Dream Interpretation Ancestors : ಕನಸಿನಲ್ಲಿ ಪೂರ್ವಜರನ್ನು ಕಂಡರೆ ಅದು ಭವಿಷ್ಯದಲ್ಲಿ ಘಟಿಸುವ ಘಟನೆಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಪೂರ್ವಜರು ಕನಸಿನಲ್ಲಿ ಬಂದರೆ ಅದನ್ನು ನಿರ್ಲಕ್ಷಿಸಬಾರದು ಎಂದು ಹೇಳಲಾಗುತ್ತದೆ. ಬದಲಿಗೆ ಅದರ ಅರ್ಥವನ್ನು ಅರ್ಥಮಾಕೊಂಡು ಅದರಂತೆ ನಡೆದುಕೊಳ್ಳಬೇಕು. ಪೂರ್ವಜರು ಕನಸಿನಲ್ಲಿ ಬಂದು ನಮ್ಮ ಜೀವನಕ್ಕೆ ಸಂಬಂಧಿಸಿದ ವಿಶೇಷ ಘಟನೆಗಳ ಬಗ್ಗೆ ಸುಳಿವು ನೀಡುತ್ತಾರೆ.
ನಿಮ್ಮ ಕನಸಿನಲ್ಲಿ ಪೂರ್ವಜರು ಅಥವಾ ಪಿತೃಗಳು ನಿಮ್ಮ ತಲೆಯ ಬಳಿ ನಿಂತಿರುವುದನ್ನು ಕಂಡರೆ ಅದು ಒಳ್ಳೆಯ ಸಂಕೇತವಾಗಿದೆ. ಅಂತಹ ಕನಸು ಬಿದ್ದರೆ ನಿಮಗೆ ಎದುರಾಗುವ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರ್ಥ. ಪೂರ್ವಜರ ಆಶೀರ್ವಾದದಿಂದ, ನಿಮ್ಮ ಜೀವನದಲ್ಲಿ ಎದುರಾಗಲಿರುವ ಸಮಸ್ಯೆಗಳು ನಿವಾರಣೆಯಾಗಲಿವೆ.
ಇದನ್ನೂ ಓದಿ : Rahu and Mangal Yuti Yog: ಆಗಸ್ಟ್ 10 ರಿಂದ ಈ ರಾಶಿಗಳ ಜನರು ಅಶುಭ ಯೋಗದಿಂದ ಮುಕ್ತಿ ಪಡೆಯಲಿದ್ದಾರೆ
ಇನ್ನು ಪೂರ್ವಜರು ಕನಸಿನಲ್ಲಿ ನಿಮ್ಮ ಪಾದಗಳ ಬಳಿ ನಿಂತಿರುವಂತೆ ಕಂಡರೆ ಅದು ಶುಭ ಸಂಕೇತವಲ್ಲ. ನಿಮ್ಮ ಜೀವನದಲ್ಲಿ ಎದುರಾಗಲಿರುವ ಸಮಸ್ಯೆಗಳ ಮುನ್ಸೂಚನೆಯಾಗಿರಲಿದೆ. ಹಾಗಾಗಿ ಏನೇ ಕೆಲಸ ಮಾಡಬೇಕಾದರೂ ಎಚ್ಚರದಿಂದ ಇರಿ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ದಾನ ಧರ್ಮ ಮಾಡಿ.
ಸ್ವಪ್ನದಲ್ಲಿ ಒಮ್ಮೆ ಕಾಣಿಸಿಕೊಂಡು ತಕ್ಷಣವೇ ಪೂರ್ವಜರು ಕಣ್ಮರೆಯಾದರೂ ಅದು ಒಳ್ಳೆಯದಲ್ಲ. ಈ ಘಟನೆಯು ನಿಮ್ಮ ಜೀವನದಲ್ಲಿ ಇದ್ದಕ್ಕಿದ್ದಂತೆ ತೊಂದರೆಗಳು ಎದುರಾಗಬಹುದು ಎನ್ನುವುದನ್ನು ಸೂಚಿಸುತ್ತದೆ. ಹೀಗಾದಾಗ ಇಷ್ಟ ದೇವನನ್ನು ಆರಾಧಿಸಿ.
ಕನಸಿನಲ್ಲಿ ನಿಮ್ಮ ಪೂರ್ವಜರಿಗೆ ಆಹಾರವನ್ನು ನೀಡುವುದನ್ನು ನೋಡಿದರೆ, ಅದು ಮಂಗಳಕರ ಕನಸು. ಅಂತಹ ಕನಸು ನಿಮ್ಮ ಜೀವನದಲ್ಲಿ ಅಪಾರ ಸಂತೋಷ ಮತ್ತು ಹಣ ಬರಲಿದೆ ಎನ್ನುವುದನ್ನು ಹೇಳುತ್ತದೆ. ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎನ್ನುವುದನ್ನು ಸೂಚಿಸುತ್ತವೆ.
ಇದನ್ನೂ ಓದಿ : ಹನ್ನೊಂದು ತಿಂಗಳ ನಂತರ ತನ್ನ ರಾಶಿ ಪ್ರವೇಶಿಸುತ್ತಿರುವ ಸೂರ್ಯ, ಈ ರಾಶಿಯವರಿಗೆ ಕಂಟಕ
ಕನಸಿನಲ್ಲಿ ಪೂರ್ವಜರು ನಿಮಲ್ಲಿ ಏನನ್ನಾದರೂ ಕೇಳುತ್ತಿರುವುದು ಅಥವಾ ಅಳುವುದು ಕಂಡುಬಂದರೆ ಅದು ಅಶುಭ ಸಂಕೇತ. ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎನ್ನುವುದನ್ನು ಅದು ಸೂಚಿಸುತ್ತದೆ. ಈ ರೀತಿಯ ಕನಸು ಬಿದ್ದರೆ ಅದರ ಅಶುಭ ಫಲ ತೆಗೆದು ಹಾಕಲು ಬಡವರು ನಿರ್ಗತಿಕರಿಗೆ ಆಹಾರವನ್ನು ದಾನ ಮಾಡಿ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.