ನಾವು ಯಾವ ದಿನ ಕೂದಲನ್ನು ಕತ್ತರಿಸಬೇಕು ಮತ್ತು ಯಾವ ದಿನ ನಾವು ಕೂದಲನ್ನು ಕತ್ತರಿಸಬಾರದು ಎಂದು ತಿಳಿದುಕೊಳ್ಳೋಣ.ನಮ್ಮ ಪೂರ್ವಜರು ಹಲವಾರು ಬಾರಿ ತಿಳಿಸುತ್ತಾ ಇರುತ್ತಾರೆ ಸಂಜೆಯ ವೇಳೆಯಲ್ಲಿ ನಾವು ಕೂದಲನ್ನು ಕತ್ತರಿಸಬಾರದು ಮೊದಲನೇದಾಗಿ ನಾವು ಯಾವ ದಿನದಂದು ಕೂದಲನ್ನು ಕತ್ತರಿಸಬಾರದು ಎಂದರೆ ದೊಡ್ಡವರಾಗಲಿ ಅಥವಾ ಚಿಕ್ಕವರಾಗಲಿ ಅವರು ಹುಟ್ಟಿದ ದಿನದಂದು ಯಾವುದೇ ಕಾರಣಕ್ಕೂ ಕೂದಲನ್ನು ಕತ್ತರಿಸಬಾರದು ಮತ್ತು ಹಬ್ಬದ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕೂದಲನ್ನು ಕತ್ತರಿಸಬಾರದು.
ಅಮಾವಾಸ್ಯೆ ಹುಣ್ಣಿಮೆ ದಿನಗಳಂದು ಕೂದಲನ್ನು ಕತ್ತರಿಸಲೇಬಾರದು .ಆದರೆ ಇತ್ತೀಚಿನ ಆಧುನಿಕ ದಿನಗಳಲ್ಲಿ ಕೆಲಸದ ಒತ್ತಡ ಮತ್ತು ಆಧುನಿಕ ಜೀವನ ಶೈಲಿಯಿಂದ ಹೆಣ್ಣು ಮಕ್ಕಳ ಸಮಯ ಮತ್ತು ದಿನಗಳನ್ನು ನೋಡದೆ ಕೂದಲನ್ನು ಕತ್ತರಿಸುತ್ತಾರೆ. ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು
ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದಿನವನ್ನು ಯಾವುದಾದರು ಒಂದು ದೇವರ ಹೆಸರಿನಲ್ಲಿ ಪೂಜಿಸುತ್ತಾ ಇರುತ್ತಾರೆ ಹೀಗಾಗಿ ನಾವು ಯಾವ ದಿನದಂದು ನಾವು ಕೂದಲನ್ನು ಕತ್ತರಿಸಬೇಕು ಎಂದರೆ ಅದಕ್ಕೆ ಸೂಕ್ತವಾದ ದಿನ ಬುಧವಾರ ಮತ್ತು ಸೋಮವಾರ ಈ ಎರಡು ದಿನಗಳು ತುಂಬಾ ಸೂಕ್ತವಾದ ದಿನಗಳು ಆಗಿದೆ ತುಂಬಾ ಜನರು ನೀವು ಬುಧವಾರ ಹುಟ್ಟಿದ್ದೀರಾ ಎಂದರೆ ನೀವು ಸೋಮವಾರ ಕೂದಲನ್ನು ಕತ್ತರಿಸಿಕೊಳ್ಳಬಹುದು
ಈ ದಿನಗಳನ್ನು ಬಿಟ್ಟು ನೀವು ಬೇರೆ ದಿನಗಳಲ್ಲಿ ಕೂದಲನ್ನು ಕತ್ತರಿಸಿಕೊಳ್ಳುವುದು ತುಂಬಾ ಸೂಕ್ತವಲ್ಲ ಮಂಗಳವಾರದ ದಿನ ನೀವು ಕೂದಲನ್ನು ಕತ್ತರಿಸಿಕೊಂಡರೆ ಇದು ಶರೀರದ ಮೇಲೆ ನೇರವಾಗಿ ನಕರತ್ಮಕ ಪರಿಣಾಮ ಬೀರುತ್ತದೆ ಮತ್ತು ಕೆಲವರು ಕೂದಲನ್ನು ಕತ್ತರಿಸಿಕೊಂಡು ಮನೆಗೆ ಬಂದ ನಂತರ ಸ್ನಾನವನ್ನು ಮಾಡುವುದಿಲ್ಲ ಮನೆಯಲ್ಲಿ ಓಡಾಡುತ್ತಾರೆ ಈ ರೀತಿ ನಾವು ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಕೂದಲನ್ನು ಮತ್ತು ಗುರುಗಳನ್ನು ಯಾವುದೇ ಕಾರಣಕ್ಕೂ ಸಂಜೆಯ ವೇಳೆಯಲ್ಲಿ ಕತ್ತರಿಸಬಾರದು