ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ

ನವದೆಹಲಿ :  ಮುಂದಿನ ದಿನಗಳಲ್ಲಿ ಹೊಸ ಸೂತ್ರದಿಂದ ನೌಕರರ ವೇತನ ಹೆಚ್ಚಳವಾಗಲಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. 2016 ರ ಆರಂಭದಲ್ಲಿ, 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಯಿತು. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ ನೌಕರರ ವೇತನವನ್ನು ನಿಗದಿಪಡಿಸಲು 8 ನೇ ವೇತನ ಆಯೋಗವನ್ನು ರಚಿಸುವ  ಚಿಂತನೆ ಇಲ್ಲ. ಆದರೆ, ಹೊಸ ಸೂತ್ರದೊಂದಿಗೆ ಕೇಂದ್ರ ನೌಕರರ ವೇತನ ಪ್ರತಿ ವರ್ಷ ನಿಗದಿಯಾಗಲಿದೆ. 

ಹಣಕಾಸು ಖಾತೆ ರಾಜ್ಯ ಸಚಿವರು  ನೀಡಿರುವ ಮಾಹಿತಿ : 
ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆಗಳು ಮತ್ತು ಪಿಂಚಣಿಗಳನ್ನು ಪರಿಷ್ಕರಿಸಲು ಸರ್ಕಾರವು 8 ನೇ ವೇತನ ಆಯೋಗಕ್ಕಿಂತ ವಿಭಿನ್ನವಾದದ್ದನ್ನು ಮಾಡುತ್ತಿರುವುದು ನಿಜ ಎಂದು ಪಂಕಜ್ ಚೌಧರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.  8ನೇ ವೇತನ ಆಯೋಗದ ಬಗ್ಗೆ ಇನ್ನೂ ಯಾವುದೇ ರೀತೊಯ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು ಪರಿಶೀಲಿಸಲು ವೇತನ ಆಯೋಗದ ರಚನೆಯ ಅಗತ್ಯವಿಲ್ಲ ಎಂದು  ಹೇಳಿದ್ದಾರೆ. 

ಇದನ್ನೂ ಓದಿ : Vegetable Price: ಮತ್ತೆ ಹೆಚ್ಚಳವಾಯ್ತು ಟೊಮ್ಯಾಟೋ ಬೆಲೆ: ಹೀಗಿದೆ ನೋಡಿ ತರಕಾರಿಗಳ ದರ

ಏನಿದು ಹೊಸ ಸೂತ್ರ? :
ಈಗ ಉದ್ಯೋಗಿಗಳ ವೇತನವನ್ನು Aykroyd ಸೂತ್ರದಿಂದ ನಿರ್ಧರಿಸಲಾಗುತ್ತದೆ. ಈ ಸೂತ್ರದೊಂದಿಗೆ, ಉದ್ಯೋಗಿಗಳ ಸಂಬಳವನ್ನು ಹಣದುಬ್ಬರ, ಜೀವನ ವೆಚ್ಚ ಮತ್ತು ಉದ್ಯೋಗಿಯ ಕಾರ್ಯಕ್ಷಮತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ. ನೌಕರರ ಬಡ್ತಿಯೂ ಕೂಡಾ ಇದೆ ಆಧಾರದ ಮೇಲೆ ಆಗಲಿದೆ. 8ನೇ ವೇತನ ಆಯೋಗ ಯಾವಾಗ ಜಾರಿಗೆ ಬರಲಿದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಯಾವುದೇ ರೀತಿಯ ಮಾಹಿತಿ ಇಲ್ಲ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

7ನೇ ವೇತನ ಆಯೋಗದ ಶಿಫಾರಸು : 
ಈ ಹಿಂದೆ 7ನೇ ವೇತನ ಆಯೋಗದ ಶಿಫಾರಸಿನಲ್ಲಿ ನ್ಯಾಯಮೂರ್ತಿ ಮಾಥುರ್ ಅವರು ಐಕ್ರಾಯ್ಡ್ ಸೂತ್ರದ ಪ್ರಕಾರ ವೇತನ ರಚನೆಯನ್ನು ನಿರ್ಧರಿಸಬೇಕೆಂದು ಹೇಳಿದ್ದರು. ಈ ನಿಯಮದಲ್ಲಿ ಜೀವನ ವೆಚ್ಚವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸೂತ್ರವನ್ನು ವ್ಯಾಲೇಸ್ ರುಡೆಲ್  ಆಯಕ್ ರಾಯ್ದ್ ಪರಿಚಯಿಸಿದ್ದರು. 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರಕಾರವು ನೌಕರರ ಕನಿಷ್ಠ ವೇತನವನ್ನು 7,000 ರೂ.ನಿಂದ 18,000 ರೂ.ಗೆ ಹೆಚ್ಚಿಸಿತ್ತು.ನ್ಯಾಯಮೂರ್ತಿ ಮಾಥುರ್ ಅವರು ಪ್ರತಿ ವರ್ಷ ಕೇಂದ್ರ ನೌಕರರ ವೇತನವನ್ನು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಶೀಲಿಸಬೇಕು ಎಂದು ಶಿಫಾರಸಿನಲ್ಲಿ ತಿಳಿಸಿದ್ದರು. 

ಇದನ್ನೂ ಓದಿ : Gold Price Today : ಇಂದಿನ ಚಿನ್ನ ಬೆಳ್ಳಿ ದರ ಎಷ್ಟಿದೆ ತಿಳಿದುಕೊಳ್ಳಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 



Source link

Leave a Comment