ತುಂಬಾ ದಿನ ಹಾಸಿಗೆ ಮೇಲೆ ಮಲಗಿದರೆ ಬೆಡ್ ಸೋರ್ಸ್ ಅನ್ನೋದು ಆಗುತ್ತದೆ ಅಥವಾ ಗಾಯಗಳು ಆಗುತ್ತವೆ. ತಿಂಗಳು ಆದರೂ ಸಹ ಗಾಯಗಳು ಮಾಯ ಆಗುವುದಿಲ್ಲ. ಬೇವಿನ ಎಲೆ ಮತ್ತು ಬಿಲ್ವ ಪತ್ರೆ ಎಲೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ. ನಂತರ ಇದನ್ನು ಪುಡಿ ಮಾಡಿಕೊಳ್ಳಬೇಕು.
ನಂತರ ಗಾಯವನ್ನು ಬೆಚ್ಚನೆ ನೀರಿನಿಂದ ತೊಳೆದು ಬಟ್ಟೆಯಿಂದ ವರೆಸಿ ಮತ್ತು ಗಾಯ ಒಣಗಿದ ನಂತರ ಶುದ್ಧ ಕೊಬ್ಬರಿ ಎಣ್ಣೆಯನ್ನು ಲೇಪನ ಮಾಡಬೇಕು. ನಂತರ ತಯಾರಿಸಿದ ಪುಡಿಯನ್ನು ಮೇಲೆ ಹಾಕಬೇಕು.ಇದೆ ರೀತಿ 8 ರಿಂದ 10 ಗಂಟೆ ಹಾಗೆ ಬಿಟ್ಟು ಅಮೇಲೆ ಮತ್ತೊಮ್ಮೆ ಗಾಯವನ್ನು ತೊಳೆದು ಹಾಗೆ ಬಿಡಬೇಕು. ಈ ರೀತಿ ಮಾಡಿದರೆ ಮಾಯದೆ ಇರುವ ಗಾಯಗಳು ಬೇಗನೆ ಗುಣವಾಗುತ್ತದೆ. ಅದರೆ ರಕ್ತಸ್ರವ ಇರುವ ಗಾಯಕ್ಕೆ ಈ ರೀತಿ ಮಾಡಬಾರದು.