ಗಿಡದಲ್ಲಿ ಹೂವು ಚೆನ್ನಾಗಿ ಬಿಡಬೇಕಾ. ಆಗಿದ್ದರೆ ತಿಂಗಳಿಗೆ ಒಮ್ಮೆ ಮೊಟ್ಟೆ ಸಿಪ್ಪೆ ಯಿಂದ ಈ ರೀತಿ ಮಾಡಿ ನೋಡಿ ಗಿಡದಲ್ಲಿ ತುಂಬಾ ಚೆನ್ನಾಗಿ ಹೂವು ಬಿಡುತ್ತೆ. ಗುಲಾಬಿ, ದಾಸವಾಳ, ಮಲ್ಲಿಗೆ ಯಾವುದೇ ಗಿಡ ಆಗಿರಲಿ ಗಿಡದ ತುಂಬಾ ಹೂವು ಬರಬೇಕು ಎಂದರೆ ಮೊಟ್ಟೆ ಸಿಪ್ಪೆಯಿಂದ ಬರೀ ಇಷ್ಟು ಮಾಡಿದರೆ ಸಾಕಾಗುತ್ತದೆ.
ಮೊದಲು ಮೊಟ್ಟೆ ಸಿಪ್ಪೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದರಲ್ಲಿ ನೀರು ಹಾಕಿ ಗಿಡಕ್ಕೆ ಹಾಕಿದರೆ ಗಿಡದಲ್ಲಿ ಹೂವು ಹೇರಳವಾಗಿ ಬಿಡುತ್ತದೆ. ತಿಂಗಳಿಗೆ ಒಮ್ಮೆ ಈ ರೀತಿ ಮಾಡಿದರೆ ಸಾಕು. ನೀವು ಯಾವ ಗಿಡಕ್ಕದರೂ ಬಳಸಬಹುದು. ಗಿಡದ ಬುಡಕ್ಕೆ ಹಾಕಿದರೆ ಸಾಕು ಗಿಡ ಚೆನ್ನಾಗಿ ಬೆಳೆದು ಹೂವು ಕೂಡ ಬಿಡುತ್ತದೆ.