ಇಂದಿನ ದಿನಗಳಲ್ಲಿ ಬಹುತೇಕರದ್ದು ಒಂದೇ ಸಮಸ್ಯೆ, ಅದೆಂದರೆ ದೇಹದ ತೂಕ. ಬದಲಾದ ಜೀವನ ಶೈಲಿ, ಆಹಾರ ಕ್ರಮದಿಂದ ಜನ ಬೇಗನೇ ದಪ್ಪಗಾಗುತ್ತಿದ್ದಾರೆ. ಇದರಿಂದ ಬೇಸರ, ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಮಾಡುವ ಪ್ರಯತ್ನಗಳು ಒಂದೆರಡಲ್ಲ.
ಸಣ್ಣಗಾಗಬೇಕು ಎಂದು ಏನ್ ಏನೋ ಮಾಡಿದರೆ ಆರೋಗ್ಯಕ್ಕೆ ಕುತ್ತು ಬರುತ್ತೆ ಅನ್ನೋದನ್ನು ಮರೆಯಬೇಡಿ. ಸಿಂಪಲ್ಲಾಗಿ ಮನೆಯಲ್ಲೇ ಸಿಗುವ ಈ 5 ಆಹಾರಗಳನ್ನು ನೀವು ದಿನಾ ಸೇವಿಸಿದರೆ ಸಾಕು, ದೇಹದ ತೂಕ ಸಾಕಷ್ಟು ಇಳಿಯುತ್ತೆ. ಸಾಂದರ್ಭಿಕ ಚಿತ್ರ
1) ಸಾಸಿವೆ ಎಣ್ಣೆ: ಈ ಎಣ್ಣೆ ಕೊಬ್ಬನ್ನು ಕಡಿಮೆ ಮಾಡಲು ಉತ್ತಮ ಆಯ್ಕೆಯಾಗಿದೆ. ಇದು ಇತರ ಎಣ್ಣೆಗಳಿಗಿಂತ ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಸಾಸಿವೆ ಎಣ್ಣೆಯಲ್ಲಿ ಆಹಾರಗಳನ್ನು ಬೇಯಿಸಬೇಕು. ಇದರಲ್ಲಿರುವ ಅಂಶಗಳು ಕ್ಯಾಲೊರಿಗಳನ್ನು ಸುಡಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2) ಅರಿಶಿನ: ಕೊಬ್ಬನ್ನು ಸುಡುವ ಅನೇಕ ಗುಣಗಳನ್ನು ಅರಿಶಿನ ಹೊಂದಿದೆ. ಇದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ. ಇದರೊಂದಿಗೆ, ಅರಿಶಿನವು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡಕ್ಕೆ ಸಹ ಪ್ರಯೋಜನಕಾರಿಯಾಗಿದೆ.
3) ಬೆಳ್ಳುಳ್ಳಿ: ಹೃದಯ ರೋಗಿಗಳಿಗೆ ಬೆಳ್ಳುಳ್ಳಿ ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದು ತೂಕವನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ. ಬೆಳ್ಳುಳ್ಳಿ ಸೇವನೆ ಹೊಟ್ಟೆಯು ತುಂಬಿದೆ ಎಂದು ಮೆದುಳಿಗೆ ಸಂಕೇತವನ್ನು ಕಳುಹಿಸುತ್ತದೆ, ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
4) ಮಜ್ಜಿಗೆ: ಮಜ್ಜಿಗೆ ತುಂಬಾ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ.
5) ಜೇನುತುಪ್ಪ: ತೂಕ ನಷ್ಟಕ್ಕೆ ಜೇನುತುಪ್ಪವು ತುಂಬಾ ಸಹಾಯಕವಾಗಿದೆ. ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಜೇನು ಮತ್ತು ನಿಂಬೆಹಣ್ಣು ಹಾಕಿ ಸೇವಿಸುವುದರಿಂದ ಕೊಬ್ಬು ಕಡಿಮೆಯಾಗುತ್ತದೆ. ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಜೇನುತುಪ್ಪದಲ್ಲಿ ಕಂಡುಬರುತ್ತವೆ. ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಕೆಗೆ ಮೇಲಿನ ಸಲಹೆಗಳು ಸಹಾಯಕಾರಿ. ಆದರೆ ನಿಮಗೆ ಆರೋಗ್ಯ ಸಮಸ್ಯೆಗಳಿದ್ದರೆ, ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದ ಬಳಿಕ ಮೇಲಿನ ಸಲಹೆಗಳನ್ನು ಪರಿಗಣಿಸುವುದು ಸೂಕ್ತ. (ಸಾಂದರ್ಭಿಕ ಚಿತ್ರ)