ನವದೆಹಲಿ: ಚಂಡೀಗಢದ ವ್ಯಾಪಾರಿ ಸಂಜಯ್ ರಾಣಾ, ಕೋವಿಡ್-19 ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿರುವ ಜನರಿಗೆ ‘ಚೋಲೆ ಭಟುರೆಯನ್ನು ಉಚಿತವಾಗಿ ನೀಡುತ್ತಿದ್ದಾರೆ.
ಸಾರ್ವಜನಿಕರಲ್ಲಿ ಉಂಟಾಗಿರುವ ಆತ್ಮತೃಪ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಬೂಸ್ಟರ್ ಶಾಟ್‌ಗೆ ಅರ್ಹರಾದವರಲ್ಲಿ ಹೆಚ್ಚಿನವರು ಜಬ್ ಪಡೆಯಲು ಮುಂದೆ ಬರುತ್ತಿಲ್ಲ, ಹಾಗಾಗಿ ಇದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..!
ಯಾರು ಈ ಸಂಜಯ್ ರಾಣಾ ?
ರಾಣಾ ಹಿಮಾಚಲ ಪ್ರದೇಶದ ಹಮೀರ್‌ಪುರ ಮೂಲದವರಾಗಿದ್ದು, ಅವರ ಪತ್ನಿ ಗೃಹಿಣಿ ಮತ್ತು ಅವರಿಗೆ ಮಗಳಿದ್ದಾಳೆ.ರಾಣಾ ಅವರು 10 ನೇ ತರಗತಿಯವರೆಗೆ ಓದಿದ್ದು, ಅವರ ತಂದೆ ನಿಧನರಾದಾಗ,ಮೂವರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನು ನೋಡಿಕೊಳ್ಳಬೇಕಾಗಿರುವುದರಿಂದ ಕುಟುಂಬದ ಜವಾಬ್ದಾರಿಗಳು ಅವರ ಹೆಗಲ ಮೇಲೆ ಬಿದ್ದವು.ರಾಣಾ ಕಳೆದ 15 ವರ್ಷಗಳಿಂದ ಸೈಕಲ್‌ನಲ್ಲಿ ‘ಚೋಲೆ ಭತುರೆ’ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಪತ್ತೆಯಾಯ್ತು 8000 ವರ್ಷಗಳ ಪುರಾತನ ದೇವಾಲಯ!
ತಮ್ಮ ಮಗಳು ರಿಧಿಮಾ ಮತ್ತು ಸೊಸೆ ರಿಯಾ ಕಳೆದ ವರ್ಷ ಕೊರೊನಾ ಬೂಸ್ಟರ್ ಡೋಸ್ ತೆಗೆದುಕೊಳ್ಳುವವರಿಗೆ ಉಚಿತವಾಗಿ ಚೋಲೆ ಭಟುರೆ ನೀಡುವ ವಿಚಾರವನ್ನು ಪ್ರಸ್ತಾಪಿಸಿದರು.ಅವರು ಮಾಸಿಕ “ಮನ್ ಕಿ ಬಾತ್” ರೇಡಿಯೋ ಪ್ರಸಾರದಲ್ಲಿ ಪ್ರಧಾನಿ ಮೋದಿಯವರಿಂದ ಪ್ರಶಂಸೆ ಗಳಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.