ಮಂಗಳ ಗೋಚರ: ಆಗಸ್ಟ್ ತಿಂಗಳಲ್ಲಿ ಮಂಗಳನ ಸಂಚಾರ- 4 ರಾಶಿಯವರಿಗೆ ಗೋಲ್ಡನ್ ಡೇಸ್ ಆರಂಭ

ಮಂಗಳ ಗೋಚಾರ: ಈ ವರ್ಷ ಸಹೋದರ-ಸಹೋದರಿಯರ ಬಂಧನ ಬೆಸೆಯುವ ಪವಿತ್ರ ಹಬ್ಬ ರಕ್ಷಾಬಂಧನವನ್ನು ಆಗಸ್ಟ್ 11ರಂದು ಆಚರಿಸಲಾಗುವುದು. ಶ್ರಾವಣ  ಮಾಸದ ಹುಣ್ಣಿಮೆಯ ಆರಂಭದಲ್ಲಿ ಭದ್ರಾ ಕಾಲದ ಕಾರಣದಿಂದ ಕೆಲವರು ಆಗಸ್ಟ್ 12 ರಂದು ರಕ್ಷಾಬಂಧನವನ್ನು ಆಚರಿಸುತ್ತಾರೆ. ಇದಲ್ಲದೆ ಈ ರಕ್ಷಾಬಂಧನದ ಸಮಯದಲ್ಲಿ ಜ್ಯೋತಿಷ್ಯದಲ್ಲೂ ದೊಡ್ಡ ಬದಲಾವಣೆ ಆಗಲಿದೆ. ರಕ್ಷಾಬಂಧನದ ಒಂದು ದಿನ ಮೊದಲು ಅಂದರೆ  ಆಗಸ್ಟ್ 10, 2022 ರಂದು,  ಗ್ರಹಗಳ ಕಮಾಂಡರ್ ಮಂಗಳ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 

ಆಗಸ್ಟ್ 10 ರಂದು ಮಂಗಳನು ​​ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಆಗಸ್ಟ್ ತಿಂಗಳಲ್ಲಿ ಮಂಗಳನ ಸಂಚಾರ– 4 ರಾಶಿಯವರಿಗೆ ಸುವರ್ಣದಿನಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ…

ಮಂಗಳ ರಾಶಿ ಪರಿವರ್ತನೆ- ಈ ರಾಶಿಯವರಿಗೆ ಲಾಭ: 
ವೃಷಭ ರಾಶಿ:
ಆಗಸ್ಟ್ ತಿಂಗಳಲ್ಲಿ ಮಂಗಳನ ಸಂಚಾರವು ವೃಷಭ ರಾಶಿಯವರಿಗೆ ಬಲವಾದ ಪ್ರಗತಿಯನ್ನು ನೀಡುತ್ತದೆ. ಹೊಸ ಉದ್ಯೋಗಕ್ಕಾಗಿ ಬಯಸುತ್ತಿರುವವರಿಗೆ ಶುಭ ದಿನ. ಈ ಸಮಯದಲ್ಲಿ ಹಣದ ಹರಿವು ಹೆಚ್ಚಲಿದೆ. ವಿದೇಶದಿಂದ ಲಾಭವಾಗಲಿದೆ. ವಿವಾಹಿತರ ಜೀವನವು ಉತ್ತಮವಾಗಿರುತ್ತದೆ. 

ಇದನ್ನೂ ಓದಿ- ಇನ್ನು 48 ಗಂಟೆಗಳಲ್ಲಿ ಈ ರಾಶಿಯವರು ನಿರೀಕ್ಷಿಸಿದ್ದೆಲ್ಲಾ ಸಿಗಲಿದೆ , ಪ್ರತಿ ಹಂತದಲ್ಲೂ ಶುಕ್ರ ನೀಡಲಿದ್ದಾನೆ ಯಶಸ್ಸು

ಕರ್ಕಾಟಕ ರಾಶಿ: ಮಂಗಳ ರಾಶಿ ಪರಿವರ್ತನೆ ಯು ಕರ್ಕಾಟಕ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ತರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬಹುದು. ಈ ಸಮಯದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಂಗಳ ಸಂಚಾರವೂ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಉದ್ಯೋಗ-ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಅದರಲ್ಲೂ ವಿಶೇಷವಾಗಿ ವ್ಯಾಪಾರಸ್ಥರಿಗೆ ಸಮಯವು ತುಂಬಾ ಚೆನ್ನಾಗಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. 

ಇದನ್ನೂ ಓದಿ- ಮಲ್ಟಿ ಟಾಲೆಂಟೆಡ್ ವ್ಯಕ್ತಿತ್ವ ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು , ಯಾರ ಮುಂದೆಯೂ ಸೋಲುವುದಿಲ್ಲ

ಮಕರ ರಾಶಿ: ವೃಷಭ ರಾಶಿಯಲ್ಲಿ ಮಂಗಳನ ಪ್ರವೇಶವು ಮಕರ ರಾಶಿಯವರ ಆದಾಯ ಹೆಚ್ಚುತ್ತದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಕೈ ಹಿಡಿದ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಒಟ್ಟಾರೆಯಾಗಿ ಈ ಸಮಯವು ನಿಮ್ಮ ಅಭಿವೃದ್ಧಿಗೆ ಪೂರಕವಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment