ಹೊಸ ವರ್ಷ 2024 ಮೊದಲನೇ ತಿಂಗಳು ಜನವರಿ ತಿಂಗಳ ಮಾಸ ಭವಿಷ್ಯ ಮೇಷ ರಾಶಿಯವರಿಗೆ ಯಾವ ರೀತಿ ಇದೆ ಎಂದು ತಿಳಿಸಿಕೊಡುತ್ತೇವೆ.
7ನೇ ತಾರೀಕು 1ನೇ ತಿಂಗಳು 2024ಕ್ಕೆ ಬುಧ ನೇರವಾಗಿ ಚಲಿಸುತ್ತಾನೆ. ನಂತರ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. 14-01-2024 ರವಿ ಮಕರ ರಾಶಿಗೆ ಪ್ರವೇಶವನ್ನು ಮಾಡುತ್ತ ಎಲ್ಲರಿಗೂ ಮಕರ ಸಂಕ್ರಮಣ ಇರುತ್ತದೆ. 18-01-2024 ಶುಕ್ರ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಈ ಮೂರು ಗ್ರಹಗಳು ಈ ಜನವರಿ ತಿಂಗಳಿನಲ್ಲಿ ಬದಲಾವಣೆ ಆಗುತ್ತಿದೆ.
ಇನ್ನು ರವಿ 9 ಮತ್ತು 10 ನೇ ಮನೆಯಲ್ಲಿ ಸಂಚಾರ ಮಾಡಿದರೆ ಕುಜ 8ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಬುಧ 9ನೇ ಮನೆಯಲ್ಲಿಯೂ ಗುರು 1ನೇ ಮನೆಯಲ್ಲಿಯೂ ಶುಕ್ರ 8ನೇ,9ನೇ ಮನೆಯಲ್ಲಿಯೂ, ಶನಿ 11ನೇ ಮನೆ,ರಾಹು 12 ಕೇತು 6ನೇ ಮನೆಯಲ್ಲಿಯೂ ಸಂಚಾರವನ್ನು ಮಾಡುತ್ತಾರೆ.
ಈ ಸಂಚಾರದ ಸ್ಥಿತಿ ಗತಿಗಳಿಂದ ಜನವರಿ 2024 ಮೇಷ ರಾಶಿಯವರಿಗೆ ಗುರುವಿನ ಸ್ಥಾನದಿಂದ ಅರ್ಧಕಷ್ಟು ಫಲಗಳು ಶುಭವಿದ್ದು ಮತ್ತು ಅರ್ಧ ಅಶುಭ ಫಲಗಳನ್ನು ಕೊಡುತ್ತಾನೆ. ಅಶುಭ ಎಂದರೆ ದೇಹದ ಮೇಲೆ ಸಮಸ್ಸೆ ಆಗುವುದು. ಮದುವೆ ನಿಶ್ಚಯ ಮಾಡುವುದಕ್ಕೆ ಇದು ಒಳ್ಳೆಯ ದಿನವಾಗಿರುತ್ತದೆ. ಈ ಸಮಯದಲ್ಲಿ ಉತ್ತಮ ಜ್ಞಾನ ಪ್ರಾಪ್ತಿಯಾಗುವ ಯೋಗ ಇರುತ್ತದೆ.
ಅಣ್ಣ ತಮ್ಮಂದಿರು ಒಳ್ಳೆಯ ಬೆಳವಣಿಗೆಯನ್ನು ಕಾಣಲಿದ್ದಿರಿ. ಇನ್ನು 11ನೇ ಮನೆಯಲ್ಲಿ ಇರುವ ರಾಹುವು ನಿಮಗೆ ವೈರಾಗ್ಯವನ್ನು ಸೃಷ್ಟಿ ಮಾಡುತ್ತಾನೆ.ಹಾಗಾಗಿ ಅಷ್ಟೊಂದು ರಾಹುವಿನ ಸ್ಥಾನಮಾನಗಳು ಅಷ್ಟೊಂದು ಚೆನ್ನಾಗಿ ಇಲ್ಲಾ. ಮೇಷ ರಾಶಿಯವರಿಗೆ ಕೋಪ ಜಾಸ್ತಿ ಹಾಗಾಗಿ ಸ್ವಲ್ಪ ಕೋಪ ಕಡಿಮೆ ಮಾಡಿಕೊಂಡರೆ ತುಂಬಾ ಒಳ್ಳೆಯದು. ಆದಷ್ಟು ದುಡ್ಡು ವೆಚ್ಚವನ್ನು ಮಾಡಬೇಡಿ.
ಇನ್ನು ಜನವರಿಯಲ್ಲಿ ನಿಮಗೆ ಅನಿರೀಕ್ಷಿತಾವಾಗಿ ಮತ್ತು ಆಕಸ್ಮಿಕವಾಗಿ ಧನ ಲಾಭಗಳು ಉಂಟಾಗುತ್ತದೆ. ಭೂಮಿಗೆ ಸಂಬಂಧವಾದ ವಿಚಾರಗಳಲ್ಲಿ ಲಾಭಗಳು ಬರುವಂತಹದು. ಪಿತ್ರರ್ಜಿತ ಆಸ್ತಿಯ ಹೋಗೀ ತುಂಬಾ ಒಳ್ಳೆಯ ರೀತಿಯಾದ ಬೆಳವಣಿಗೆ ನಿಮ್ಮ ಜೀವನದಲ್ಲಿ ಆಗುತ್ತದೆ. ಕಾರ್ಯದಲ್ಲಿ ಗಳಿಕೆ ಜಾಸ್ತಿ ಆಗುತ್ತದೆ ಮತ್ತು ಉನ್ನತವಾದ ಶುಭ ಫಲಗಳು ನಿಮಗೆ ಸಿಗುತ್ತದೆ. ವ್ಯವಸಾಯ ಮಾಡುವವರಿಗೆ ಲಾಭಗಳು ತುಂಬಾ ಚೆನ್ನಾಗಿ ಆಗುತ್ತದೆ. ನಿಮಗೆ ಆದಾಯದ ಮೂಲ ಜಾಸ್ತಿ ಆಗುತ್ತದೆ.
ವಿದ್ಯಾರ್ಥಿಗಳಿಗೆ ಶುಭ ಇದೆ. ಮನೆ ಕಟ್ಟುವವರಿಗೆ ಒಳ್ಳೆಯ ಲಾಭಗಳು ಸಿಗುತ್ತವೆ.ಮೇಷ ರಾಶಿಯವರಿಗೆ ಒಳ್ಳೆಯ ಯೋಗ ಫಲಗಳು ಇದ್ದಾವೆ ಮತ್ತು ಆರೋಗ್ಯದ ಕಡೆ ಸ್ವಲ್ಪ ಜಾಗ್ರತೆ ವಹಿಸಿದರೆ ಒಳ್ಳೆಯದು.ಆದಷ್ಟು ದೇವಸ್ಥಾನಕ್ಕೆ ಹೋಗುವುದನ್ನು ಮರೆಯಬೇಡಿ.