ನವದೆಹಲಿ: 2022ನೇ ಸಾಲಿನ 15ನೇ ಆವೃತ್ತಿಯ ಏಷ್ಯಾಕಪ್ ವೇಳಾಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿಗೆ ಡೇಟ್ ಫಿಕ್ಸ್ ಆಗಿದೆ.
ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಒಟ್ಟು 13 ಟಿ-20 ಪಂದ್ಯಗಳು ನಡೆಯಲಿವೆ. ಆ.27ರಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ನಡುವೆ ಏಷ್ಯಾಕಪ್ ಉದ್ಘಾಟನಾ ಪಂದ್ಯ ನಡೆಯಲಿದೆ. ಆ.28ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಸೆಪ್ಟೆಂಬರ್ 11ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: CWG Cycling 2022: ಪದಕ ಗೆಲ್ಲುವ ತವಕದಲ್ಲಿದ್ದ ಭಾರತೀಯ ಸೈಕ್ಲಿಸ್ಟ್ ಮೀನಾಕ್ಷಿಗೆ ಅಪಘಾತ!
ಈ ಬಾರಿಯ ಏಷ್ಯಾಕಪ್ ಟೂರ್ನಿಯ ಆತಿಥ್ಯವನ್ನು ಶ್ರೀಲಂಕಾ ವಹಿಸಿಕೊಳ್ಳಬೇಕಿತ್ತು. ಆದರೆ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ದ್ವೀಪರಾಷ್ಟ್ರದ ಪರಿಸ್ಥಿತಿ ಹದಗೆಟ್ಟಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಒಟ್ಟು 6 ತಂಡಗಳನ್ನು 2 ಗ್ರೂಪ್‍ಗಳಾಗಿ ವಿಂಗಡಿಸಿ ಟೂರ್ನಿಯನ್ನು ಆಯೋಜಿಸಲಾಗಿದೆ. ಈಗಾಗಲೇ 5 ತಂಡಗಳು ನೇರ ಅರ್ಹತೆ ಗಿಟ್ಟಿಸಿದ್ದರೆ, ಇನ್ನೊಂದು ತಂಡ ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಬೇಕಿದೆ.
Men’s #AsiaCup2022 schedule released. India will face Pakistan on 28th August. pic.twitter.com/TiTqVgiUYL
— ANI (@ANI) August 2, 2022
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಪ್ರಾರಂಭವಾಗಲಿವೆ. 2018ರ ಯುಎಇಯಲ್ಲಿ ಕೊನೆ ಬಾರಿಗೆ ಏಷ್ಯಾಕಪ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಮಣಿಸಿ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದನ್ನೂ ಓದಿ: Team India: ರೋಹಿತ್ ಬಳಿಕ ಈ ನಾಲ್ವರು ಭಾರತ ತಂಡದ ಮುಂದಿನ ನಾಯಕರಾಗಬಹುದು!
ಏಷ್ಯಾಕಪ್ ತಂಡಗಳು ಇಂತಿವೆ
Group A: ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡ
Group B ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ
ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಇಂತಿದೆ
1) ಆಗಸ್ಟ್ 27 | ಶ್ರೀಲಂಕಾ V/s ಅಫ್ಘಾನಿಸ್ತಾನ | ದುಬೈ |
2) ಆಗಸ್ಟ್ 28 | ಭಾರತ V/s ಪಾಕಿಸ್ತಾನ | ದುಬೈ |
3) ಆಗಸ್ಟ್ 30 | ಬಾಂಗ್ಲಾದೇಶ V/s ಅಫ್ಘಾನಿಸ್ತಾನ | ಶಾರ್ಜಾ |
4) ಆಗಸ್ಟ್ 31 | ಭಾರತ V/s ಕ್ವಾಲಿಫೈಯರ್ | ದುಬೈ |
5) ಸೆಪ್ಟೆಂಬರ್ 01 | ಶ್ರೀಲಂಕಾ V/s ಬಾಂಗ್ಲಾದೇಶ | ದುಬೈ |
6) ಸೆಪ್ಟೆಂಬರ್ 02 | ಪಾಕಿಸ್ತಾನ V/s ಕ್ವಾಲಿಫೈಯರ್ | ಶಾರ್ಜಾ |
ಸೂಪರ್ 4 ಹಂತದ ಪಂದ್ಯಗಳು
7) ಸೆಪ್ಟೆಂಬರ್ 03 | B1 V/s B2 | ಶಾರ್ಜಾ |
8) ಸೆಪ್ಟೆಂಬರ್ 04 | A1 V/s A2 | ದುಬೈ |
9) ಸೆಪ್ಟೆಂಬರ್ 06 | A1 V/s B1 | ದುಬೈ |
10) ಸೆಪ್ಟೆಂಬರ್ 07 | A2 V/s B2 | ದುಬೈ |
11) ಸೆಪ್ಟೆಂಬರ್ 08 | A1 V/s B2 | ದುಬೈ |
12) ಸೆಪ್ಟೆಂಬರ್ 09 | B1 V/s A2 | ದುಬೈ |
13) ಸೆಪ್ಟೆಂಬರ್ 11 | ಫೈನಲ್ 1st Super 4 V/s 2nd Super 4 | ದುಬೈ |
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.