Lucky Zodiac Sign For August 2022: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿದಾಗ ಅದರ ಶುಭ ಹಾಗೂ ಅಶುಭ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಉಂಟಾಗುತ್ತದೆ. ಇನ್ನೇನು ಆಗಸ್ಟ್ ತಿಂಗಳು ಆರಂಭಗೊಳ್ಳುತ್ತಲೇ ಇದೆ. ಹೀಗಿರುವಾಗ ಮತ್ತೆ ಕೆಲ ಗ್ರಹಗಳು ತನ್ನ ಸ್ಥಾನವನ್ನು ಪಲ್ಲಟಗೊಳಿಸುತ್ತಿವೆ. ಈ ಗ್ರಹಗಳ ರಾಶಿ ಪರಿವರ್ತನೆ ಕೆಲ ರಾಶಿಗಳ ಜಾತಕದವರ ಮೇಲೆ ಗೋಚರಿಸಲಿದೆ. ಆಗಸ್ಟ್ ತಿಂಗಳಿನಲ್ಲಿ ಒಟ್ಟು 4 ದೊಡ್ಡ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸಲಿವೆ.
ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 17ರಂದು ಗ್ರಹಗಳ ರಾಜ ಸೂರ್ಯ ತನ್ನದೇ ಆದ ಸಿಂಹ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಇನ್ನೊಂದೆಡೆ ಆಗಸ್ಟ್ 10ರಂದು ಮಂಗಳ ಹಾಗೂ ಎರಡನೇ ಬಾರಿಗೆ ಶುಕ್ರ ಗೋಚರ ನಡೆಯಲಿದೆ. ಆಗಸ್ಟ್ 20ರಂದು ಬುಧ ಗ್ರಹ ಗೋಚರದಿಂದ ಹಲವು ರಾಶಿಗಳ ಜನರಿಗೆ ಲಾಭ ಉಂಟಾಗಲಿದೆ. ಆಗಸ್ಟ್ ತಿಂಗಳಿನಲ್ಲಿ ಕೆಲ ರಾಶಿಗಳ ಜಾತಕದವರಿಗೆ ಧನಲಾಭ ಹಾಗೂ ಬಡ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಶಿಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
ಮಿಥುನ ರಾಶಿ – ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳು ಮಿಥುನ ರಾಶಿಯ ಜಾತಕದವರ ಪಾಲಿಗೆ ತುಂಬಾ ಲಾಭಕಾರಿ ಸಾಬೀತಾಗಲಿದೆ. ಮಿಥುನ ರಷಿಯ ಸ್ವಾಮಿ ಗ್ರಹ ಬುಧ ಹಾಗೂ ಆಗಸ್ಟ್ 20ರಂದ್ಹ್ ನಡೆಯಲಿರುವ ಬುಧ ಗೋಚರದಿಂದ ನಿಮ್ಮ ಪಾಲಿಗೆ ರಾಜಯೋಗ ನಿರ್ಮಾಣಗೊಳ್ಳಲಿದೆ. ಇದರಿಂದ ಆಕಸ್ಮಿಕ ಧನಲಾಭದ ಸಾಧ್ಯತೆ ಇದೆ. ಹೊಸ ನೌಕರಿ ಅವಕಾಶ ನಡೆದುಕೊಂಡು ಬರಲಿದೆ. ನೌಕರಿಯಲ್ಲಿರುವವರಿಗೆ ಪ್ರಮೋಶನ್ ಸಿಗುವ ಸಾಧ್ಯತೆ ಇದೆ.
ಕನ್ಯಾ ರಾಶಿ – ಈ ರಾಶಿಯ ಜಾತಕದವರ ಪಾಲಿಗೆ ಆಗಸ್ಟ್ ತಿಂಗಳು ಶುಭ ಫಲದಾಯಿ ಸಾಬೀತಾಗಲಿದೆ. ಈ ರಾಶಿಗೆ ಬುಧ ಅಧಿಪತಿ. ಹೀಗಾಗಿ ಬುಧ ಗೋಚರದಿಂದ ಈ ರಾಶಿಯ ಜಾತಕದವರ ಪಾಲಿಗೆ ಹಂಸ ಹಾಗೂ ಭದ್ರ ಹೆಸರಿನ ಎರಡು ರಾಜಯೋಗಗಳು ನಿರ್ಮಾಣಗೊಳ್ಳಲಿವೆ. ಇದರಿಂದ ವ್ಯವಹಾರದಲ್ಲಿ ಉತ್ತಮ ಧನಲಾಭವಾಗುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಯಶಸ್ಸು ಇರಲಿದೆ. ಇದರ ಜೊತೆಗೆ ಈ ರಾಶಿಯ ಲಾಭ ಸ್ಥಾನದಲ್ಲಿ ಶುಕ್ರ ವಿರಾಜಮಾನನಾಗಿದ್ದಾನೆ. ಶುಕ್ರ ನಿಮ್ಮ ಆದಾಯವನ್ನು ಹೆಚ್ಚಿಸಲಿದ್ದಾನೆ.
ಇದನ್ನೂ ಓದಿ-ಸಂಸಪ್ತಕ ಯೋಗದಿಂದ ಈ ರಾಶಿಯವರಿಗೆ ಭಾರೀ ಸಂಕಷ್ಟ: ಸೂರ್ಯ-ಶನಿಯಿಂದ ಸಮಸ್ಯೆ ಮತ್ತಷ್ಟು ಹೆಚ್ಚು!
ಧನು ರಾಶಿ – ಆಗಸ್ಟ್ ತಿಂಗಳಿನಲ್ಲಿ ಧನು ರಾಶಿಯ ಜಾತಕದವರಿಗೆ ಭಾರಿ ಧನಲಾಭ ಕಾದಿದೆ. ಈ ಗೋಚರ ನಿಮ್ಮ ಪಾಲಿಗೂ ಕೂಡ ಹಂಸ ಹಾಗೂ ಭದ್ರ ಹೆಸರಿನ ಎರಡು ರಾಜಯೋಗಗಳನ್ನು ನಿರ್ಮಾಣ ಮಾಡಲಿದೆ. ಸೂರ್ಯನ ಗೋಚರ ಭಾಗ್ಯಸ್ಥಾನದಲ್ಲಿ ನಡೆಯಲಿದೆ. ಇದರಿಂದ ವಿದೇಶದಿಂದ ಅಪಾರ ಧನಲಾಭ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೊಸ ಆರ್ಡರ್ ಗಳು ಸಿಗುವ ಸಾಧ್ಯತೆ ಇದೆ. ಸಿಲುಕಿಹಾಕಿಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ.
ಇದನ್ನೂ ಓದಿ-Turmeric Milk Side Effects ಅರಿಶಿಣ ಹಾಲು ಸೇವನೆಯಿಂದಲೂ ಕೂಡ ಅಡ್ಡ ಪರಿಣಾಮಗಳು ಸಂಭವಿಸುತ್ತವೆ, ಎಚ್ಚರ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.