ರಾಜ್ಯದಲ್ಲಿ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ Source link

JioFi ಖರೀದಿಯ ಮೇಲೆ ರೂ.1500 ಕ್ಯಾಶ್ ಬ್ಯಾಕ್, ಇಂದೇ ಈ ಅದ್ಭುತ ಕೊಡುಗೆಯ ಲಾಭ ಪಡೆಯಿರಿ

JioFi Cashback Offer : JioFi ಎನ್ನುವುದು Jio ಕಂಪನಿಯ ವೈರ್‌ಲೆಸ್ ಹಾಟ್‌ಸ್ಪಾಟ್ ಸಾಧನವಾಗಿದ್ದು, ಇದು 4G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಾಧನದಲ್ಲಿ ಜಿಯೋ ಸಿಮ್ ಇರುತ್ತದೆ, ಅದನ್ನು ರೀಚಾರ್ಜ್ ಮಾಡಬಹುದು ಮತ್ತು ಡೇಟಾವನ್ನು ಪಡೆದುಕೊಳ್ಳಬಹುದು. ನೀವೂ ಕೂಡ ಈ ಸಾಧನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಅದ್ಭುತ ಕೊಡುಗೆಯನ್ನು ತಪ್ಪಿಸಿಕೊಳ್ಳಬೇಡಿ. ಏಕೆಂದರೆ, ಪ್ರಸ್ತುತ ಕಂಪನಿಯು ಈ ಸಾಧನ ಖರೀದಿಯ ಮೇಲೆ ನೇರವಾಗಿ 1500 ರೂಪಾಯಿಗಳ ಕ್ಯಾಶ್ಬ್ಯಾಕ್ ಅನ್ನು ನೀಡುತ್ತಿದೆ.  ನೀವು 2,800 ರೂಪಾಯಿ ಮೌಲ್ಯದ JioFi ಅನ್ನು … Read more

August Grah Gochar 2022: ಆಗಸ್ಟ್ ನಲ್ಲಿ ಈ ದೊಡ್ಡ ಗ್ರಹಗಳು ಕೆಲ ರಾಶಿಗಳ ಜನರ ಭಾಗ್ಯದ ಬಾಗಿಲನ್ನೇ ತೆರೆಯಲಿವೆ

Lucky Zodiac Sign For August 2022: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿದಾಗ ಅದರ ಶುಭ ಹಾಗೂ ಅಶುಭ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಉಂಟಾಗುತ್ತದೆ. ಇನ್ನೇನು ಆಗಸ್ಟ್ ತಿಂಗಳು ಆರಂಭಗೊಳ್ಳುತ್ತಲೇ ಇದೆ. ಹೀಗಿರುವಾಗ ಮತ್ತೆ ಕೆಲ ಗ್ರಹಗಳು ತನ್ನ ಸ್ಥಾನವನ್ನು ಪಲ್ಲಟಗೊಳಿಸುತ್ತಿವೆ. ಈ ಗ್ರಹಗಳ ರಾಶಿ ಪರಿವರ್ತನೆ ಕೆಲ ರಾಶಿಗಳ ಜಾತಕದವರ ಮೇಲೆ ಗೋಚರಿಸಲಿದೆ. ಆಗಸ್ಟ್ ತಿಂಗಳಿನಲ್ಲಿ ಒಟ್ಟು 4 ದೊಡ್ಡ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸಲಿವೆ. … Read more

ಕಾಬೂಲ್‌ನಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿ ಹತ್ಯೆ

ಅಯ್ಮನ್ ಅಲ್ ಝವಾಹಿರಿ ಹತ್ಯೆ :  ಕಾಬೂಲ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕ ಅಯ್ಮನ್ ಅಲ್-ಝವಾಹಿರಿಯನ್ನು ಹತ್ಯೆಗೈದಿರುವುದಾಗಿ ಅಮೇರಿಕಾ ಅಧ್ಯಕ್ಷ ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ. ಯುಎಸ್ ಅಧಿಕಾರಿಗಳ ಪ್ರಕಾರ, ಜುಲೈ 31 ರಂದು ಕಾಬೂಲ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕನನ್ನು ಕೊಂದಿರುವುದಾಗಿ ಮಾಹಿತಿ ಲಭ್ಯವಾಗಿದೆ. 71ರ ಹರೆಯದ ಝವಾಹಿರಿ ಒಂದು ಕಾಲದಲ್ಲಿ ಒಸಾಮಾ ಬಿನ್ ಲಾಡೆನ್ ಅವರ ವೈಯಕ್ತಿಕ ವೈದ್ಯರಾಗಿ ಕೆಲಸ ಮಾಡಿದ್ದರು. ಒಸಾಮಾ ಬಿನ್ ಲಾಡೆನ್‌ನನ್ನು ಕೊಂದ 11 ವರ್ಷಗಳ ನಂತರ … Read more

Kaal Sarp Dosh: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಹೆದರಬೇಡಿ, ಊಹೆಗೂ ಮೀರಿ ಲಾಭ ನಿಮ್ಮದಾಗುತ್ತದೆ

Kaal Sarp Dosh Benefits: ಜೋತಿಷ್ಯ ಶಾಸ್ತ್ರದ ಪ್ರಾಚೀನ ಗ್ರಂಥಗಳಲ್ಲಿ ಕಾಲಸರ್ಪ ದೋಷದ ಯಾವುದೇ ಉಲ್ಲೇಖವಿಲ್ಲ. ಕಳೆದ ಸುಮಾರು 100 ವರ್ಷಗಳಲ್ಲಿ ಇದು ಪ್ರಚಲಿತದಲ್ಲಿ ಬಂದಿದೆ. ಈ ಯೋಗದ ಕಾರಣ ವ್ಯಕ್ತಿಯ ಜೀವನದಲ್ಲಿ ಅನಾವಶ್ಯಕವಾಗಿ ಕೆಲ ಶಾರೀರಿಕ ಹಾಗೂ ಮಾನಸಿಕ ಪೀಡೆಗಳು ಎದುರಾಗುತ್ತವೆ ಎನ್ನಲಾಗುತ್ತದೆ. ಈ ಯೋಗದ ವಿಪರೀತ ಸ್ಥಿತಿಯ ಕಾರಣ ವ್ಯಕ್ತಿಗೆ ಜೀವನದಲ್ಲಿ ಎಲ್ಲಾ ರೀತಿಯ ಪರಿಶ್ರಮದ ಹೊರತಾಗಿಯೂ ಕೂಡ ಅನೇಕ ದುಃಖಗಳು ಎದುರಾಗುತ್ತವೆ. ಆದರೆ, ಒಂದು ವೇಳೆ ವ್ಯಕ್ತಿಯ ಜಾತಕದಲ್ಲಿ ರಾಹುವಿನ ಸ್ಥಿತಿ ಅನುಕೂಲಕರವಾಗಿದ್ದರೆ, … Read more

‘ಕರಾವಳಿ ತ್ರಿವಳಿ ಕೊಲೆ ನೈಜ ಹಂತಕರನ್ನು ಬಂಧಿಸದಿದ್ದರೆ ಮಂಗಳೂರು ಡಿಸಿ ಕಚೇರಿ ಎದುರು ಸತ್ಯಾಗ್ರಹ’

ಮಂಗಳೂರು: ಪ್ರವೀಣ್ ನೆಟ್ಟಾರು, ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲಿ ಸರಿಯಾದ ರೀತಿ ತನಿಖೆ ಆಗದಿದ್ದರೆ, ಮೂರು ಪ್ರಕರಣಗಳಲ್ಲಿ ನೈಜ ಆರೋಪಿಗಳನ್ನು ಆಗಸ್ಟ್ 5 ರೊಳಗೆ ಬಂಧಿಸದಿದ್ದರೆ ಮರುದಿನದಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ  ಸತ್ಯಾಗ್ರಹ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಇತ್ತೀಚೆಗೆ ಹತ್ಯೆಯಾದ ಈ ಮೂವರು ಯುವಕರ ಮನೆಗಳಿಗೆ ಇಂದು ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ನಂತರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿಕೆ, … Read more

ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡ..!

