ಬಿರುಕು/ಒಣ ತುಟಿ ಹಾಗು ಕಪ್ಪಾಗಿರುವ ತುಟಿಗಳಿಗೆ ಈ ಮನೆಮದ್ದು ಮಾಡಿ!

ಚಳಿಗಾಲದಲ್ಲಿ ಅನೇಕರಿಗೆ ಮುಖ ಒದೆಯುವುದು ಮತ್ತು ತುಟಿ ಒದೆಯುವುದು ಕಂಡು ಬರುತ್ತದೆ. ತುಟಿ ಸ್ವಚ್ಛವಾಗಿ ಮತ್ತು ಸ್ಮೋತ್ ಆಗಿ ಇದ್ದರ್ಡ್ ನಿಮ್ಮ ಅರೋಗ್ಯ ಕೂಡ ಚೆನ್ನಾಗಿ ಇದೆ ಎಂದು ಅರ್ಥ.ಹಾಗಾಗಿ ತುಟಿ ಯಾವಾಗಲು ಸ್ಮೂತ್ ಆಗಿ ಇರಬೇಕು.ಕೆಲವರಿಗೆ ಚಳಿಗಾಲದಲ್ಲಿ ಬಾಯಾರಿಕೆ ಆಗುವುದಿಲ್ಲ. ಆದ್ದರಿಂದ ನೀರು ಸಹ ಕುಡಿಯುವುದಿಲ್ಲ. ಚರ್ಮ, ತುಟಿ ಡ್ರೈ ಅದರೆ 4 ರಿಂದ 5 ಲೀಟರ್ ನೀರು ಕುಡಿಯಲೇ ಬೇಕು.

ತುಟಿಯಲ್ಲಿ ಕೆಲವೊಂದು ಭಾರಿ ಸಿಪ್ಪೆ ತರ ಬರುತ್ತದೆ. ಇದು ಡೆಡ್ ಸ್ಕಿನ್ ಎಂದು ಹೇಳುತ್ತಾರೆ.ಇದಕ್ಕೆ ನ್ಯಾಚುರಲ್ ಸ್ಕ್ರಾಬ್ ಮನೆಯಲ್ಲಿಯೇ ತಯಾರಿ ಮಾಡಿಕೊಳ್ಳಬಹುದು. ಒಂದು ಬೌಲ್ ನಲ್ಲಿ ಜೇನು ತುಪ್ಪ ಮತ್ತು ವೈಟ್ ಶುಗರ್ ಹಾಕಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿ ನಿಧಾನವಾಗಿ ಸ್ಕ್ರಾಬ್ ಮಾಡಿದರೆ ಡೆಡ್ ಸ್ಕಿನ್ ಹೋಗುತ್ತದೆ.ನಂತರ ನ್ಯಾಚುರಲ್ ಕೊಕೊನಟ್ ಆಯಿಲ್ ಅನ್ನು ಹಚ್ಚಿದರೆ ಒಳ್ಳೆಯದು.

ಇನ್ನು ತುಟಿ ಯಾವಾಗಲು ಹೈಡ್ರಾಟೆಡ್ ಆಗಿರಬೇಕು ಎಂದರೆ ಜೇನುಮೇಣ ತೆಗೆದುಕೊಂಡು ಕೋಕೋನಟ್ ಆಯಿಲ್ ಹಾಕಿದರೆ ಲಿಪ್ ಬಾಮ್ ಆಗುತ್ತದೆ.ಇದನ್ನು ಪ್ರತಿದಿನ ಬಳಸಿದರೇ ಉತ್ತಮ ಫಲಿತಾಂಶ ಸಿಗುತ್ತದೆ.ಮುಖ್ಯವಾಗಿ ಹೆಚ್ಚಾಗಿ ನೀರು ಕುಡಿಯಬೇಕು, ತರಕಾರಿ ಹಣ್ಣಿನ ಸೇವನೆ ಮಾಡಬೇಕು.

Leave a Comment