ಅಪ್ಪಿತಪ್ಪಿಯೂ ಇಂದು ಈ ವಸ್ತುಗಳನ್ನು ಖರೀದಿಸಿದ್ರೆ ಬಡತನ ಕಟ್ಟಿಟ್ಟ ಬುತ್ತಿ!

ದೀಪಾವಳಿ ಸಂಪತ್ತಿನ ಸ್ವರೂಪ ಮಾತೆ ಧನಲಕ್ಷ್ಮಿ ಒಲಿಸಿಕೊಳ್ಳಲು ಅದ್ಭುತ ಘಳಿಗೆ ಹೊತ್ತು ತರುವ ಹಬ್ಬ. ಇಂದು ಧನತ್ರಯೋದಶಿ, ಇವತ್ತೇನಾದ್ರೂ ನೀವು ಮನೆಗೆ ಈ ಕೆಳಗೆ ಹೇಳಿರುವ ಕೆಲ ವಸ್ತುಗಳನ್ನು ಖರೀದಿ ಮಾಡಿ ತೆಗೆದುಕೊಂಡು ಹೊದ್ರೆ ಲಕ್ಷ್ಮೀದೇವಿಯು ನಿಮ್ಮ ಮನೆಯನ್ನು ತೊರೆಯುತ್ತಾಳೆ. ಆಗಿದ್ರೆ ಆ ವಸ್ತುಗಳು ಯಾವುವು ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳಿದೆ ಅಂತ ತಿಳ್ಕೋಳೋಕೆ ಈ ವರದಿ ಓದಿ.

ದೀಪಾವಳಿಯು ಧನತ್ರಯೋದಶಿಯಿಂದ ಪ್ರಾರಂಭವಾಗುತ್ತದೆ. ಧನತ್ರಯೋದಶಿ ದಿನದಂದು ಕೆಲವು ವಿಶೇಷ ವಸ್ತುಗಳ ಖರೀದಿಯು ಲಕ್ಷ್ಮಿಯ ಕೃಪ ಕಟಾಕ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಗೆ ಚಿನ್ನ-ಬೆಳ್ಳಿ, ಪಾತ್ರೆ, ವಾಹನ, ಇತ್ಯಾದಿಗಳನ್ನು ಖರೀದಿಸುವುದು ಶುಭ. ಈ ದಿನ, ಇಂತಹ ವಸ್ತುಗಳನ್ನು ಖರೀದಿಸುವುದರಿಂದ ಧನ್ವಂತರಿ ದೇವರು ಸಂತೋಷಗೊಂಡು ನಿಮ್ಮ ಮನೆಯಲ್ಲಿ ಹಣದ ಮಳೆ ಸುರಿಸುತ್ತಾನೆ ಎಂದು ನಂಬಲಾಗಿದೆ. ಆದರೆ ಜ್ಯೋತಿಷ ಶಾಸ್ತ್ರದಲ್ಲಿ ಕೆಲವು ವಸ್ತುಗಳ ಖರೀದಿಯನ್ನು ಅಶುಭವೆಂದು ಹೇಳಲಾಗುತ್ತದೆ. 

ಈ ದಿನ ನೀವು ಮರೆತೂ ಈ ವಸ್ತುಗಳನ್ನು ಖರೀದಿಸಬೇಡಿಕಬ್ಬಿಣದ ವಸ್ತುಗಳು : ಧನತ್ರಯೋದಶಿ ದಿನದಂದು ಏನನ್ನೂ ಖರೀದಿಸುವುದು ಶುಭವಲ್ಲ. ಈ ದಿನದಂದು ನೀವು ಕೆಲವು ವಿಶೇಷ ವಸ್ತುಗಳನ್ನು ಖರೀದಿಸಿದರೆ, ಅದು ನಿಮಗೆ ಬಡತನವನ್ನು ತರುತ್ತದೆ. ಈ ಶುಭ ದಿನದಂದು ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ತಪ್ಪಾಗಿ ಖರೀದಿಸಬಾರದು. 

ಚೂಪಾದ ವಸ್ತುಗಳು : ಈ ದಿನ ಸೂಜಿ, ಕತ್ತರಿ, ಚಾಕು, ಕತ್ತಿ ಇತ್ಯಾದಿಗಳನ್ನು ಖರೀದಿಸಬಾರದು. ಈ ವಸ್ತುಗಳ ಖರೀದಿಯಿಂದ ಭಗವಾನ್ ಧನ್ವಂತರಿ ದೇವ ಕೋಪಗೊಳ್ಳುತ್ತಾನೆ ಎಂದು ನಂಬಲಾಗಿದೆ. ಇದರಿಂದ ಮನೆಯಲ್ಲಿ ಅಶಾಂತಿ ಉಂಟಾಗಿ ಸುತ್ತಮುತ್ತಲಿನ ವಾತಾವರಣವೂ ಕೆಡುತ್ತದೆ.

ಗಾಜಿನ ವಸ್ತುಗಳು : ಗಾಜಿನ ಸಾಮಾನುಗಳನ್ನು ಖರೀದಿಸುವುದು ಕೂಡ ಶುಭವಲ್ಲ. ಇದು ಮಂಗಳಕರವಲ್ಲ. ರಾಹುಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ ದುಂದು ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಮನೆಯಲ್ಲಿ ಅವ್ಯವಸ್ಥೆಗಳು ಉಂಟಾಗುತ್ತವೆ.

Leave a Comment