ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ. ಆ ಪಟ್ಟಿಯಲ್ಲಿ ಕೆಂಪು ಬಣ್ಣದ ದಾಳಿಂಬೆ ಹಣ್ಣು ಕೂಡ ಒಂದು.
ದಾಳಿಂಬೆ ಹಣ್ಣು ಆಂಟಿ ಆಕ್ಸಿಡೆಂಟ್, ಅಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದು ನಿಮ್ಮ ರೋಗ ನಿರೋಧಕ ಶಕ್ತಿಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ಮಧುಮೇಹ, ರಕ್ತದೊತ್ತಡವನ್ನು ಸುಧಾರಿಸುವುದರ ಜೊತೆ ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.ಹಾಗಾದರೆ ದಾಳಿಂಬೆ ಮಾಡುವ ಜಾದುಗಳ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿದೆ ಮಾಹಿತಿ.
೧. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ದಾಳಿಂಬೆಯಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದು ಸಾಕಷ್ಟು ಫೈಬರ್ ಅನ್ನು ಹೊಂದಿರುವುದರಿಂದ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.ನಿಮಗೆ ನೆನಪಿರಲಿ, ದಾಳಿಂಬೆ ಬೀಜಗಳನ್ನು ತಿನ್ನುವುದರಿಂದ ಮಾತ್ರ ಫೈಬರ್ ಅನ್ನು ಪಡೆಯುತ್ತೀರಿ, ಜ್ಯೂಸ್‌ಗಳಿಂದಲ್ಲ.
೨. ನಿಮ್ಮ ರಕ್ತವನ್ನು ತೆಳುಗೊಳಿಸುತ್ತದೆ
ದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ರಕ್ತವನ್ನು ತೆಳುವಾಗುವಂತೆ ಕಾರ್ಯ ನಿರ್ವಹಿಸುತ್ತವೆ.ದಾಳಿಂಬೆ ಬೀಜಗಳು ನಿಮ್ಮ ರಕ್ತದ ಪ್ಲೇಟ್‌ಲೆಟ್‌ಗಳು ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.ಅಲ್ಲದೆ, ದಾಳಿಂಬೆಯ ಸೇವನೆಯಿಂದ ಗಾಯವನ್ನು ಗುಣಪಡಿಸುತ್ತದೆ.ಹೃದಯ, ಅಪಧಮನಿಗಳು ಅಥವಾ ಆಂತರಿಕ ಹೆಪ್ಪುಗಟ್ಟುವಿಕೆಯಿಂದ ಕಾಪಾಡುತ್ತದೆ.
೩. ಚರ್ಮವನ್ನು ಬಿಳುಪಾಗಿಸುತ್ತದೆ
ದಾಳಿಂಬೆಯನ್ನು ನೈಸರ್ಗಿಕ ಚರ್ಮದ ಟೋನರ್ ಆಗಿ ಕಾರ್ಯ ನಿರ್ವಹಿಸುತ್ತದೆ.ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು ತೊಳೆದ ನಂತರ ನೀವು ಸ್ವಲ್ಪ ದಾಳಿಂಬೆ ರಸವನ್ನು ಹೊರತೆಗೆಯಬಹುದು ಮತ್ತು ಸ್ವಲ್ಪ ಆಪಲ್ ಸೈಡರ್ ವಿನೆಗರ್‌ನೊಂದಿಗೆ ಮಿಶ್ರಣ ಮಾಡಬಹುದು.ಈ ಮಿಶ್ರಣವನ್ನು ನೀವು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ.ಇದನ್ನು ವಾರಕ್ಕೆ ೨ ರಿಂದ ೩ ಬಾರಿ ಪುನರಾವರ್ತಿಸಿ.ಹೀಗೆ ಮಾಡುವುದರಿಂದ ನಿಮ್ಮ ಚರ್ಮಕ್ಕೆ ವಿಶೇಷವಾದ ಹೊಳಪು ಮತ್ತು ಬಣ್ಣ ದೊರೆಯುತ್ತದೆ.
೪. ಹೃದಯದ ಆರೋಗ್ಯ ಮತ್ತು ಮಧುಮೇಹವನ್ನು ನಿರ್ವಹಣೆ ಮಾಡುತ್ತದೆ
ದಾಳಿಂಬೆಯಲ್ಲಿನ ಫೈಬರ್ ಅನ್ನು ಪಡೆಯುವುದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೇ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.ಇದರಲ್ಲಿನ ಪೊಟ್ಯಾಶಿಯಮ್ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಟೈಪ್ ೨ ಮಧುಮೇಹ ಹೊಂದಿರುವವರು ದಾಳಿಂಬೆಯ ಸೇವನೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ.ದಾಳಿಂಬೆಯಲ್ಲಿನ ಕೆಲವು ಸಂಯಕ್ತಗಳು ಉತ್ತಮ ರಕ್ತದಲ್ಲಿನ ಸಕ್ಕರೆಯ ಮಟ್ಟಗಳೊಂದಿಗೆ ಸಂಬಂಧವನ್ನು ಹೊಂದಿರಬಹುದು.ಹಾಗಾಗಿ ಮಧುಮೇಹ ಹೊಂದಿರುವವರು ದಾಳಿಂಬೆಯನ್ನು ಆಗಾಗ್ಗೆ ಸೇವನೆ ಮಾಡುತ್ತಾ ಇರಿ.
೫. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ದಾಳಿಂಬೆ ಹಣ್ಣು ಕೂಡ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡುತ್ತದೆ.ಮುಖ್ಯವಾಗಿ ಅಸ್ಥಿ ಸಂಧಿವಾತದಂತಹ ರೋಗ ನಿರೋಧಕ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವವರು ದಾಳಿಂಬೆಯ ಸೇವನೆ ಮಾಡುವುದು ಒಳ್ಳೆಯದು.ಒಂದು ಅಧ್ಯಯನದ ಪ್ರಕಾರ, ನಿಮ್ಮ ಸ್ಮರಣಾ ಶಕ್ತಿಯನ್ನು ಹೆಚ್ಚಿಸಲು ದಾಳಿಂಬೆ ನೆರವಾಗುತ್ತದೆ.ಹಾಗಾಗಿ ಪ್ರತಿನಿತ್ಯ ನಿಮ್ಮ ಮಕ್ಕಳಿಗೆ ದಾಳಿಂಬೆಯನ್ನು ಸೇವಿಸಲು ಸೂಚಿಸಿ.
೬. ಗರ್ಭಿಣಿಯರಿಗೆ ಒಳ್ಳೆಯದು
ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಯಾವುದೇ ಕಾರಣಕ್ಕೂ ಕೆಲವು ಹಣ್ಣುಗಳನ್ನು ಸೇವನೆ ಮಾಡುವುಂತಿಲ್ಲ.ಅವುಗಳಲ್ಲಿ ನೇರಳೆ ಹಣ್ಣು, ಅನಾನಸ್ ಇನ್ನು ಅನೇಕ.ದಾಳಿಂಬೆ, ಸೇಬು, ಸ್ಟ್ರಾಬೆರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಮಗುವು ಆರೋಗ್ಯಕರವಾಗಿ ಬೆಳೆಯುತ್ತದೆ.ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ಕಬ್ಬಿಣದ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ.ಅಲ್ಲದೆ, ಆರೋಗ್ಯಕರವಾದ ಮೂಳೆಗಳನ್ನು ಕಾಪಾಡಿಕೊಳ್ಳಲು ವಿಟಮಿನ್ ಕೆ ನೆರವಾಗುತ್ತದೆ.