ನವದೆಹಲಿ: ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡವು ಕಳೆದ ದಿನ ನ್ಯೂಜಿಲೆಂಡ್ ಅನ್ನು 16-13 ರಿಂದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿತ್ತು.ಇದೀಗ ಸೌತ್‌ ಆಫ್ರಿಕಾ ವಿರುದ್ಧ ಕಣಕ್ಕಿಳಿದಿದ್ದ ತಂಡವು ಚಿನ್ನದ ಪದಕವನ್ನು ಗೆದ್ದಿದೆ.ಈ ಪದಕ ಪಡೆಯುವ ಮೂಲಕ ಭಾರತೀಯ ಪಡೆ 10ನೇ ಪದಕವನ್ನು ತನ್ನ ಕೊರಳಿಗೆ ಏರಿಸಿಕೊಂಡಿದೆ.ಇನ್ನು ಈ ಸಾಧನೆ ಐತಿಹಾಸಿಕವಾಗಿದ್ದು, ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಅವರ ತಂಡ ಕ್ವಾರ್ಟೆಟ್ … Read more

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ತನಿಖೆ ಮಾಡಲು ಪೊಲೀಸರಿಗೆ ಮುಕ್ತ ಅಧಿಕಾರ: ಸಿಎಂ ಬೊಮ್ಮಾಯಿ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅಧಿಕಾರ ನೀಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಬೇಗನೆ ಕೊಲೆಗಡುಕರ ಪತ್ತೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  ಇಂದು ಬೆಂಗಳೂರಿನ ತಮ್ಮ ಆರ್ ಟಿ ನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎನ್‌ಐಎಗೆ ಪ್ರಕರಣ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ತಾಂತ್ರಿಕ ಹಾಗೂ ಕಾಗದಪತ್ರಗಳ ಕೆಲಸ ಜಾರಿಯಲ್ಲಿದೆ. ಆದಷ್ಟು ಬೇಗನೆ ಪ್ರಕರಣವನ್ನು ಹಸ್ತಾಂತರ ಮಾಡಲಾಗುವುದು. ಅನೌಪಚಾರಿಕವಾಗಿ ಎನ್‌ಐಎಗೆ ಈಗಾಗಲೇ ತಿಳಿಸಲಾಗಿದೆ. ಕೇರಳ ಮತ್ತು … Read more

CWG 2022: ಲಾನ್ ಬೌಲ್ಸ್ ಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ಫೋರ್ಸ್: ಏಳನೇ ಪದಕ ಪಕ್ಕಾ

ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು 16-13 ರಿಂದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಭಾರತೀಯ ಪಡೆ ಏಳನೇ ಪದಕ ಪಡೆಯುವುದು ಖಚಿತಪಡಿಸಿಕೊಂಡಿದೆ. ಇದು ಐತಿಹಾಸಿಕ ಸಾಧನೆಯಾಗಿದ್ದು, ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಲಿದೆ.  ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಅವರ ತಂಡ ಕ್ವಾರ್ಟೆಟ್ ಪಂದ್ಯದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿ ಕನಿಷ್ಠ ಬೆಳ್ಳಿ ಪದಕವನ್ನು ಖಾತರಿಪಡಿಸಿಕೊಂಡಿದೆ. ಫೈನಲ್‌ನಲ್ಲಿ ಗೆದ್ದರೆ ಚಿನ್ನ ಪಕ್ಕಾ … Read more

ಇದು ಸಿದ್ದರಾಮೋತ್ಸವವಲ್ಲ ಕಾಂಗ್ರೆಸ್ ಅಂತ್ಯೋತ್ಸವ: ಬಿಜೆಪಿ ಟೀಕೆ

ಬೆಂಗಳೂರು: ಹಸಿದವರ ಹೊಟ್ಟೆಗೆ ಅನ್ನದ ಭಾಗ್ಯವಾದೆ ಎಂದು ಸಿದ್ದರಾಮಯ್ಯನವರು ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸಿಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ದುಡ್ಡು ಕೊಟ್ಟಿದ್ದನ್ನು ಮುಚ್ಚಿಟ್ಟು ತನ್ನ ಜೇಬಿನಿಂದ ದುಡ್ಡು‌ ಕೊಟ್ಟಂತೆ ಸಿದ್ದರಾಮಯ್ಯ ಪ್ರಚಾರ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಟೀಕಿಸಿರುವ ಬಿಜೆಪಿ, ಇದು ಸಿದ್ದರಾಮೋತ್ಸವವಲ್ಲ ಕಾಂಗ್ರೆಸ್‍ನ ಅಂತ್ಯೋತ್ಸವ ಎಂದು ಕುಟುಕಿದೆ. ‘ನೇಗಿಲ ಯೋಗಿಗೆ ಜಲಭಾಗ್ಯದ ಭಗೀರಥನಂತೆ! ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಸುಳ್ಳು ಹೇಳುವುದಕ್ಕೂ ಒಂದು … Read more