ಕಾಮನ್‌ವೆಲ್ತ್ ಗೇಮ್ಸ್ 2022: 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದ ಭಾರತ

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ  2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದೆ.ಕಾಮನ್‌ವೆಲ್ತ್ ಗೇಮ್ಸ್‌ನ 10 ನೇ ದಿನ  ತನ್ನ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದ ಭಾರತೀಯ ಆಟಗಾರರು ಒಂದರ ಹಿಂದೆ ಒಂದರಂತೆ ಹಲವು ಪದಕಗಳನ್ನು ಗೆದ್ದುಕೊಂಡರು. 

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ  10ನೇ ದಿನದಂದು ನೀತು ಘಂಘಾಸ್, ಅಮಿತ್ ಪಂಘಲ್, ನಿಖತ್ ಜರೀನ್ ಮತ್ತು ಅಲ್ದೌಸ್ ಪಾಲ್ ಎದುರಾಳಿ ಆಟಗಾರರನ್ನು ಸೋಲಿಸಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟರು. ಇವರಲ್ಲದೆ ಅಬ್ದುಲ್ಲಾ ಅಬು ಬಕರ್ ಬೆಳ್ಳಿ ಪದಕ ಗೆದ್ದರು. ಅದೇ ಸಮಯದಲ್ಲಿ, ಭಾರತ ಮಹಿಳಾ ಹಾಕಿ ತಂಡ, ಸಂದೀಪ್ ಕುಮಾರ್ ಮತ್ತು ಅಣ್ಣು ರಾಣಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದು ಬೀಗಿದರು.
 
ಇದನ್ನೂ ಓದಿ- CWG 2022: ಪುರುಷರ ಟೇಬಲ್ ಟೆನ್ನಿಸ್ ಡಬಲ್ಸ್ ನಲ್ಲಿ ಶರತ್ ಕಮಲ್ ಹಾಗೂ ಸಥಿಯನ್ ಗಣಸೆಕರನ್ ಗೆ ಒಲಿದ ಬೆಳ್ಳಿ

17 ಚಿನ್ನ ಸೇರಿದಂತೆ ಒಟ್ಟು 49 ಪದಕ ತನ್ನದಾಗಿಸಿಕೊಂಡ ಭಾರತ :
2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 17 ಚಿನ್ನ, 13 ಬೆಳ್ಳಿ ಮತ್ತು 19 ಕಂಚು ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 61 ಚಿನ್ನ, 51 ಬೆಳ್ಳಿ ಮತ್ತು 52 ಕಂಚು ಸೇರಿದಂತೆ ಒಟ್ಟು 164 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.  ಇಂಗ್ಲೆಂಡ್ 52 ಚಿನ್ನ, 57 ಬೆಳ್ಳಿ ಮತ್ತು 49 ಕಂಚು ಸೇರಿದಂತೆ ಒಟ್ಟು 158 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಕೆನಡಾ 23 ಚಿನ್ನ, 29 ಬೆಳ್ಳಿ ಮತ್ತು 33 ಕಂಚು ಸೇರಿದಂತೆ ಒಟ್ಟು 85 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ- CWG 2022: ಸ್ಕ್ವ್ಯಾಷ್ ಮಿಶ್ರ ಡಬಲ್ಸ್ ನಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡ ಸೌರವ್ ಘೋಶಾಲ್-ದೀಪಿಕಾ ಪಲ್ಲಿಕಲ್ ಜೋಡಿ

ಕಾಮನ್‌ವೆಲ್ತ್ ಕ್ರೀಡಾಕೂಟದ 10ನೇ ದಿನ ಭಾರತದ ಪ್ರದರ್ಶನ:
* ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ 2-1 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು.

* ಮಹಿಳೆಯರ 48 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ನೀತು ಘಂಘಾಸ್ ಚಿನ್ನದ ಪದಕ ಗೆದ್ದಿದ್ದಾರೆ.

* ಪುರುಷರ 51 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಅಮಿತ್ ಪಂಗಲ್ ಚಿನ್ನದ ಪದಕವನ್ನು ವಶಪಡಿಸಿಕೊಂಡರು.

* ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಅಲ್ಧೌಸ್ ಪಾಲ್ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟರು.

* ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಅಬ್ದುಲ್ಲಾ ಅಬು ಬಕರ್ ಬೆಳ್ಳಿ ಪದಕ ಗೆದ್ದರು.

* ಪುರುಷರ 10 ಕಿ.ಮೀ ಓಟದ ನಡಿಗೆಯಲ್ಲಿ ಸಂದೀಪ್ ಕುಮಾರ್ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.

* ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಅಣ್ಣು ರಾಣಿ ತಮ್ಮ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment