಡುತ್ತಾರೆ. ಅದರ್ ಈ ರೀತಿ ಸೇವನೆ ಮಾಡಬಾರದು. ಏಕೆಂದರೆ ಉಪ್ಪನ್ನು ತಯಾರಿಸುವಾಗ ಸಾಕಷ್ಟು ರಾಸಾಯನಿಕ ವಸ್ತುವನ್ನು ಸೇರಿಸಿ ತಯಾರಿಸಿರುತ್ತಾರೆ. ಇದನ್ನು ಮೋಸರಿಗೆ ಹಾಕಿದರೆ ದೇಹಕ್ಕೆ ಬೇಕಾಗಿರುವ ಒಳ್ಳೆಯ ಬಾಕ್ಟೆರಿಯಗಳು ಸತ್ತು ಬಿಡುತ್ತದೆ.ಇಂತಹ ಮೊಸರನ್ನ ಸೇವನೆ ಮಾಡಿದರೆ ದೇಹಕ್ಕೆ ಯಾವುದೇ ಲಾಭ ಸಿಗುವುದಿಲ್ಲ.
ಮೊಸರನ್ನು ಹೇಗೆ ಸೇವಿಸಬೇಕು–ಉತ್ತಮ ಆರೋಗ್ಯಕ್ಕೆ ಮೋಸರಿಗೆ ಬೆಲ್ಲವನ್ನು ಅಥವಾ ಕಲ್ಲು ಸಕ್ಕರೆ ಹಾಕಿ ಸೇವನೆ ಮಾಡಬೇಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮೋಸರಿಗೆ ಸಿಹಿ ಹಾಕಿ ಸೇವನೆ ಮಾಡಿದರೆ ಮೊಸರಿನಲ್ಲಿ ಇರುವ ಉತ್ತಮ ಬಾಕ್ಟೆರಿಯ ದ್ವಿಗುಣ ಆಗುತ್ತಾದೇ. ಇದರಿಂದ ಮೋಸರಿನಿಂದ ದೇಹಕ್ಕೆ ಇನ್ನು ಹೆಚ್ಚಿನ ಲಾಭ ಸಿಗುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಸೆಯನ್ನು ಹೋಗಲಾಡಿಸುತ್ತದೆ.
ಇನ್ನು ಮೊಸರನ್ನು ಬಿಸಿ ಮಾಡಿ ಹಲವು ಆಹಾರ ಪದಾರ್ಥವನ್ನು ತಯಾರಿಸಲಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಇದರಲ್ಲಿ ಇರುವ ಉತ್ತಮ ಬಾಕ್ಟೆರಿಯವನ್ನು ನಾಶ ಮಾಡುತ್ತದೆ. ಇಂತಹ ಮೊಸರನ್ನು ಸೇವನೆ ಮಾಡಿದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಸೆ ಹಾಗು ಇತರ ಅರೋಗ್ಯ ಸಮಸ್ಸೆಗಳು ಎದುರು ಆಗಬಹುದು.ಜೀರ್ಣ ಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ. ಇನ್ನು ರಾತ್ರಿ ಸಮಯದಲ್ಲಿ ಮೊಸರು ಸೇವನೇ ಮಾಡಿದರೆ ಚರ್ಮದ ಸಮಸ್ಸೆ ಕಾಡುತ್ತದೆ. ಅದರಲ್ಲೂ ಕಫದ ಸಮಸ್ಸೆ ಎದುರು ಆಗುವ ಸಾಧ್ಯತೆ ಹೆಚ್ಚು ಆಗುತ್ತದೆ. ಆದ್ದರಿಂದ ರಾತ್ರಿ ಸಮಯದಲ್ಲಿ ಮೊಸರು ಸೇವನೆ ಮಾಡಬೇಡಿ. ಆದಷ್ಟು ಮಧ್ಯಾಹ್ನ ಸಮಯದಲ್ಲಿ ಮೊಸರನ್ನು ಸೇವನೆ ಮಾಡಬೇಕು.