ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನ ಮಹತ್ವದ ಸಭೆ

ಹುಬ್ಬಳ್ಳಿ: ಸಿದ್ಧರಾಮೋತ್ಸವ ಕಾರ್ಯಕ್ರದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ರಾತ್ರಿ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ‘ರಾಜಕೀಯ ವ್ಯವಹಾರಗಳ ಸಮಿತಿ’ ಸಭೆಯಲ್ಲಿ ಕಾಂಗ್ರೆಸ್‌‌ ರಾಷ್ಟ್ರೀಯ ನಾಯಕರಾದ @RahulGandhi, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @kcvenugopalmp ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿಧಾನಸಭೆ ವಿಪಕ್ಷ ನಾಯಕರಾದ @siddaramaiah, ವಿಧಾನ ಪರಿಷತ್ ವಿಪಕ್ಷ ನಾಯಕರಾದ @HariprasadBK2 ಉಪಸ್ಥಿತರಿದ್ದರು. pic.twitter.com/OGpYcSQd2k — Karnataka Congress (@INCKarnataka) August … Read more

Asia Cup 2022: ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ, ಆ.28ಕ್ಕೆ ಭಾರತ-ಪಾಕ್ ಮುಖಾಮುಖಿ

ನವದೆಹಲಿ: 2022ನೇ ಸಾಲಿನ 15ನೇ ಆವೃತ್ತಿಯ ಏಷ್ಯಾಕಪ್ ವೇಳಾಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿಗೆ ಡೇಟ್ ಫಿಕ್ಸ್ ಆಗಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಒಟ್ಟು 13 ಟಿ-20 ಪಂದ್ಯಗಳು ನಡೆಯಲಿವೆ. ಆ.27ರಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ನಡುವೆ ಏಷ್ಯಾಕಪ್ ಉದ್ಘಾಟನಾ ಪಂದ್ಯ ನಡೆಯಲಿದೆ. ಆ.28ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಸೆಪ್ಟೆಂಬರ್ 11ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: CWG Cycling 2022: ಪದಕ … Read more

ಹಬ್ಬದ ಸೀಸನ್‌ನಲ್ಲಿ ಸಾರ್ವಜನಿಕರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುವ ನಿರೀಕ್ಷೆ

ನವದೆಹಲಿ: ಆಗಸ್ಟ್ ತಿಂಗಳಲ್ಲಿ ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ, ರಕ್ಷಾಬಂಧನ ಸೇರಿದಂತೆ ಹಲವು ಹಬ್ಬಗಳಿವೆ. ಹಬ್ಬದ ಸೀಸನ್‌ನಲ್ಲಿ ಸಾರ್ವಜನಿಕರಿಗೆ ಶುಭ ಸುದ್ದಿಯೊಂದು ಸಿಗಲಿದೆ. ಜನ ಸಾಮಾನ್ಯರಿಗೆ ಪರಿಹಾರ ನೀಡಲು ಸರ್ಕಾರ ಯೋಜನೆ ರೂಪಿಸಿದ್ದು ಹಬ್ಬದ ಋತುವಿನಲ್ಲಿ ಅಡುಗೆ ಅನಿಲ ದರವು ಮೊದಲಿಗಿಂತ ಅಗ್ಗವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಬ್ಬದ ಋತುವಿನಲ್ಲಿ ಬೇಡಿಕೆಯ ಹೊರತಾಗಿಯೂ, ಖಾದ್ಯ ತೈಲವು ಅಗ್ಗವಾಗಬಹುದು. ಇದಕ್ಕಾಗಿ ಸರ್ಕಾರ ಆಮದುದಾರರು, ಉತ್ಪಾದಕರು ಮತ್ತು ಮಾರುಕಟ್ಟೆ ಕಂಪನಿಗಳ ಸಭೆ ಕರೆದಿದೆ. ಗುರುವಾರ ಅಂದರೆ ಆಗಸ್ಟ್ 4ರಂದು ಈ ನಿಟ್ಟಿನಲ್ಲಿ ಆಹಾರ … Read more

