Soft Waxing Tips: ಮನೆಯಲ್ಲಿಯೇ ಮಾಡಿಕೊಳ್ಳಿ ಸಾಫ್ಟ್ ವ್ಯಾಕ್ಸಿಂಗ್

Soft Waxing Tips: ದೇಹದ ಅನಗತ್ಯ ಕೂದಲನ್ನು ತೆಗೆಯಲು ಮಹಿಳೆಯರು ವ್ಯಾಕ್ಸಿಂಗ್ ಮಾಡುತ್ತಾರೆ. ಆದರೆ ನೀವು ಸುಲಭವಾಗಿ ಮನೆಯಲ್ಲಿ ಸಾಫ್ಟ್ ವ್ಯಾಕ್ಸ್ ಅನ್ನು ತಯಾರಿಸಬಹುದು. ಇದರಿಂದ ನಿಮ್ಮ ದೇಹದಲ್ಲಿನ ಅನಗತ್ಯ ಕೂದಲನ್ನು ತೆಗೆಯಬಹುದು. ಮನೆಯಲ್ಲಿ ಸಾಫ್ಟ್‌ ವ್ಯಾಕ್ಸ್ ಅನ್ನು ಹೇಗೆ ತಯಾರಿಸುವುದು ಮತ್ತು ಈ ರೀತಿ ವ್ಯಾಕ್ಸಿಂಗ್ ಮಾಡುವುದರಿಂದ ಏನು ಪ್ರಯೋಜನ ಎಂದು ತಿಳಿಯೋಣ. ಸಾಫ್ಟ್‌ ವ್ಯಾಕ್ಸಿಂಗ್‌ನ ಅದ್ಭುತ ಪ್ರಯೋಜನಗಳು: ಕೈ, ಪಾದಗಳು, ಸೊಂಟದಂತಹ ಪ್ರದೇಶಗಳಿಂದ ಅನಗತ್ಯ ಕೂದಲನ್ನು ತೆಗೆದುಹಾಕುವುದು ಸುಲಭ ನೀವು ಉಗುರುಬೆಚ್ಚಗಿನ ಸಾಫ್ಟ್‌ ವ್ಯಾಕ್ಸ್‌ … Read more

ಸೌದಿ ಅರೇಬಿಯಾದಲ್ಲಿ ಪತ್ತೆಯಾಯ್ತು 8000 ವರ್ಷಗಳ ಪುರಾತನ ದೇವಾಲಯ!

ಸೌದಿ ಅರೇಬಿಯಾದಲ್ಲಿ ಸುಮಾರು 8000 ವರ್ಷಗಳಷ್ಟು ಹಳೆಯದಾದ ಧಾರ್ಮಿಕ ಸ್ಥಳ ಮತ್ತು ದೇವಾಲಯ ಪತ್ತೆಯಾಗಿದೆ. ರಿಯಾದ್‌ನ ನೈಋತ್ಯ ಭಾಗದಲ್ಲಿರುವ ಕರಾವಳಿ ನಗರದ ಉತ್ಖನನದಲ್ಲಿ ಈ ಐತಿಹಾಸಿಕ ದೇವಾಲಯದ ಶಾಸನಗಳು ಸೇರಿ ಅನೇಕ ಶಾಸನಗಳು ಕಂಡುಬಂದಿವೆ. ಸೌದಿ ಅರೇಬಿಯಾದ ಪುರಾತತ್ವ ಶಾಸ್ತ್ರಜ್ಞರ ತಂಡವು ಹೊಸ ತಂತ್ರಜ್ಞಾನದ ಯಂತ್ರಗಳೊಂದಿಗೆ ಅಲ್-ಫಾವ್ ಎಂಬ ಸ್ಥಳದಲ್ಲಿ ಈ ಧಾರ್ಮಿಕ ಕೇಂದ್ರವನ್ನು ಪತ್ತೆಹಚ್ಚಿದೆ.  ಇದನ್ನೂ ಓದಿ: ಇಸ್ಪೀಟ್ ಆಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ಅಮಾನತು ಈ ಸಂಶೋಧನೆಯಲ್ಲಿ ದೊರೆತ ಅವಶೇಷಗಳನ್ನು ಉನ್ನತ ಅಧ್ಯಯನಕ್ಕಾಗಿ ಕಳುಹಿಸಲಾಗಿದೆ. … Read more

