ಪಿಎಸ್ಐ ನೇಮಕಾತಿ ಪ್ರಕರಣ : ಪರೀಕ್ಷೆ ಬರೆದಿದ್ದ 8 ಅಭ್ಯರ್ಥಿಗಳು ಅರೆಸ್ಟ್!

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಭಂದಿಸಿದಂತೆ ನಗರದಲ್ಲಿ ಸಿಐಡಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಎಂಟು ಅಭ್ಯರ್ಥಿಗಳನ್ನ ಬಂಧಿಸಿದ್ದಾರೆ. ಬಂಧಿತರು ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ ತಾಲೂಕಿನ ನಿವಾಸಿಗಳು ಎಂದು ಹೇಳಲಾಗಿದೆ. 

ಇವರು ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿಎಸ್ಐ ಪರೀಕ್ಷೆ ಬರೆದಿದ್ದರು. ಎಂಟು ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ಎಂಟು ಅಭ್ಯರ್ಥಿಗಳ ಹೆಸರು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿತ್ತು.

ಇದನ್ನೂ ಓದಿ : ಬುದ್ಧಿಮಾಂದ್ಯ ಮಗನನ್ನು ಹತ್ಯೆಗೈದ ಕ್ರೂರ ತಾಯಿ

ಇವರು ನಗರದ ಎಸ್ ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜಿ ನಲ್ಲಿ ಪರೀಕ್ಷೆ ಬರೆದಿದ್ದರು.

1) ರವಿರಾಜ್ ಅಖಂಡೆ
2) ಪೀರಪ್ಪ ಹಾಸ್ಟೆಲ್‌ನಲ್ಲಿ ಕುಕ್ಕರ್
3) ಶ್ರೀಶೈಲ್
4) ಭಗವಂತರಾಯ್
5) ಸಿದ್ದುಗೌಡ ಪಾಟೀಲ್ ಎಫ್‌ಡಿಎ
6) ಸೋಮನಾಥ್
7) ಕಲ್ಲಪ್ಪ ಅಲ್ಲಾಪುರ ಕಾನ್ಸ್ಟೆಬಲ್
8) ವಿಜಯಕುಮಾರ್

ಈ  ಬಂಧಿತ ಅಭ್ಯರ್ಥಿಗಳು ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಕ್ಯಾಂಡಿಡೆಟ್‌ಗಳು ಎಂದು ಹೇಳಲಾಗಿದೆ. ಇವರು ತಲಾ 40 ಲಕ್ಷಕ್ಕೂ ಅಧಿಕ ಹಣವನ್ನ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ನೀಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಮತ್ತೆ ಕಿರಿಕ್‌ ಮಾಡಿಕೊಂಡ ಸುನಾಮಿ ಕಿಟ್ಟಿ: ದೂರಿಗೆ ಪ್ರತಿದೂರು ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment