ಹಿಂದೂ ಶಾಸ್ತ್ರದಲ್ಲಿ ಅಡುಗೆಮನೆ ಮತ್ತು ಅಲ್ಲಿರುವ ವಸ್ತುಗಳ ಮೇಲೆ ತುಂಬನೇ ಮಹತ್ವವನ್ನು ಕೊಟ್ಟಿದ್ದಾರೆ. ದೇವರಮನೆ ಇಲ್ಲದಿದ್ದರೆ ಅಡುಗೆ ಮನೆಯನ್ನು ದೇವರ ಮನೆಯೆಂದು ಪೂಜಿಸುತ್ತಾರೆ. ಅಡುಗೆ ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವಿನಲ್ಲೂ ಒಂದೊಂದು ಔಷಧೀಯ ಗುಣಗಳು ಇದ್ದೇ ಇರುತ್ತದೆ. ಇನ್ನು ಅಡುಗೆ ಮನೆ ಮಾತ್ರವಲ್ಲ ಮನೆಯಲ್ಲಿರುವ ಎಲ್ಲ ವಸ್ತುಗಳು ಕೂಡ ಜೀವನದ ಏರುಪೇರಿಗೆ ಕಾರಣ. ಅದು ಯಾವುದೇ ಎಂದು ನಾವು ನಿಮಗೆ ತಿಳಿಸುತ್ತೇವೆ.
ನೀರು: ನೀವು ಒಂದು ಮಾತನ್ನು ಕೇಳಿರಬಹುದು ದುಡ್ಡನ್ನು ನೀರಿನಂತೆ ಖರ್ಚು ಮಾಡಬಾರದು ಎಂದು. ಮನೆಯಲ್ಲಿ ಹೆಚ್ಚಾಗಿ ನೀರನ್ನು ಸುರಿದರೆ ಹಾಗೆ ಹಣವೂ ಕೂಡ ಖರ್ಚಾಗುತ್ತೆ. ತೂತು ಇರುವ ಮಡಿಕೆಗೆ ನೀರನ್ನು ತುಂಬಿಸಿ ಇಡಬಾರದು, ನಲ್ಲಿಗಳು ಸೂರ ಬಾರದು ಯಾಕೆಂದರೆ ಮನೆಯಲ್ಲಿ ಹೇಗೆ ಬಿಂದಿಗೆಯಲ್ಲಿ ನೀರು ಸೋರಿ ಹೋಗುತ್ತದೆ ಹಾಗೆ ಹಣವು ಕೂಡ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ ಎಂಬ ಒಂದು ಮಾತಿದೆ.
ಜೇಡರ ಬಲೆ: ಜೇಡರಬಲೆ ಮನೆಯಲ್ಲಿದ್ದರೆ ಕಷ್ಟ ಹಾಗೂ ಹಣವು ಅತೀ ಖರ್ಚಾಗುತ್ತದೆ. ಹಣ ಉಳಿಯುವುದಿಲ್ಲ ಆಗಾಗಿ ಜೇಡರಬಲೆ ಎಣೆಯದಂತೆ ಎಚ್ಚರವಹಿಸಿ. ಆಗಾಗ ಅಡಿಗೆಮನೆ ಮತ್ತೆ ಇಡೀ ಮನೆಯನ್ನು ಕ್ಲೀನ್ ಮಾಡ್ತಾ ಇರಿ.
ಒಡೆದ ವಸ್ತು: ಒಡೆದ ಕನ್ನಡಿ ಮತ್ತು ಮಡಿಕೆ ಹಾಗೆ ಇನ್ನಿತರ ವಸ್ತುಗಳನ್ನು ಮನೆಯಲ್ಲಿ ಹಿರೋದ ಹಾಗೆ ಎಚ್ಚರ ವಹಿಸಬೇಕು. ಒಡೆದ ಕನ್ನಡಿ ಮನೆಗೆ ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತದೆ. ತೂತು ಬಿದ್ದ ಪಾತ್ರೆಯನ್ನು ಮನೆಯಲ್ಲಿಟ್ಟುಕೊಂಡರೆ ಶನಿಕಾಟ ಶುರುವಾಗುತ್ತೆ ಎಂದು ಹೇಳುತ್ತಾರೆ. ಹಾಗೆ ಮನೆಯಲ್ಲಿ ನೀವು ಬಳಸದೆ ಇಟ್ಟಿರುವ ಚಪ್ಪಲಿಯನ್ನು ಮೊದಲು ಹೊರಗೆ ಹಾಕಬೇಕು..
ಬಾವಲಿ: ಇನ್ನು ಮನೆಗಳಲ್ಲಿ ಬಾವಲಿಗಳು ಇದ್ದರೆ ದುರದೃಷ್ಟ, ಬಡತನ, ಅನಾರೋಗ್ಯ ಬರುತ್ತದೆ.ಹಾಗಾಗಿ ಬಾವಲಿಗಳು ನಿಮ್ಮ ಮನೆಯನ್ನ ಸೇರದ ಹಾಗೆ ಎಚ್ಚರವಹಿಸಬೇಕು.ಇನ್ನು ಪಾರಿವಾಳ ನಿಮ್ಮ ಮನೆಯ ಹತ್ತಿರ ಮರಿ ಮಾಡುವುದು, ಮನೆ ಮಾಡಿಕೊಳ್ಳುವುದನ್ನು ತಪ್ಪಿಸಿ. ಪಾರಿವಾಳ ಮನೆಯತ್ತಿರ ಗೂಡನ್ನು ಕಟ್ಟಬಾರದು. ಪಾರಿವಾಳ ಮನೆಯಲ್ಲಿ ಇದ್ದರೆ ಬಡತನ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.
ಜೇನು:ಇನ್ನು ಜೇನು ಕೂಡ ಅಷ್ಟೇ ಮನೆ ಹತ್ತಿರ ಜೇನು ಕಟ್ಟಬಾರದು ಯಾಕೆಂದರೆ ಬಡತನ ಆವರಿಸುತ್ತದೆ ಎಂದು ಹೇಳುತ್ತಾರೆ. ಜೊತೆಗೆ ಅದು ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತದೆ.ಇನ್ನು ಮನೆಯ ಹಿಂದೆ ಮುಂದೆ ಇರುವ ಗಿಡಗಳು:ಇನ್ನೂ ಮನೆಯ ಹತ್ತಿರ ಇರುವ ಗಿಡಗಳು ಒಣಗಿ ಹೋಗದಂತೆ ನೋಡಿಕೊಳ್ಳಬೇಕು. ಅಕಸ್ಮಾತ್ ಅದು ಒಣಗಿ ಹೋದರೆ ಮೊದಲು ಅದನ್ನು ತೆಗೆದುಹಾಕಿ ಆ ಸ್ಥಳದಲ್ಲಿ ಮತ್ತೊಂದು ಗಿಡವನ್ನು ನೆಡಬೇಕು.
ತುಳಸಿ ಗಿಡ:ಇನ್ನು ಮನೆಯ ಬಳಿ ಇರುವ ತುಳಸಿಗಿಡ ಯಾವುದೇ ಕಾರಣಕ್ಕೂ ಒಣಗಿ ಹೋಗಬಾರದು. ಒಂದು ವೇಳೆ ಅದು ಒಣಗಿ ಹೋದರೆ ಅದು ಅಶುಭದ ಸೂಚನೆ.ಹಳೆಯ ಸಾಮಾನು:ಮನೆಯಲ್ಲಿ ಬೇಡದ ಮುರುಕಲು ಸಾಮಾನುಗಳು ಇದ್ದರೇ ಹೊರಗೆ ಹಾಕಿ. ಇನ್ನು ಮನೆಯಲ್ಲಿ ಪೈಂಟ್ ಏನಾದ್ರೂ ಉದುರ್ತ ಇದ್ರೆ ಅದನ್ನು ಸರಿ ಮಾಡಿ. ಯಾವುದೇ ರೀತಿಯ ವೈರ್ ಗಳು ಡ್ಯಾಮೇಜ್ ಆಗದಂತೆ ನೋಡಿಕೊಳ್ಳಿ.ಮೆಟ್ಟಿಲ ಮೇಲೆ ಮತ್ತು ಮೆಟ್ಟಿಲು ಕೆಳಗೆ, ಮನೆಯ ಮೇಲೆ ಸ್ಥಳ ಇದೆ ಎಂದು ಸಾಮಾನುಗಳನ್ನು ತುಂಬಬೇಡಿ. ಸಾಲಬಾಧೆ ಹಣದ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಅಡುಗೆ ಮನೆ ವಸ್ತುಗಳು:ನಾವು ಬಳಸುವ ಉಪ್ಪು,ಹುಣಸೆಹಣ್ಣು, ಮೆಣಸು ಸಾಸಿವೆ, ಮೆಣಸಿನಕಾಯಿ ಇದೆಲ್ಲಾ ಯಾವತ್ತು ಪೂರ್ತಿ ಖಾಲಿ ಆಗದಂತೆ ನೋಡಿಕೊಳ್ಳಬೇಕು. ಈ ವಸ್ತುಗಳು ಸ್ವಲ್ಪ ಉಳಿಯದೆ ಕಾಲಿ ಮಾಡಿದರೆ ಕುಬೇರರಾಗಿದ್ದರು ಕೂಡ ತಿರುಕರಾಗುವ ಕಷ್ಟ ಸಂದರ್ಭಗಳು ಬರುತ್ತದೆ. ಯಾವತ್ತು ಸ್ವಲ್ಪನೂ ಊಟ ಉಳಿಯದ ಹಾಗೆ ಮಾಡಬಾರದು. ಎರಡು ತುತ್ತಾದ್ರೂ ಸ್ವಲ್ಪ ಪಾತ್ರೆಯಲ್ಲಿ ಉಳಿಸಬೇಕು.ಹೀಗೆ ಮಾಡಿದ್ರೆ ಮನೆಯಲ್ಲಿ,ದಾರಿದ್ರ ಕಷ್ಟಗಳು ಬರುವುದಿಲ್ಲ.