Banana Tree Vastu :ಭಾರತ ಸಂಸ್ಕೃತಿ ಹಾಗೂ ವಾಸ್ತು ಶಾಸ್ತ್ರದಲ್ಲಿ ಬಾಳೆ ಮರಕ್ಕೆ ವಿಶೇಷವಾದ ಸ್ಥಾನವಿದೆ. ಇದು ವಿಷ್ಣುವಿಗೆ ಸಂಬಂಧಿಸಿದ ಗಿಡ ಎಂದು ಪರಿಗಣಿಸಲಾಗಿದೆ. ಬಾಳೆ ಗಿಡದ ಪೂಜೆ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ.ಬಾಳೆ ಗಿಡ ಗುರು ಗ್ರಹಕ್ಕೆ ಸಂಬಂಧಿಸಿದೇ.ಬಾಳೆ ಮರದ ಎಲೆಗಳಿಗೆ ಆಚರಣೆಗಳಲ್ಲಿ ಸಮಾರಂಭಗಳಲ್ಲಿ ವಿಶೇಷವಾದ ಸ್ಥಾನವಿದೆ.ಈ ಬಾಳೆ ಎಲೆಯಲ್ಲಿ ಊಟ ಹಾಕುವುದು ಕೂಡ ಸಂಪ್ರದಾಯಗಳಲ್ಲಿ ವಿಶೇಷವಾಗಿ ಇರುತ್ತದೆ.ಈ ಬಾಳೆ ಎಲೆಯಲ್ಲಿ ಊಟ ಮಾಡುವಾಗ ಸಿಗುವ ತೃಪ್ತಿನೆ ಬೇರೆ.ಈ ಬಾಳೆ ಮರದ ಎಲ್ಲಾ ಭಾಗಗಳು ಉಪಯೋಗಕ್ಕೆ ಬರುತ್ತವೆ.
ಬಾಲೆ ಮರದ ಎಲ್ಲಾ ಭಾಗದಲ್ಲೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಮತ್ತು ಅನೇಕ ಉಪಯೋಗಗಳು ಇದೆ.ಅದರಲ್ಲೂ ಬಾಳೆ ಹಣ್ಣು ಸೇವನೇ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಹಲವಾರು ಅರೋಗ್ಯ ಪ್ರಾಯೋಜನ ಇರುವ ಬಾಳೆ ಹಣ್ಣಿನ ಗಿಡವನ್ನು ಮನೆಯ ಆವರಣದಲ್ಲಿ ಬೆಳೆಸಬಹುದಾ ಎನ್ನುವ ಅನುಮನ ಪ್ರತಿಯೊಬ್ಬರಿಗೂ ಇದೆ.
ವಾಸ್ತು ಶಾಸ್ತ್ರದ ಪ್ರಕಾರ ಬಾಳೆಹಣ್ಣಿನ ಗಿಡವನ್ನು ಮನೆಯ ಆವರಣದಲ್ಲಿ ನೆಡುವುದರಿಂದ ಅನೇಕ ಪ್ರಯೋಜನಗಳು ಇದೆ.ನಿಮ್ಮ ಜಾತಕದಲ್ಲಿ ಗುರುವಿಗೆ ಸಂಬಂಧಿಸಿದಂತೆ ದೋಷ ಇದ್ದಾರೆ ಬಾಳೆ ಹಣ್ಣಿನ ಗಿಡ ಹಾಕುವುದರಿಂದ ಒಳ್ಳೆಯದು ಆಗುತ್ತದೆ ಮತ್ತು ಮನೆಯಲ್ಲಿ ಇರುವ ಮಕ್ಕಳ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ.
ಮನೆಯಲ್ಲಿ ಯಾರಿಗಾದರೂ ವಿವಾಹದ ವಿಚಾರದಲ್ಲಿ ಅಡೆತಡೆಗಳು ಉಂಟಾಗುತ್ತಿದ್ದಾರೆ ಮನೆಯ ಆವರಣದಲ್ಲಿ ಬಾಳೆ ಗಿಡ ಹಾಕುವುದರಿಂದ ನಿವಾರಣೆ ಆಗುತ್ತದೆ.ನಿಮ್ಮ ಜಾತಕದಲ್ಲಿ ಇರುವ ದೋಷ ನಿವಾರಣೆ ಆಗಿ ಅರೋಗ್ಯ ಆಯಸ್ಸು ವೃದ್ಧಿ ಆಗುತ್ತದೆ.
ಐಶ್ವರ್ಯ ಮತ್ತು ಅರೋಗ್ಯ ವೃದ್ಧಿ ಆಗುವುದಕ್ಕೆ ಬಾಳೆ ಹಣ್ಣಿನ ಗಿಡವನ್ನು ಬೆಳೆಸುವುದು ಒಳ್ಳೆಯದು.ಇದರಿಂದ ವಿಷ್ಣು ಹಾಗೂ ಲಕ್ಷ್ಮಿ ದೇವಿ ಸುಪ್ರಿತಾರಾಗುತ್ತಾರೆ.ಇದರಿಂದ ಸುಖ ಶಾಂತಿ ಅರೋಗ್ಯ ಸಂಪತ್ತು ನಿಮ್ಮ ಮನೆಗೆ ಬಂದು ನೆಲೆಸುತ್ತದೆ.ವಾಸ್ತು ವಾಸ್ತು ಶಾಸ್ತ್ರದ ಪ್ರಕಾರ ಬಾಳೆಹಣ್ಣಿನ ಮರವನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಬೆಳೆಸುವುದು ಒಳ್ಳೆಯದು. ಇಲ್ಲವಾದರೆ ಉತ್ತರದಿಕ್ಕಿನಲ್ಲಿ ಕೂಡ ಬೆಳೆಸಬಹುದು.ಅದರೆ ಯಾವುದೇ ಕಾರಣಕ್ಕೂ ನಿಮ್ಮ ಬೆಡ್ ರೂಮ್ ಹತ್ತಿರ ಬಾಳೆ ಹಣ್ಣಿನ ಗಿಡವನ್ನು ಬೆಳೆಸಬಾರದು. ಇದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ವಾಸ್ತು ಶಾಸ್ತ್ರದ ಪ್ರಕಾರ ತುಳಸಿಗಿಡದೊಂದಿಗೆ ಬಾಳೆ ಗಿಡಗಳನ್ನು ಬೆಳೆಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಇನ್ನು ಮುಖ್ಯವಾಗಿ ತುಳಸಿ ಗಿಡ ಬಾಳೆ ಗಿಡದ ಎಡ ಭಾಗದಲ್ಲಿ ಇರಬೇಕು ಮತ್ತು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಇದರಿಂದ ಬಾಳೆ ಮರ ಆರೋಗ್ಯವಾಗಿ ಬೆಳೆಯುತ್ತದೆ.ಪಾಸಿಟಿವ್ ಎನರ್ಜಿ ಅನ್ನು ಆಕರ್ಷಣೆ ಮಾಡುತ್ತದೆ.Banana Tree Vastu