BJP PM Candidate: 2024ರ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಘೋಷಿಸಿದ ಅಮಿತ್ ಶಾ

ನವದೆಹಲಿ: 2024ರಲ್ಲಿ ಬಿಜೆಪಿ-ಜೆಡಿಯು ಒಟ್ಟಾಗಿ ಚುನಾವಣೆ ಎದುರಿಸಲಿದ್ದು, ನರೇಂದ್ರ ಮೋದಿಯವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಬಿಜೆಪಿಯ ವಿವಿಧ ಮೋರ್ಚಾಗಳ 2 ದಿನಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   2024ರ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ರಾಜಕೀಯದಿಂದ ನಿವೃತ್ತಿ ಹೊಂದಲಿದ್ದು, ಹೊಸ ಮುಖಗಳನ್ನು ಬಿಜೆಪಿ ಕಣಕ್ಕಿಳಿಸಲಿದೆ … Read more

ಎನ್‌ಆರ್‌ಐ ಸೊಸೈಟಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌: ಹೊತ್ತಿ ಉರಿದ ಲಕ್ಷಾಂತರ ಮೌಲ್ಯದ ವಸ್ತು

ನೋಯ್ಡಾದ ಕೊಟ್ವಾಲಿ ಪ್ರದೇಶದ ಸೆಕ್ಟರ್ -45 ರಲ್ಲಿರುವ ಎನ್‌ಆರ್‌ಐ ಸೊಸೈಟಿಯ ಫ್ಲ್ಯಾಟ್ ಸಂಖ್ಯೆ 1201 ರಲ್ಲಿ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಹೊತ್ತಿನಲ್ಲೇ ಬೆಂಕಿ ಫ್ಲಾಟ್‌ಗೆ ವ್ಯಾಪಿಸಿದ್ದು, ಜನರು ಭಯಭೀತರಾಗಿದ್ದಾರೆ. ಇನ್ನು ವಿಷಯ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು.  ಇದನ್ನೂ ಓದಿ: ಚೆನ್ನೈನಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ಸುದರ್ ಪ್ರಶಸ್ತಿ’ ಸ್ವೀಕರಿಸಿದ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸುಮಾರು 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ … Read more

ಒಂದೆಡೆ ‘ಜನತಾ ಜಲಧಾರೆ’ ಮತ್ತೊಂದೆಡೆ ಕಣ್ಣೀರಧಾರೆ: ಬಿಜೆಪಿ ವ್ಯಂಗ್ಯ

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇಗೇಗೌಡರ ಸ್ಥಿತಿ ಕಂಡು ಎಚ್‍.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಕಣ್ಣೀರು ಹಾಕಿದ್ದರು. ಜೆಡಿಎಸ್ ನಾಯಕರು ಹರಿಸಿರುವ ಕಣ್ಣೀರಧಾರೆಗೆ ಬಿಜೆಪಿ ವ್ಯಂಗ್ಯವಾಡಿದೆ. #ಜೆಡಿಎಸ್‌ಕಣ್ಣೀರೋತ್ಸವ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶುಭಾಶಯಗಳು. ನಿಮ್ಮ ಜನತಾ ಜಲಧಾರೆ ಕಾರ್ಯಕ್ರಮವನ್ನು ಮೀರಿಸುವ ರೀತಿ ಇನ್ನೊಂದು ಯೋಜನೆ ರೂಪಿಸಿದ್ದೀರಿ. ಜೆಡಿಎಸ್ ಕಣ್ಣೀರಧಾರೆ ಯಶಸ್ವಿಯಾಗಲಿ!’ ಎಂದು ಟೀಕಿಸಿದೆ. ಇದನ್ನೂ ಓದಿ: ʼಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು … Read more

Ganpati Puja: ಹೀಗೆ ಗಣಪತಿ ಪೂಜೆ ಮಾಡಿದ್ರೆ ಧನಲಾಭದ ಜೊತೆ ಪ್ರತಿ ಆಸೆಯೂ ಈಡೇರುತ್ತದೆ!

