ಗಾಳಿಪಟ -2 ಹಾಡಿಗೆ ಕಿಚ್ಚನ ಶಹಬ್ಬಾಶ್‌ಗಿರಿ: ʼಪ್ರಾಯಶಃʼ ಸಾಂಗ್‌ ಹಾಡಿದ ಅಭಿನಯ ಚಕ್ರವರ್ತಿ

“ನಾವು ಬದುಕಿರಬಹುದು ಪ್ರಾಯಶಃ, ಇಲ್ಲ ಕನಸಿರಬಹುದಿದು ಪ್ರಾಯಶಃ” ಇದು ಯೋಗರಾಜ್ ಭಟ್ರ ‘ಗಾಳಿಪಟ2’ ಸಿನಿಮಾದ ಹಾಡು. ಈ ಅದ್ಬುತ ಸಾಲುಗಳಿರುವ ಸುಂದರ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡುವುದರ ಮೂಲಕ ಚಿತ್ರಕ್ಕೆ ಶುಭಕೋರಿದ್ದಾರೆ. 

ಇದನ್ನೂ ಓದಿ: ʼನಾನು ಅಫ್ಘಾನಿಸ್ತಾನಕ್ಕೆ ಮತ್ತೆ ಹೋಗಲು ಬಯಸುತ್ತೇನೆ, ಆದರೆ ಈ ಪರಿಸ್ಥಿತಿಯಲ್ಲಲ್ಲ’

ಪ್ರಾಯಶಃ ಹಾಡು ಇದೀಗ ಜನಮನಸೂರೆಗೊಂಡಿದೆ. ವಿಶೇಷ ಅಂದ್ರೆ ಈ ಹಾಡನ್ನ ಸೋನು ನಿಗಮ್ ಹಾಡಿದ್ದು, ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದಾರೆ. ಇನ್ನು ಸಂಗೀತ ಮಾಂತ್ರಿಕ ಅರ್ಜುನ್‌ ಜನ್ಯ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಾಯಶಃ ಸಾಂಗ್ ರಿಲೀಸ್ ಆದ ಮೇಲೆ ಪ್ರತಿಯೊಬ್ಬರೂ ಇದೇ ಹಾಡನ್ನ ಗುನುಗುತ್ತಿರೋದು ಕೂಡ ಕಂಡುಬರುತ್ತಿದೆ. ತುಂಬಾ ಅರ್ಥಪೂರ್ಣವಾದ ಸಾಲುಗಳು ಈ ಹಾಡಿನಲ್ಲಿದೆ.

ಇನ್ನು ಪ್ರಾಯಶಃ ಹಾಡನ್ನ ರಿಲೀಸ್ ಮಾಡಿ ಮಾತಾಡಿದ ಕಿಚ್ಚ, ಯೋಗರಾಜ್‌ ಭಟ್‌ರವರ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ʼಪ್ರಾಯಶಃʼ ಹಾಡನ್ನು ಸ್ವತಃ ತಾವೂ ಕೂಡ ಹಾಡಿ ಖುಷಿಪಟ್ಟಿದ್ದಾರೆ. ಸಖತ್ ಮಜಾ ಕೊಡೋ ಹಾಡು ಮತ್ತು ಟ್ರೇಲರ್ ಮೂಲಕ ಸದಾ ಸುದ್ದಿಯಲ್ಲಿರುವ ʼಗಾಳಿಪಟ 2ʼ ಸಿನಿಮಾ ಆಗಸ್ಟ್ 12ರಂದು ಅದ್ಧೂರಿಯಾಗಿ ತೆರೆ ಮೇಲೆ ಬರಲಿದೆ. ಸಿನಿಮಾದ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನೀರಿಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.

ಇನ್ನು ಕಿಚ್ಚನ ಶುಭಾಶಯಕ್ಕೆ ಧನ್ಯವಾದ ಸಲ್ಲಿಸಿ, ಯೋಗರಾಜ್‌ ಭಟ್‌ರವರು ಟ್ವೀಟ್‌ ಮಾಡಿದ್ದಾರೆ. “ನಮ್ಮ ಗಾಳಿಪಟ 2 ಸಿನಿಮಾದ ‘ಪ್ರಾಯಶಃ’ ಹಾಡನ್ನು ತುಂಬಾ ಇಷ್ಟಪಟ್ಟು, ಒಂದಿಷ್ಟು ಒಳ್ಳೆಯ ಮಾತುಗಳ ಮೂಲಕ ರಿಲೀಸ್ ಮಾಡಿಕೊಟ್ಟ ಶ್ರೀಯುತ ಕಿಚ್ಚ ಸುದೀಪ ಸರ್‌ಗೆ ಅನಂತಾನಂತ ವಂದನೆಗಳು. ಪೂರ್ತಿ ಹಾಡು ಸಂಜೆ 6 ಕ್ಕೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಮಿಸ್ ಮಾಡ್ದೆ ನೋಡಿ” ಎಂದು ಹೇಳಿಕೊಂಡಿದ್ದಾರೆ. 

 

ಇದನ್ನೂ ಓದಿ: ರೋಗಿಯ ಹೊಟ್ಟೆಯಲ್ಲಿತ್ತು ಸ್ಟೀಲ್ ಗ್ಲಾಸ್: ಇಷ್ಟು ದೊಡ್ಡ ವಸ್ತು ಹೊಟ್ಟೆಗೆ ಹೋಗಿದ್ದೇಗೆ ಗೊತ್ತಾ?

ಇನ್ನು ಗಾಳಿಪಟ 2 ಸಿನಿಮಾದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌, ದೂದ್‌ಪೇಡಾ ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment