ನವದೆಹಲಿ: ಬರೋಬ್ಬರಿ 50 ವರ್ಷಗಳ ಹಿಂದೆ ತಮಿಳುನಾಡಿನ ಕುಂಭಕೋಣಂನ ತಂಡನ್ತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ ದೇವಾಲಯದಿಂದ ನಾಪತ್ತೆಯಾಗಿದ್ದ ‘ಪಾರ್ವತಿ ದೇವಿ’ಯ ವಿಗ್ರಹವು ನ್ಯೂಯಾರ್ಕ್‌ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತಮಿಳುನಾಡು ಐಡಲ್ ವಿಂಗ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಮಾಹಿತಿ ನೀಡಿದೆ. ಅಮೆರಿಕದ ನ್ಯೂಯಾರ್ಕ್‌ನ ಬೋನ್‌ಹಾಮ್ಸ್ ಹರಾಜು ಹೌಸ್‌ನಲ್ಲಿ ಈ ದೇವಿಯ ವಿಗ್ರಹ ಪತ್ತೆಯಾಗಿದೆ ಎಂದು ಸಿಐಡಿ ತಿಳಿಸಿದೆ.
1971ರಲ್ಲಿ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿತ್ತು. ಅಲ್ಲದೆ ಫೆಬ್ರವರಿ 2019ರಲ್ಲಿ ಕೆ.ವಾಸು ಎಂಬ ವ್ಯಕ್ತಿಯ ದೂರಿನ ಮೇರೆಗೆ ವಿಗ್ರಹ ವಿಭಾಗವು ಎಫ್‌ಐಆರ್ ದಾಖಲಿಸಿದ್ದರೂ ಪ್ರಕರಣ ಇನ್ನೂ ಬಾಕಿ ಉಳಿದಿತ್ತು. ಐಡಲ್ ವಿಂಗ್ ಇನ್ಸ್‌ಪೆಕ್ಟರ್ ಎಂ.ಚಿತ್ರಾ ಅವರು ತನಿಖೆ ಕೈಗೆತ್ತಿಕೊಂಡ ನಂತರ, ವಿದೇಶದಲ್ಲಿರುವ ವಿವಿಧ ವಸ್ತುಸಂಗ್ರಹಾಲಯಗಳು ಮತ್ತು ಹರಾಜು ಕೇಂದ್ರಗಳಲ್ಲಿ ಚೋಳರ ಕಾಲದ ಪಾರ್ವತಿ ವಿಗ್ರಹಗಳನ್ನು ಪತ್ತೆಹಚ್ಚಲು ಶುರುಮಾಡಿದ ಬಳಿಕ ಇದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: RBI: ಆರ್‌ಬಿಐನ ಈ ನಿರ್ಧಾರದಿಂದ 8 ಬ್ಯಾಂಕ್‌ಗಳಿಗೆ ದೊಡ್ಡ ಹೊಡೆತ!
ಸಂಪೂರ್ಣ ಹುಡುಕಾಟದ ನಂತರ ಚಿತ್ರಾ ಅವರು ಬೊನ್ಹಾಮ್ಸ್ ಹರಾಜು ಕೇಂದ್ರದಲ್ಲಿ ಈ ವಿಗ್ರಹವಿರುವುದನ್ನು ಪತ್ತೆಹಚ್ಚಿದ್ದಾರೆ. ಚೋಳರ ಕಾಲಕ್ಕೆ ಸೇರಿದ ಸುಮಾರು 12ನೇ ಶತಮಾನದ ತಾಮ್ರ-ಮಿಶ್ರಲೋಹದ ಈ ವಿಗ್ರಹವು52 ಸೆಂ.ಮೀ ಎತ್ತರವಿದೆ. ಇದರ ಮೌಲ್ಯ 212,575 ಅಮೆರಿಕನ್ ಡಾಲರ್ (ಸುಮಾರು 1,68,26,143 ರೂ.) ಎಂದು ಐಡಲ್ ವಿಂಗ್ ಮಾಹಿತಿ ಬಿಡುಗಡೆ ಮಾಡಿದೆ.
#Congrats ! To my team for tracing an elegant antique #idol of #Parvati in tribhanga pose stolen from #Nadanapureeswara temple in Thandanthottam, to Bonhams House,New York.Wing has readied papers to bring it back . @tnpoliceoffl @CMOTamilnadu, #IPS, #police @mkstalin @TNDIPRNEWS pic.twitter.com/3PcFBo9wcI
— Jayanth Murali IPS, DGP, Author of “42 Mondays” (@jayantmuraliips) August 8, 2022
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಕರೆಯಲ್ಪಡುವ ಪಾರ್ವತಿ ಅಥವಾ ಉಮಾ ದೇವತೆ ಕಿರೀಟ ಧರಿಸಿ ನಿಂತಿರುವ ಸ್ಥಾನದಲ್ಲಿನ ಈ ವಿಗ್ರಹವು ತುಂಬಾ ಸುಂದರವಾಗಿದೆ. ಇದನ್ನು ರಾಶಿಯ ಉಂಗುರಗಳ ಕರಂಡ ಮುಕುಟ ಎಂದು ಕರೆಯುತ್ತಾರೆ. ಇದು ಗಾತ್ರದಲ್ಲಿ ಕಡಿಮೆಯಾಗುತ್ತಾ ಕಮಲದ ಮೊಗ್ಗುಗಳಲ್ಲಿ ಕೊನೆಗೊಳ್ಳುತ್ತದೆ. ಕಿರೀಟದಲ್ಲಿನ ಮಾದರಿಗಳನ್ನು ನೆಕ್ಲೇಸ್‌ಗಳು, ಆರ್ಮ್‌ಬ್ಯಾಂಡ್‌ಗಳು, ಕವಚ ಮತ್ತು ಉಡುಪಿನಲ್ಲಿ ಕಂಗೊಳಿಸುವಂತಿದ್ದು, ಕಂಚಿನ ವಿನ್ಯಾಸದಿಂದ ಅಲಂಕರಿಸಲಾಗಿದೆ.
ಇದನ್ನೂ ಓದಿ: Bihar political crisis: ಪ್ರಮುಖ ಬಿಜೆಪಿ ನಾಯಕರಿಗೆ ದೆಹಲಿಗೆ ಬುಲಾವ್
ಐಡಲ್ ವಿಂಗ್ ಸಿಐಡಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಯಂತ್ ಮುರಳಿ ನೀಡಿರುವ ಮಾಹಿತಿ ಪ್ರಕಾರ, ಅವರ ತಂಡವು ಈ ವಿಗ್ರಹವನ್ನು ಮರಳಿ ತಾಯ್ನಾಡಿಗೆ ತರಲು ದಾಖಲೆಗಳನ್ನು ಸಿದ್ಧಪಡಿಸಿದೆ.
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…