ನವದೆಹಲಿ: ಆಗಸ್ಟ್ 1ರಂದು ಅಂದರೆ ಸೋಮವಾರ ಶ್ರಾವಣ ಶುಕ್ಲ ಪಕ್ಷದ ಚತುರ್ಥಿ ದಿನಾಂಕ. ಈ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ. ಗಣೇಶ ಭಕ್ತರಿಗೆ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಆತನು ಸಂತೋಷಪಡುತ್ತಾನೆ ಮತ್ತು ಬಯಸಿದ ಫಲ ನೀಡುತ್ತಾನೆಂದು ನಂಬಲಾಗಿದೆ. ಶುಭ ಕಾರ್ಯಗಳಿಗೆ ಗಣೇಶನ ಪೂಜೆ ಅಗತ್ಯ ಗಣಪತಿಯು ದೋಷನಿವಾರಣೆಗೆ ಪ್ರಸಿದ್ಧನಾಗಿದ್ದಾನೆ. ಆತನ ಪೂಜೆಯಿಂದ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಭಾರತದ ಸನಾತನ ನಂಬಿಕೆ ಪ್ರಕಾರ ಗಣೇಶನನ್ನು ಪೂಜಿಸುವುದರಿಂದ ಒಳಿತಾಗುತ್ತದೆ. ದೇವತೆಗಳನ್ನು … Read more

Hair Fall Problem: ಇದನ್ನು ತಿನ್ನುವುದರಿಂದ ನಿಮ್ಮ ಕೂದಲು ಉದುರುವುದಿಲ್ಲ, ಟ್ರೈ ಮಾಡಿ

ನವದೆಹಲಿ: ಬೇಸಿಗೆಯಲ್ಲಿ ಕೂದಲ ಬಗ್ಗೆ ಕಾಳಜಿ ವಹಿಸುವುದು ತುಂಬಾ ಕಷ್ಟ. ಇದರಿಂದ ಕೂದಲು ಉದುರುವಿಕೆಯ ಸಮಸ್ಯೆ ಮತ್ತು ಸುಡುವ ಬಿಸಿಲು ಹಾಗೂ ನೇರ ಸೂರ್ಯನ ಬೆಳಕಿನಿಂದ ಮುಖದ ಚರ್ಮವು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ದೈನಂದಿನ ಆಹಾರದಲ್ಲಿ ಈ ಹುಳಿ ಆಹಾರವನ್ನು ಸೇರಿಸಿದರೆ ಈ ಎರಡೂ ಸಮಸ್ಯೆಗಳು ಪರಿಹಾರ ಸಿಗುತ್ತದೆ. ಹುಣಸೆಹಣ್ಣು ಆರೋಗ್ಯಕ್ಕೆ ಉತ್ತಮ   ಹೌದು, ನಾವು ಹುಣಸೆ ಹಣ್ಣಿನ ಬಗ್ಗೆ ಮಾತನಾಡುತ್ತಿದ್ದೇವೆ. ಯಾವುದೇ ಆಹಾರದಲ್ಲಿ ಇದನ್ನು ಬೆರೆಸಿದಾಗ ಅದರ ರುಚಿ ಹೆಚ್ಚುತ್ತದೆ. ಹುಣಸೆಹಣ್ಣು … Read more

