‘ನಾನು ಅಫ್ಘಾನಿಸ್ತಾನಕ್ಕೆ ಮತ್ತೆ ಹೋಗಲು ಬಯಸುತ್ತೇನೆ, ಆದರೆ ಈ ಪರಿಸ್ಥಿತಿಯಲ್ಲಲ್ಲ’

ನವದೆಹಲಿ: WIONನ ಪಾಕಿಸ್ತಾನ ಬ್ಯೂರೋ ಮುಖ್ಯಸ್ಥ ಅನಾಸ್ ಮಲಿಕ್ ಅವರನ್ನು ಗುರುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ತಾಲಿಬಾನ್‌ಗಳು ಅಪಹರಿಸಿದ್ದರು. ಅವರ ಕೈಕಾಲು ಕಟ್ಟಿ, ಮುಖಕ್ಕೆ ಮುಸುಕು ಹಾಕಿ ಹಲ್ಲೆ ನಡೆಸಿ ದೈಹಿಕವಾಗಿ ಹಿಂಸಿಸಿದ್ದರು. ಮಲಿಕ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಗುವ ಮುನ್ನವೇ ತಾಲಿಬಾನಿಗಳು ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು.

ಗ್ರಾವಿಟಾಸ್‌ನಲ್ಲಿ ಪಾಲ್ಕಿ ಶರ್ಮಾ ಉಪಾಧ್ಯಾಯ ಅವರೊಂದಿಗೆ ತನ್ನ ಅಗ್ನಿಪರೀಕ್ಷೆಯ ಕ್ಷಣಗಳ ಮಾಹಿತಿ ಹಂಚಿಕೊಂಡಿರುವ ಮಲಿಕ್, ‘ತಾನು ಇನ್ನೂ ಕೂಡ ವರದಿ ಮಾಡಲು ಅಫ್ಘಾನಿಸ್ತಾನಕ್ಕೆ ತೆರಳಲು ಬಯಸುತ್ತೇನೆ. ಆದರೆ ಪ್ರಸ್ತುತ ‘ಅಮಾನವೀಯ’ ತಾಲಿಬಾನ್ ಆಡಳಿತವಿರುವುದರಿಂದ ಹೋಗುವುದಿಲ್ಲ’ವೆಂದು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದ ಬಂದರಿನತ್ತ ಚೀನಾ ಹಡಗು..! ಭಾರತಕ್ಕೆ ಗುರಿ ಇಟ್ಟಿತಾ ಡ್ರ್ಯಾಗನ್..!

‘ನಾನು ಕಾಬೂಲ್‌ನಿಂದ ಹೊರಡುವಾಗ ತುಂಬಾ ಭಾವುಕನಾಗಿದ್ದೆ. ನನ್ನ ಪಕ್ಕದಲ್ಲಿಯೇ ಅಫ್ಘಾನ್ ಕುಟುಂಬವಿತ್ತು ಮತ್ತು ನಾವು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇವೆ. ನೀವು ಕಾಣೆಯಾಗಿರುವ ವರದಿಗಳ ಬಗ್ಗೆ ನಾವು ಓದುತ್ತಿದ್ದೇವೆ’ ಎಂದು ಮಲಿಕ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

 ಅಫ್ಘಾನ್ ಕುಟುಂಬ ನನ್ನನ್ನು ತಬ್ಬಿಕೊಂಡಿತು-ಮಲಿಕ್

ಈ ಘಟನೆಯಿಂದ ಭಾವೋದ್ವೇಗಕ್ಕೆ ಒಳಗಾಗಿದ್ದ ಮಲಿಕ್, ‘ಈ ಸಮಯದಲ್ಲಿ ನಾನು ನನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಈ ದೇಶವನ್ನು ಅಂದರೆ ಅಫ್ಘಾನಿಸ್ತಾನವನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ದುರದೃಷ್ಟವಶಾತ್ ಇಲ್ಲಿ ನಡೆಯುತ್ತಿರುವ ಆಡಳಿತವು ನೀವು ‘ಮನುಷ್ಯ’ರೆಂದು ಪರಿಗಣಿಸುತ್ತಿಲ್ಲ. ಇಲ್ಲಿ ಏನಾಗಿದೆಯೋ ಅದು ದುರಂತವೇ ಸರಿ. ನಾನು ಅಫ್ಘಾನಿಸ್ತಾನಕ್ಕೆ ಹಿಂತಿರುಗಲು ಇಷ್ಟಪಡುತ್ತೇನೆ ಆದರೆ ಈ ಪರಿಸ್ಥಿತಿಯಲ್ಲಿ ಅಲ್ಲ’ವೆಂದು ಅವರು ಹೇಳಿದರು.

