ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸರ್ವ ಸನ್ನದ್ಧ: ಆರ್ ಅಶೋಕ್

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸರ್ವ ಸನ್ನದ್ಧವಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬಿಬಿಎಂಪಿ ಚುನಾವಣೆಯ ಸಲುವಾಗಿ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು, ನಗರದ ಶಾಸಕರು, ಸಂಸದರು, ಪದಾಧಿಕಾರಿಗಳ ಸಭೆಯ ಬಳಿಕ ಅವರು ಮಾತನಾಡಿದರು.

ನಮ್ಮೆಲ್ಲಾ ಶಾಸಕರು, ಪದಾಧಿಕಾರಿಗಳು ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ್ದೇವೆ.ಈಗಾಗಲೇ ಕೋರ್ಟ್ ಕೂಡ ಸೂಚನೆ ನೀಡಿದೆ. ಚುನಾವಣೆ ತಯಾರಿ ಪ್ರಾರಂಭವಾಗಿದೆ. ಓಟರ್ ಲಿಸ್ಟ್ ಗೆ ಸೇರಿಸೋದು, ಬೂತ್ ಮಟ್ಟದಿಂದ ಜಿಲ್ಲಾಮಟ್ಟದ ವರೆಗೆ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆ.ಬಿಜೆಪಿ ಪರವಾಗಿ ವಾತಾವರಣ ಇದೆ. ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ, ಅಲ್ಲಿ ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಉಸ್ತುವಾರಿ ನೀಡಲಾಗುವುದು.

ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?

FDI, KFD, KRS, ಆಮ್ ಆದ್ಮಿ ಈ ರೀತಿ ಪಕ್ಷಗಳ ಬಗ್ಗೆ ಕೂಡ ಚರ್ಚೆ ಆಗಿದೆ. ಬಿಜೆಪಿ ಪಕ್ಷ ಗೆಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲ.ಮೀಸಲಾತಿ ನಿಗದಿ ಪಡಿಸುವದನ್ನು ಸಿಎಂ ಹಾಗೂ ಅಧಿಕಾರಿಗಳು ಮಾಡುತ್ತಾರೆ. ಅದು ಸರ್ಕಾರದ ಕೆಲಸ, ಪಕ್ಷದ್ದಲ್ಲ.

ಯಾವುದೇ ಚುನಾವಣೆ ಬಂದರೂ ಅದು ಯುದ್ದವೇ. ಚುನಾವಣೆ ಘೋಷಣೆ ಆದ ಬಳಿಕ ಯುದ್ದ ಆರಂಭ. ನಮ್ಮದೇ ಸರ್ಕಾರವಿದೆ, ನಮ್ಮ ಕಾರ್ಯ ಯೋಜನೆ ರೂಪಿಸುತ್ತೇವೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆಮ್ ಆದ್ಮಿ ಉತ್ತರ ಭಾರತದಲ್ಲಿ ಪ್ರಭಾವ ಬೀರಬಹುದು. ಇಲ್ಲಿ ಅದಕ್ಕೆ ಅಸ್ತಿತ್ವ ಇಲ್ಲ. ಒಂದು ವಾರದಲ್ಲಿ ಮೀಸಲಾತಿ ನಿಗದಿಪಡಿಸುವಂತೆ ಕೋರ್ಟ್ ಸೂಚಿಸಿದೆ.

ಇದನ್ನೂ ಓದಿ: ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ನಟ ಚಂದನ್‌ಗೆ ಕಪಾಳ ಮೋಕ್ಷ..!

SDPI, PFI ಇಂತ‌ಹ‌ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ.ಈ ಕುರಿತು ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. ಸಿಎಂ ಜೊತಯೂ ಚರ್ಚಿಸುತ್ತೇನೆ.ಬ್ಯಾನ್ ಮಾಡೋದು ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು.

ಕಾಂಗ್ರೆಸ್‌ನಲ್ಲಿ ಇರೋ ತರ ಸಿಎಂ ಗಾದಿಗೆ, ಅಥವಾ ಇತರೆ ಹುದ್ದೆಗೆ ನಮ್ಮಲ್ಲಿ ಜಗಳ ಇಲ್ಲ.ನಾವು ಪಕ್ಷದ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ.ವ್ಯಕ್ತಿ ‌ಕೇಂದ್ರಿತವಾಗಿ ಅಲ್ಲ.ಎಲ್ಲ ಮುಖಂಡರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮದು ವ್ಯಕ್ತಿ ಆಧಾರಿತ ಪಕ್ಷವಲ್ಲ.ಸುಪ್ರೀಂ ಕೋರ್ಟ್ ಏಳು ದಿನ ಗಡುವು ನೀಡಿದೆ. ಯಾವಾಗ ಚುನಾವಣೆ ಆಗಬೇಕು ಅಂತ ಕೋರ್ಟ್ ಸೂಚಿಸಲಿದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 



Source link

Leave a Comment