ಇಬ್ಬರು ಸಿಬ್ಬಂದಿಯನ್ನ ರೆಡ್ ಹ್ಯಾಂಡ್ ಆಗಿ ಹಿಡಿದ ರೈತರು| Karnataka News in Kannada

ಗದಗ: ಜಿಲ್ಲೆಯಲ್ಲಿ ಗೊಬ್ಬರದ ಕೃತಕ ಅಭಾವಸೃಷ್ಟಿಯಾಗಿ ಗೊಬ್ಬರಕ್ಕಾಗಿ ರೈತರು ಪರದಾಡ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ನಕಲಿ ಗೊಬ್ಬರ ಮಾರಿ ರೈತರಿಗೆ ಮೋಸ ಮಾಡ್ತಿರೋದು ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ನಕಲಿ ಗೊಬ್ಬರ ಮಾರಾಟ ಮಾಡ್ತಿರೋದು ಕಂಡು ಬಂದಿದೆ.

ಇದನ್ನೂ ಓದಿ: ಬರ್ತಿದೆ ಹೊಚ್ಚ ಹೊಸ ಧಾರಾವಾಹಿ: ಪೂರ್ಣಿಮಾ ಎಂಟರ್‌ಪ್ರೈಸಸ್‌ನಿಂದ ತೆರೆಗೆ ಬರಲಿದೆ ʼವಿಜಯದಶಮಿʼ

ಬೆಂಗಳೂರು ಮೂಲದ ನಕಲಿ ಗೊಬ್ಬರ ತುಂಬಿದ ಲಾರಿಯನ್ನ ಅಲ್ಲಿನ ರೈತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಅಂದಹಾಗೆ ಈ ಹಿಂದೆ ಇದೇ ನಕಲಿ ಗೊಬ್ಬರವನ್ನ ಇಲ್ಲಿನ ರೈತರಿಗೆ ಮಾರಾಟ ಮಾಡಿದ್ದರು. ನಕಲಿ ಮಂಗಳಾ ಡಿ ಎಪಿ ಗೊಬ್ಬರ ಅಂತ ಸವಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಮಾರಾಟ ಮಾಡಿ ಕಾಲ್ಕಿತ್ತಿದ್ದರು.ಆದ್ರೆ ಗೊಬ್ಬರದಿಂದ ಯಾವುದೇ ರಿಸಲ್ಟ್ ಕಾಣದ ಕಾರಣ ರೈತರಿಗೆ ಅನುಮಾನ ಮೂಡಿದೆ.ಒಬ್ಬರಿಗೋ ಇಭ್ಬರು ರೈತರಿಗೆ ಆಗಿದ್ದರೆ ಸುಮ್ಮನಿರಬಹುದಿತ್ತು. ಆದ್ರೆ ನೂರಾರು ರೈತರಿಗೆ ಈ ನಕಲಿ ಗೊಬ್ಬರ ಮಾರಾಟ ಮಾಡಿದ್ದರಿಂದ ರೈತರು ರೊಚ್ಚಿಗೆದ್ದಿದ್ದರು.

ಇದನ್ನೂ ಓದಿ: ಇಟಲಿ & ಬಾಂಗ್ಲಾ ಫ್ಯಾನ್ಸ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್..!

ಹೀಗಾಗಿ ಅದೇ ಮಾರಾಟ ಮಾಡಿದ್ದ ಸಿಬ್ಬಂದಿಗೆ ಕರೆ ಮಾಡಿ ಮತ್ತೊಂದು ಸುಮಾರು 500 ಚೀಲದ ಗೊಬ್ಬರ ಲೋಡ್ ಬೇಕು ಅಂತ ತಿಳಿಸಿದ್ದಾರೆ. ಮೊದಲೇ ಹಣ ಕೂಡಿಸಿ ನಕಲಿ ಮಾರಾಟದ ಕಂಪನಿ ಸಿಬ್ಬಂದಿಗೆ ಕೈಗೆ ಇಟ್ಟ ಬಳಿಕ ಗೊಬ್ಬರದ ಲಾರಿಯನ್ನ ಗ್ರಾಮಕ್ಕೆ ತಂದಿದ್ದಾರೆ. ಬಳಿಕ ಲಾರಿ ಸಮೇತ ಮಾರಾಟ ಮಾಡಲು ಬಂದಿದ್ದ ಸಿಬ್ಬಂದಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಡಾಲಿ ʼಮಾನ್ಸೂನ್‌ ರಾಗʼ ಬಿಡುಗಡೆಗೆ ದಿನಗಣನೆ: ಅಭಿಮಾನಿಗಳಲ್ಲಿ ಮನೆ ಮಾಡಿದ ಸಂತಸ

ಸ್ಥಳಕ್ಕೆ ರೋಣ ಕೃಷಿ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಇನ್ನು ಇದು ಮೇಲ್ನೋಟಕ್ಕೆ ನಕಲಿ ಗೊಬ್ಬರವಾಗಿದ್ದು ಈ ಬಗ್ಗೆ ಬೆಂಗಳೂರು ಪ್ರಯೋಗಾಲಯಕ್ಕೆ ಕಳಿಸಿದ್ದೇವೆ.ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಈ ಬಗ್ಗೆ ಮತ್ತೆ ಎಲ್ಲಿಯಾದರೂ ಈ ರೀತಿ ಅನುಮಾನ ಬರುವ ರೀತಿಯಲ್ಲಿ ಗೊಬ್ಬರ ಮಾರಾಟಗಾರರು ಕಂಡು ಬಂದರೆ ಅವರನ್ನ ಹಿಡಿದುಕೊಡಿ ಅಂತ ರೈತರಲ್ಲಿ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 



Source link

Leave a Comment