ಬ್ರಾಹ್ಮಿ ಮುಹೂರ್ತದಲ್ಲಿ ಅಪ್ಪಿ ತಪ್ಪಿಯು ಈ ಕೆಲಸಗಳನ್ನು ಮಾಡಬೇಡಿ!

ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಕಾದರೆ ಒಳ್ಳೆಯ ದಿನ ಒಳ್ಳೆಯ ಸಮಯ ನೋಡಿ ಮಾಡುವುದು ವಾಡಿಕೆ ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತ ಎಂಬ ಈ ಸಮಯಕ್ಕೆ ಹಿಂದೂ ಧರ್ಮದಲ್ಲಿ ಸಾಕಷ್ಟು ಪ್ರಾಶಸ್ತ್ಯ ಕೊಡಲಾಗಿದೆ ಬ್ರಾಹ್ಮಿ ಮುಹೂರ್ತದ ಅವಧಿ ಎಂದರೆ ಸೂರ್ಯೋದಯಕ್ಕೆ ಒಂದುವರೆ ಗಂಟೆ ಮುಂಚೆ ಬ್ರಾಹ್ಮೀ ಮುಹೂರ್ತ 48 ನಿಮಿಷಗಳು ಮಾತ್ರ ಇರುತ್ತದೆ ಆಯುರ್ವೇದ ಪ್ರಕಾರ ಮುಂಜಾನೆಯ ಮೂರರಿಂದ ಆರು ಗಂಟೆಯ ನಡುವಿನ ಸಮಯವನ್ನೂ ಬ್ರಾಹ್ಮಿ ಮುಹೂರ್ತ ಎಂದು ಕರೆಯುತ್ತಾರೆ ಈ ಅಪೂರ್ವ ಸಮಯದಲ್ಲಿ ಪ್ರಾಣಿ ಮತ್ತು ಪಕ್ಷಿಗಳು ಎಚ್ಚರಗೊಳ್ಳುತ್ತವೆ

ಇವುಗಳ ಚಿಲಿಪಿಲಿ ಕಲರವ ಈ ಸಮಯದಲ್ಲಿ ಪ್ರಾರಂಭವಾಗುತ್ತದೆ ಬ್ರಹ್ಮ ಮುಹೂರ್ತದಲ್ಲಿ ಪ್ರಕೃತಿ ಪ್ರಭುದ್ಧವಾಗುತ್ತದೆ ಹಾಗೂ ಮೆಲ್ಲನೆ ದಿನದ ಆರಂಭಕ್ಕೆ ಪ್ರಾರಂಭವಾಗುತ್ತದೆ ಪ್ರಾಚೀನ ಕಾಲದಿಂದಲೂ ಬ್ರಾಹ್ಮಿ ಮುಹೂರ್ತಕ್ಕೆ ಬಹಳ ಪೂಜ್ಯನಿಯ ಎಂದು ಪರಿಗಣಿಸಲಾಗಿದೆ ಋಷಿಮುನಿಗಳು ಈ ಸಮಯಕ್ಕೆ ವಿಶೇಷವಾದ ಸ್ಥಾನಮಾನ ನೀಡಿದ್ದಾರೆ ಈ ಸಮಯದಲ್ಲಿ ಧ್ಯಾನ, ಯೋಗ,ಜಪ,ಪೂಜೆ ಮುಂತಾದ ಕಾರ್ಯಗಳನ್ನು ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದು ಪೂರ್ವಜರ ನಂಬಿಕೆ

ವೈಜ್ಞಾನಿಕ ದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಸ್ಥಾನವಿದೆ ಈ ಸಮಯದಲ್ಲಿ ವಾಯುಮಂಡಲ ಮಾಲಿನ್ಯದಿಂದ ಮುಕ್ತವಾಗುತ್ತದೆ ಆಮ್ಲಜನಕದ ಪ್ರಮಾಣ ಶೇಕಡ 41 ರಷ್ಟು ಇರುತ್ತದೆ ಇದರಿಂದ ನಮ್ಮ ಶ್ವಾಸಕೋಶಗಳು ಶುದ್ದಿಯಾಗುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಡೆಯುವವರ ಶರೀರದಲ್ಲಿ ಸಂಜೀವಿನಿ ವೃದ್ಧಿಯಾಗುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿ ಇರುತ್ತದೆ ಪ್ರಮುಖ ಮಂದಿರಗಳ ಮುಖ್ಯ ದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲಿ ದೇವರ ಶೃಂಗಾರ ಮತ್ತು ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ

ಸಂಶೋಧನೆಗಳ ಪ್ರಕಾರ ಬ್ರಾಹಿಮೂರ್ತದ ಅವಧಿಯಲ್ಲಿ ವಾತಾವರಣದಲ್ಲಿ ಹೊಸ ಆಮ್ಲಜನಕ ಲಭ್ಯವಿರುತ್ತದೆ ಈ ಪ್ರಾಣವಾಯು ಹಿಮೋಗ್ಲೋಬಿನ್ ನೊಂದಿಗೆ ಸುಲಭವಾಗಿ ಬೆರೆತು ಆಕ್ಸಿ ಹಿಮೋಗ್ಲೋಬಿನನ್ನು ರೂಪಿಸುತ್ತದೆ ಬ್ರಾಹ್ಮಿ ಮುಹೂರ್ತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ

ನಮ್ಮ ದೇಹದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ನೋವು ಮತ್ತು ಸೆಳೆತವನ್ನು ನಿವಾರಿಸುತ್ತದೆ ಖನಿಜಗಳು ಮತ್ತು ಜೀವ ಸತ್ವಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಅಧ್ಯಯನ ಮಾಡಲು ಬ್ರಹ್ಮ ಮುಹೂರ್ತ ಒಳ್ಳೆಯ ಸಮಯ ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ ಧ್ಯಾನಗಳನ್ನು ಮಾಡುವುದರಿಂದ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

Leave a Comment