ಸಿದ್ಧರಾಮೋತ್ಸವಕ್ಕೆ ಹೊರಟ ಕ್ರೂಸರ್ ಪಲ್ಟಿ, ಓರ್ವ ಸಾವು ನಾಲ್ವರಿಗೆ ಗಾಯ

ಬಾಗಲಕೋಟೆ: ಸಿದ್ಧರಾಮೋತ್ಸವಕ್ಕೆ ಹೊರಟ ಕ್ರೂಸರ್ ಪಲ್ಟಿಯಾಗಿದ್ದರಿಂದಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ಗಾಯಗೊಂಡಿರುವ ಘಟನೆ ಬಾದಾಮಿ ತಾಲೂಕಿನ ಹೂಲಗೇರಿ ಸಮೀಪ ನಡೆದಿದೆ.ಮೃತಪಟ್ಟಿರುವ ಯುವಕನನ್ನು ಪ್ರಕಾಶ್ ಬಡಿಗೇರ್ ಎಂದು ತಿಳಿದುಬಂದಿದೆ. ಈ ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕೆರೂರು ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಮೃತಪಟ್ಟಿರುವ ಪ್ರಕಾಶ್ ಬಡಿಗೇರ್ (34) ಮುಧೋಳ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮವರು ಎನ್ನಲಾಗಿದೆ.ಇದೆ ವೇಳೆ ಗಾಯಗೊಂಡವರನ್ನು ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆಗೆ ಈ ದುರ್ಘಟನೆಯ ಬಗ್ಗೆ ಮಾಜಿ … Read more

Digital Strike: 348 ಮೊಬೈಲ್ ಆಪ್ ಗಳ ಮೇಲೆ ಭಾರತ ಸರ್ಕಾರದ ನಿಷೇಧ, ಚೀನಾ ಆಪ್ ಗಳು ಕೂಡ ಇದರಲ್ಲಿ ಶಾಮೀಲಾಗಿವೆ

Digital Strike By Government Of India – ಭಾರತ ಸರ್ಕಾರವು 300 ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಪಿಟಿಐ ವರದಿಯ ಪ್ರಕಾರ, ಚೀನಾ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಅಭಿವೃದ್ಧಿಗೊಂಡ 348 ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ಗುರುತಿಸಿದೆ, ನಾಗರಿಕರ ವಿವರಗಳನ್ನು ಸಂಗ್ರಹಿಸಿ ಮತ್ತು ಅನಧಿಕೃತ ರೀತಿಯಲ್ಲಿ ವಿದೇಶಕ್ಕೆ ಕಳುಹಿಸಿದ್ದಕ್ಕಾಗಿ ಈ ಆಪ್ ಗಳನ್ನೂ ನಿರ್ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಲೋಕಸಭೆಯಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು … Read more

ಮಂಕಿಪಾಕ್ಸ್ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿಎಂ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮಂಕಿಪಾಕ್ಸ್ ಹರಡದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಅವರು ಇಂದು ಮಂಕಿಪಾಕ್ಸ್ ಕುರಿತಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನೀಡಿದ ಸೂಚನೆಗಳು 1. ದೇಶದಲ್ಲಿ ಆರು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಸೋಂಕಿತರ ಪರೀಕ್ಷೆಗೆ ಸೂಕ್ತ ಕ್ರಮ ವಹಿಸಬೇಕು.  2. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಂತೆ ಸೋಂಕು ಧೃಢಪಟ್ಟ ವ್ಯಕ್ತಿಗಳನ್ನು 21 ದಿನಗಳ ಕ್ವಾರಂಟೈನ್ ಮಾಡುವುದು ಸೇರಿದಂತೆ ಅಗತ್ಯ … Read more