‘ಕಿಚ್ಚ’ನಿಗೆ ಥ್ಯಾಂಕ್ಸ್ ಹೇಳಿ ಗುಡ್ಡಿ ಫ್ರೆಂಡ್ ಭಾಸ್ಕರ್ ಬಗ್ಗೆ ರಾಜಮೌಳಿ ಟ್ವೀಟ್

ಬೆಂಗಳೂರು: ಹಾಲಿವುಡ್ ರೇಂಜ್‍ನಲ್ಲಿ ಮೂಡಿಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದೆ. ಸುಮಾರು 3200ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ರಿಲೀಸ್ ಆಗಿರುವ ‘ವಿಕ್ರಾಂತ್ ರೋಣ’ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಕನ್ನಡ, ಇಂಗ್ಲಿಷ್ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ‘ವಿಕ್ರಾಂತ್ ರೋಣ’ ಟೀಂ ಇದೀಗ ಸಿನಿಮಾ ಸಕ್ಸಸ್ ಆಗಿರುವ ಖುಷಿಯಲ್ಲಿದೆ. ಅನೇಕ ಭಾರತೀಯ ನಟ-ನಟಿಯರು, ಖ್ಯಾತ ನಿರ್ದೇಶಕರು ‘ವಿಕ್ರಾಂತ್ ರೋಣ’ ಸಿನಿಮಾ ವೀಕ್ಷಿಸಿ … Read more

Ind vs WI : ಎರಡನೇ ಟಿ20 ಪಂದ್ಯ ಗೆಲ್ಲಲು ಟೀಂ ಇಂಡಿಯಾದ Playing 11 ನಲ್ಲಿ ಭಾರಿ ಬದಲಾವಣೆ!

IND vs WI : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಅಬ್ಬರದ ಜಯ ಸಾಧಿಸಿದೆ. ಇದೀಗ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಬಯಸಿದೆ. ಇದಕ್ಕಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಎರಡನೇ ಟಿ20 ಪಂದ್ಯದ ಪ್ಲೇಯಿಂಗ್ XI ನಲ್ಲಿ ಹಲವು ದೊಡ್ಡ ಬದಲಾವಣೆಗಳಾಗಬಹುದು. ಅನೇಕ ಫ್ಲಾಪ್ ಆಟಗಾರರಿಗೆ ಗೆಟ್ ಪಾಸ್ ನೀಡುವ ಸಾಧ್ಯತೆ ಇದೆ.  ಇವರಾಗಬಹುದು ಆರಂಭಿಕ ಜೋಡಿ … Read more

ಶ್ರೀಲಂಕಾದಂತೆ ಭಾರತದಲ್ಲಿಯೂ ಜನರು ಪ್ರಧಾನಿ ನಿವಾಸಕ್ಕೆ ನುಗ್ಗುತ್ತಾರೆ: ಒವೈಸಿ

ನವದೆಹಲಿ: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಶ್ರೀಲಂಕಾದಂತೆ ಭಾರತದಲ್ಲಿಯೂ ಪ್ರಧಾನಿ ನಿವಾಸಕ್ಕೆ ಜನರು ನುಗ್ಗುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ. ‘ವೋಟ್ ಬ್ಯಾಂಕ್ ರಾಜಕಾರಣದಿಂದ ಅಭಿವೃದ್ಧಿಯಾಗಿದೆ, ಆದರೆ ಮುಸ್ಲಿಮರು ಅಭಿವೃದ್ಧಿಯಾಗಲಿಲ್ಲ. ಏಕೆಂದರೆ ಮುಸ್ಲಿಮರನ್ನು ಮತಬ್ಯಾಂಕ್ ಎಂದು ಪರಿಗಣಿಸಲೇ ಇಲ್ಲ. ಇಂದು ಶಿಕ್ಷಣವೂ ಇಲ್ಲ, ಉದ್ಯೋಗವೂ ಇಲ್ಲ. ಸಂವಿಧಾನದಲ್ಲಿ ಏನನ್ನು ಬರೆಯಲಾಗಿದೆಯೋ ಅದನ್ನು ವ್ಯತಿರಿಕ್ತಗೊಳಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವವಿದೆ. ಆದರೆ ವಾಸ್ತವ ಸ್ವರೂಪವನ್ನು ನೀಡಲು ನಮಗೆ ಸಾಧ್ಯವಾಗುತ್ತಿಲ್ಲ’ವೆಂದು ಓವೈಸಿ … Read more