1 ಚಿಟಿಕೆ ತಿಂದರೆ ಯಾವ ರೋಗವು ನಿಮ್ಮ ಹತ್ತಿರವು ಬರಲ್ಲ!ಕೋಟಿ ಕೊಟ್ಟರು ಸಿಗಲ್ಲ ಇಂತಹ ಆರೋಗ್ಯ ಲಾಭ

ಸಾಂಬಾರ್ ಪದಾರ್ಥಗಳು ಹವಾಮಾನಕ್ಕೆ ಅನುಗುಣವಾಗಿ ದೇಹವನ್ನು ಕಾಪಾಡುತ್ತದೆ. ಯಾವುದೇ ಖಾದ್ಯವಾದರೂ ವಿಶೇಷ ರುಚಿಯನ್ನು ನೀಡುವಂತಹ ಸಾಂಬಾರು ಪದಾರ್ಥ ಗಳಲ್ಲಿ ಜಾಯಿ ಕಾಯಿ ಕೂಡ ಒಂದು.ಜಾಯಿ ಕಾಯಿಯನ್ನು ಮಸಾಲೆಗೆ ಬಳಸುತ್ತಾರೆ. ಅದರೆ ಇದರಿಂದ ಹಲವಾರು ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಬಹುದು. ಜಾಯಿಕಾಯಿಯನ್ನು ಮಸಾಲೆ ರೂಪದಲ್ಲಿ ಅಡುಗೆಯಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಇದನ್ನು ಔಷಧಿ ರೂಪದಲ್ಲಿ ಇದನ್ನು ಬಳಸಬಹುದು. ಇದರಿಂದ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

1, ಇದು ಕ್ಯಾನ್ಸರ್ ಸಮಸ್ಯೆಯನ್ನು ತಡೆಗಟ್ಟುತ್ತದೆ.

ಇದರಲ್ಲಿ ಆಂಟಿಆಕ್ಸಿಡೆಂಟ್ ಲಕ್ಷಣಗಳು ಇದ್ದು ಕ್ಯಾನ್ಸರ್ ಅನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನು ಕ್ಯಾನ್ಸರ್ ವಿರೋಧಿ ಔಷಧಿಗಳಲ್ಲಿ ಬಳಸಲಾಗುತ್ತದೆ. ಜಾಯಿ ಕಾಯಿಯನ್ನು ಸೇವಿಸುವುದರಿಂದ ಕರುಳಿನಲ್ಲಿ ಗೆಡ್ಡೆ ಬೆಳೆಯುವುದನ್ನು ತಪ್ಪಿಸಿ ಕರುಳಿನ ಕ್ಯಾನ್ಸರ್ ಅನ್ನು ತಡೆಯುತ್ತದೆ.

2, ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

ಜಾಯಿಕಾಯಿಯಲ್ಲಿರುವ ಕ್ಯಾಲ್ಸಿಯಂ ಕಬ್ಬಿಣಾಂಶ ಪೊಟ್ಯಾಶಿಯಂ ಮ್ಯಾಂಗನೀಸ್ ಅಂಶಗಳು ನಿಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿಯೂ ಕೂಡ ಸಹಾಯ ಮಾಡುತ್ತದೆ.

3, ಚರ್ಮದ ಆರೋಗ್ಯಕ್ಕೆ ಉತ್ತಮ

ಜಾಯಿಕಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ನಿಮ್ಮ ಚರ್ಮದ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯಮಾಡುತ್ತದೆ. ನಿಮ್ಮ ಚರ್ಮದಲ್ಲಿ ಇರುವ ಕಪ್ಪು ಕಲೆಗಳು ಮೊಡವೆಗಳಿಗೆ ಇದು ಪರಿಹಾರವನ್ನು ನೀಡುತ್ತದೆ.

ಜಾಯಿಕಾಯಿ ಪುಡಿ ಹಾಗೂ ಜೇನುತುಪ್ಪ ಸಮಪ್ರಮಾಣದಲ್ಲಿ ತೆಗೆದುಕೊಂಡು ನಿಮ್ಮ ಮೊಡವೆಗಳ ಮೇಲೆ ಹಚ್ಚಿ.20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ ಅಥವಾ ಜಾಯಿ ಕಾಯಿಯ ಪುಡಿಗೆ ಹಾಲನ್ನು ಸೇರಿಸಿ ಅದನ್ನು ಚರ್ಮದ ಮೇಲೆ ಹಚ್ಚಿ.ನಿಮಗೆ ಉತ್ತಮ ಪರಿಹಾರ ಲಭ್ಯವಾಗುತ್ತದೆ.

4, ಉತ್ತಮ ನಿದ್ರೆ ಬರುತ್ತದೆ

ನಿದ್ರಾ ಹೀನತೆ ಸಮಸ್ಯೆ ಇದ್ದರೆ ರಾತ್ರಿ ಮಲಗುವ ಮೊದಲು ಹಾಲಿನೊಂದಿಗೆ ಸ್ವಲ್ಪ ಜಾಯಿ ಕಾಯಿಯಾ ಪುಡಿಯನ್ನು ಬೆರೆಸಿ ಕುಡಿಯಿರಿ.ಇದನ್ನು ಮಾಡುವುದರಿಂದ ಉತ್ತಮ ನಿದ್ರೆ ಬರುತ್ತದೆ.

5, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ತಿಂದ ಆಹಾರವನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಊಟ ಆದ ನಂತರ ಒಂದು ಚಿಟಿಕೆ ಜಾಯಿಕಾಯಿಯ ಪುಡಿಯನ್ನು ಸೇವಿಸಿ.ಅಷ್ಟೇ ಅಲ್ಲದೆ ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಮತ್ತು ನಿದ್ರಾಹೀನತೆ ಸಮಸ್ಯೆ ಇರುವವರೆಗೂ ಕೂಡ ಒಳ್ಳೆಯದು. ಇದರಿಂದ ಡಿಪ್ರೆಶನ್ ಕೂಡ ಕಡಿಮೆಯಾಗುತ್ತದೆ. ಖಿನ್ನತೆಯಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು. ಇದರಲ್ಲಿ ಆಂಟಿ ಎಜೇಂಟ್ ಅಂಶವಿರುವುದರಿಂದ ದೇಹದಲ್ಲಿ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಇಡುತ್ತದೆ. ಇನ್ನು ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ಇದು ಕಡಿಮೆ ಮಾಡುತ್ತದೆ. ಇದು ದೇಹದ ಪ್ರತಿಯೊಂದು ಅಂಗಕ್ಕೂ ಕೂಡ ತುಂಬಾನೇ ಸಹಾಯವಾಗುತ್ತದೆ.

Leave a Comment