Mangal Gochar 2022: ಒಂದು ವಾರದ ಬಳಿಕ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ

ಮಂಗಳ ಗೋಚಾರ ಪ್ರಭಾವ: ನವಗ್ರಹಗಳಲ್ಲಿ ಕಮಾಂಡರ್ ಗ್ರಹ ಎಂದು ಪರಿಗಣಿಸಲಾಗಿರುವ ಮಂಗಳ ಗ್ರಹವು ಆಗಸ್ಟ್ 10ರಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರಸ್ತುತ ಮೇಷ ರಾಶಿಯಲ್ಲಿರುವ ಮಂಗಳನು ಆಗಸ್ಟ್ 10ರ ರಾತ್ರಿ 9:32 ಕ್ಕೆ ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ಮಂಗಳನು ಕೆಲವು ರಾಶಿಯ ಜನರ ಜೀವನದ ಮೇಲೆ ವಿಶೇಷ ಪರಿಣಾಮ ಬೀರಲಿದ್ದಾನೆ ಎಂದು ಹೇಳಲಾಗುತ್ತಿದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಮಂಗಳನು ಉತ್ತಮ ಸ್ಥಾನದಲ್ಲಿದ್ದರೆ ಅವರು ನಿರ್ಭೀತರಾಗಿ ಇರುತ್ತಾರೆ. ಪ್ರತಿ ಕಾರ್ಯದಲ್ಲೂ … Read more

Viral Video: ಜೀನ್ಸ್ ತೊಟ್ಟು ಯುವತಿ ಕೆನ್ನೆಗೆ ಮುತ್ತಿಕ್ಕುವ ಚಿಂಪಾಂಜಿ

chimpanzee in jeans: ಜೀನ್ಸ್ ತೊಟ್ಟಿರುವ ಚಿಂಪಾಂಜಿಯೊಂದು ಮಹಿಳೆಗೆ ಮುತ್ತಿಕ್ಕುತ್ತಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಯಾವಾಗಲೂ ತೀವ್ರವಾದ ಭಾವನೆಗಳನ್ನು ಪ್ರದರ್ಶಿಸುವುದು ಕೇವಲ ಮನುಷ್ಯ ಮಾತ್ರವಲ್ಲ, ಪ್ರಾಣಿಗಳು ಸಹ ತಮ್ಮ ಮಮತೆಯನ್ನು ವ್ಯಕ್ತಪಡಿಸುತ್ತವೆ.  Written by – Chetana Devarmani | Last Updated : Aug 3, 2022, 03:08 PM IST Source link

Siddaramotsava: ‘ಕಾಂಗ್ರೆಸ್ಸಿಗರೇ ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ!?’

ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜಿಸಿರುವ ‘ಸಿದ್ದರಾಮೋತ್ಸವ ಅಮೃತ ಮಹೋತ್ಸವ’ ಕಾರ್ಯಕ್ರಮವನ್ನು ಟೀಕಿಸಿರುವ ಬಿಜೆಪಿ, ‘ಕಾಂಗ್ರೆಸ್ಸಿಗರೇ ಸೂತಕದ ಮನೆಯಲ್ಲಿ ಸಂಭ್ರಮದ ವಾತಾವರಣ ಎಷ್ಟು ಸರಿ!?’ ಎಂದು ಪ್ರಶ್ನಿಸಿದೆ. #ಜನವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯ ಅಮೃತ ಮಹೋತ್ಸವ ಮತ್ತು ಕರ್ನಾಟಕ. ರಾಜ್ಯದಲ್ಲಿ ಮೂವರು ಹತ್ಯೆಗೀಡಾಗಿದ್ದಾರೆ, ಕಳೆದೆರೆಡು ದಿನಗಳಲ್ಲಿ 11 ಸಾವು ಸಂಭವಿಸಿದೆ ಮತ್ತು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಕಾಂಗ್ರೆಸ್ಸಿಗರೇ ಸೂತಕದ … Read more