ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಮರ ನೆಡುವುದರಿಂದ ಶುಭ ಫಲ ಸಿಗುತ್ತದೆ. ಮನೆಗೆ ಚೆನ್ನಾಗಿ ಗಾಳಿ ಬೆಳಕು ನೀಡುವ ಗಿಡ ನೆಡುವುದು ಉತ್ತಮ ಎಂಬುದನ್ನು ಹಿರಿಯರು ಕೂಡ ಹೇಳುತ್ತಾರೆ. ಇನ್ನು ಇದೇ ವೇಳೆ ಮನೆಯ ಸುತ್ತಮುತ್ತ ಗಿಡ ನೆಡುವಾಗ ಈ ನಾಲ್ಕು ಗಿಡಗಳನ್ನು ನೆಡಬಾರದು.
ಮನೆಯಲ್ಲಿ ಉದ್ಯಾನವನ್ನು ಮಾಡಲು ಉತ್ತರ ಮತ್ತು ಪೂರ್ವ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳು ಉದ್ಯಾನಕ್ಕೆ ಒಳ್ಳೆಯದಲ್ಲ. ಆದರೆ, ನಿಮಗೆ ಯಾವುದೇ ಆಯ್ಕೆ ಇಲ್ಲದಿದ್ದರೆ, ಸಸ್ಯಗಳನ್ನು ಕುಂಡಗಳಲ್ಲಿ ನೆಡಬಹುದು.
ಹುಣಸೆ ಮರ : ಹುಣಸೆ ಮರ ನಮಗೆ ಎಷ್ಟೇ ಪ್ರಯೋಜನಕಾರಿಯಾದರೂ ಮನೆಯ ಸುತ್ತಮುತ್ತ, ಜಮೀನು, ತೋಟಗಳ ಸುತ್ತಮುತ್ತ ಈ ಮರಗಳು ಇರಬಾರದು ಎನ್ನುವುದು ವಾಸ್ತು ಜೊತೆಗೆ ಹಿಂದಿನಿಂದಲೂ ಬೆಳೆದು ಬಂದ ಸಂಪ್ರದಾಯ. ಹುಣಸೆ ಮರ ನಕರಾತ್ಮಕ ಶಕ್ತಿಯ ಸೆಳೆಯುತ್ತವೆ ಎಂಬ ನಂಬಿಕೆ ಇರುವುದರಿಂದ ಈ ಮರಗಳು ಮನೆಯ ಹಿಂದೆ ಮುಂದೆ ಇರದಂತೆ ನೋಡಿಕೊಳ್ಳಬೇಕು
ಹತ್ತಿ: ಹತ್ತಿ ಗಿಡಗಳು ಲಾಭಾದಾಯವಾದರೂ ಮನೆಯ ಸುತ್ತಮುತ್ತ ಇವು ಇರಬಾರದು. ಇವು ಬಡತನದ ಸಂಕೇತ ಎಂಬುದನ್ನು ವಾಸ್ತುವಿನಲ್ಲಿ ತಿಳಿಸಲಾಗಿದೆ. ಈ ಹಿನ್ನಲೆ ಈ ಗಿಡಗಳನ್ನು ಮನೆ ಸುತ್ತಮುತ್ತ ಇರದಂತೆ ನೋಡಿಕೊಳ್ಳಬೇಕು
ಅಕೇಶಿಯ ಸಸ್ಯ: ಔಷಧೀಯ ಸಸ್ಯ ಅಕೇಶಿಯಾ ಪ್ರಯೋಜನಕಾರಿಯಾದರೂ ಇವುಗಳನ್ನು ಮನೆಯ ಸುತ್ತಮುತ್ತ ಬೆಳೆಸಬಾರದು. ಸಮೃದ್ಧವಾಗಿ ಅಂಗಣದ ತುಂಬ ಬೆಳೆಯುವ ಈ ಗಿಡದಿಂದ ಸಮಸ್ಯೆಗಳು ಬೆಳೆಯುತ್ತವೆ ಎಂಬ ನಂಬಿಕೆ ಇದೆ.
ಮೆಹಂದಿ ಗಿಡ: ಮೆಹಂದಿ ಅಥವಾ ಗೋರಂಟಿ ಗಿಡ ಕೂಡ ಮನೆಯಲ್ಲಿ ಬೆಳೆಸುವುದರಿಂದ ನಕರಾತ್ಮಕ ಶಕ್ತಿ ಹೆಚ್ಚುತ್ತದೆ. ಇವು ಕೆಟ್ಟ ಆತ್ಮಗಳಿಗೆ ಆವಾಸಸ್ಥಾನವಾಗಿರುವ ಹಿನ್ನಲೆ ಇವುಗಳನ್ನು ಮನೆ ಸುತ್ತಮುತ್ತ ಬೆಳೆಸಬಾರದು.