ಇದನ್ನೂ ಓದಿ: ಅಮೆರಿಕದಲ್ಲಿ ಮಂಕಿಪಾಕ್ಸ್ ಅಲರ್ಟ್- ಹೆಲ್ತ್ ಎಮರ್ಜೆನ್ಸಿ ಘೋಷಣೆ

‘ನನಗೆ ಅಫ್ಘಾನ್ ಕುಟುಂಬದಿಂದ ಅಪ್ಪುಗೆ ನೀಡಲಾಯಿತು. ನೆರೆಹೊರೆಯವರಾಗಿದ್ದರೂ ಅಫ್ಘಾನಿಸ್ತಾನವು ತುಂಬಾ ವೈಯಕ್ತಿಕವಾಗಿ ನನ್ನ ಹೃದಯಕ್ಕೆ ಹತ್ತಿರವಾಗಿದೆ. 2018ರಲ್ಲಿ WIONನಿಂದ ನನ್ನನ್ನು ಮೊದಲ ಬಾರಿಗೆ ಇಲ್ಲಿಗೆ ಕಳುಹಿಸಲಾಗಿತ್ತು. ಅಂದಿನಿಂದ ಈ ದೇಶದ ಜೊತೆಗೆ ಒಂದು ರೀತಿಯ ನಂಟು ಬೆಳೆಯಿತು. ಹೀಗಾಗಿ ನಾನು ಅಫ್ಘಾನಿಸ್ತಾನಕ್ಕೆ ಬರುತ್ತಿದ್ದೇನೆ. ನಾನು 2018, 2019, 2020 ಮತ್ತು 2021ರಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾವನ್ನು ವಶಪಡಿಸಿಕೊಳ್ಳುವವರೆಗೂ ಇಲ್ಲಿದ್ದೇನೆ’ ಎಂದು ಮಲಿಕ್ ಹೇಳಿದ್ದಾರೆ.  

ಅಫ್ಘಾನಿಸ್ತಾನದ ಸರ್ಕಾರದ ಮುಖವಾಡ ಧರಿಸಿರುವ ಭಯೋತ್ಪಾದಕ ಸಂಘಟನೆಯಿಂದ ಮಲಿಕ್ ಅವರಿಗೆ ದೇಶಕ್ಕೆ ಮುಕ್ತವಾಗಿ ತೆರಳಲು ಅವಕಾಶ ನೀಡಿದ್ದರೂ, ಅವರ ಸಹೋದ್ಯೋಗಿಗಳು ಇನ್ನೂ ತಾಲಿಬಾನ್ ಸೆರೆಯಲ್ಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ‘ಸ್ಥಳೀಯ ವಿಡಿಯೋ ನಿರ್ಮಾಪಕ ಮತ್ತು ನಮ್ಮ ಚಾಲಕನನ್ನು ಇನ್ನೂ ತಾಲಿಬಾನ್ ತಮ್ಮ ವಶದಲ್ಲಿಟ್ಟುಕೊಂಡಿದೆ. ಶೀಘ್ರದಲ್ಲೇ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಎಷ್ಟು ಬೇಗ, ಯಾವಾಗ ಎಂಬ ಮಾಹಿತಿ ಬಗ್ಗೆ ನಮಗೆ ಇನ್ನೂ ಅಪ್‍ಡೇಟ್ ಸಿಕ್ಕಿಲ್ಲ’ವೆಂದು ಮಲಿಕ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment