ಪುರುಷರೆ ಎಚ್ಚರ! ಆತ್ಮವಿಶ್ವಾಸದ ಕೊರತೆ!

ಆಧುನಿಕ ಮನೋವಿಜ್ಞಾನಕ್ಕೆ ಹೆಚ್ಚು ಬಲಿ ಆಗುತ್ತಿದ್ದಾನೆ ಪುರುಷ ವರ್ಗ. ಒಬ್ಬಟ್ಟಿ ಪುರುಷರು ತಮ್ಮ ಜೀವನದಲ್ಲಿ ಆತ್ಮ ವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದಾರೆ. ಒಂಟಿತನ ಕೊರತೆಯಿಂದ ಬಳಲುತ್ತಾರೆ. ಇದರಿಂದ ಪುರುಷರು ವಿಡಿಯೋ ಗೇಮ್ ಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಆನ್ಲೈನ್ ಸಂಬಂಧಗಳನ್ನು ಬೆಳೆಸುವಂತ ಗಮನವರೆಸುತ್ತಾರೆ.

ತಮ್ಮ ಭಾವನೆಗಳನ್ನು ಹೇಳಿಕೊಳ್ಳಲಾಗದೇ ಆಂತರಿಕವಾಗಿ ನೋವನ್ನುಣ್ಣುವ ಹಲವಾರು ಪುರುಷರು ಸಮಾಜದಲ್ಲಿದ್ದು ಇದು ಅವರನ್ನು ಇನ್ನಷ್ಟು ಒಂಟಿತನದಿಂದ ಬಳಲುವಂತೆ ಮಾಡಿದೆ. ಇದಕ್ಕೆ ಪರಿಹಾರವಿಲ್ಲವೇ ಎಂದು ಕೇಳುವುದಾದರೆ ಪರಿಹಾರವಿದೆ ಆದರೆ ಸೂಕ್ತ ಬೆಂಬಲ ಹಾಗೂ ಆರೈಕೆಯನ್ನು ನೀಡಬೇಕಾಗುತ್ತದೆ. ಜೊತೆಗೆ ಕುಟುಂಬದವರ ಪ್ರೀತಿ ಕೂಡ ಪುರುಷರಲ್ಲಿರುವ ಒಂಟಿತನವನ್ನು ನಿವಾರಿಸುವ ಪರಿಹಾರವಾಗಿದೆ.

ಪುರುಷರು ಒಂಟಿತನದಿಂದ ಬಳಲುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಕೆಲವೊಂದು ಗುಣಲಕ್ಷಣಗಳಿವೆ. ಅವರು ಇಂತಹ ಲಕ್ಷಣಗಳನ್ನು ಪ್ರದರ್ಶಿಸಿದರೆ ಒಂಟಿತನದಿಂದ ಬಳಲುತ್ತಿದ್ದಾರೆ ಹಾಗೂ ಅವರಿಗೆ ಸೂಕ್ತ ಧೈರ್ಯ, ಬೆಂಬಲವನ್ನೊದಗಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ.

ಒಂಟಿತನದಿಂದ ಬಳಲುವ ಪುರುಷರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಒಂದು ರೀತಿಯ ಗೊಂದಲಮಯ ಜೀವನದಲ್ಲಿ ಬದುಕುತ್ತಿರುತ್ತಾರೆ. ಸಾಕಷ್ಟು ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ತಮ್ಮ ಏಕಾಂಗಿತನವನ್ನು ದೂರಮಾಡಲು ಪ್ರಯತ್ನಿಸುತ್ತಾದರೂ ಅದರಲ್ಲಿ ವಿಫಲರಾಗುತ್ತಾರೆ.

ಅತಿಯಾಗಿ ಸ್ವತಂತ್ರ ವ್ಯಕ್ತಿಯಂತೆ ತೋರ್ಪಡಿಸಿಕೊಳ್ಳುತ್ತಾರೆ

ಒಂಟಿತನದಿಂದ ಬಳಲುತ್ತಿರುವವರು ತಮ್ಮ ಮೇಲೆ ಹೆಚ್ಚು ಅವಲಂಬಿತರಾದಂತೆ ಹಾಗೂ ಸ್ವತಂತ್ರ ವ್ಯಕ್ತಿಗಳಂತೆ ತೋರ್ಪಡಿಸಿಕೊಳ್ಳುತ್ತಾರೆ. ನಾನು ಚೆನ್ನಾಗಿದ್ದೇನೆ ಖುಷಿಯಾಗಿದ್ದೇನೆ ಎಂದು ನಟಿಸುತ್ತಾರೆ. ಆದರೆ ದಿನದಿಂದ ದಿನಕ್ಕೆ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮ ಹದಗೆಟ್ಟಾಗ ಕುಸಿಯುತ್ತಾರೆ.

ಮನದಲ್ಲಿನ ತೊಳಲಾಟವನ್ನು ಇತರರೊಂದಿಗೆ ಹಂಚಿಕೊಳ್ಳಲು ಕಷ್ಟಪಡುತ್ತಾರೆ

ಒಂಟಿತನದಲ್ಲಿ ತೊಳಲಾಡುವ ಪುರುಷರು ತಮ್ಮ ಸ್ನೇಹಿತರೊಂದಿಗೆ ಕೂಡ ತಮ್ಮ ಮಾನಸಿಕ ಸಂಕಟಗಳನ್ನು ಹೇಳಿಕೊಳ್ಳಲು ಕಷ್ಟಪಡುತ್ತಾರೆ. ನನ್ನನ್ನು ಏನಾದರೂ ತಪ್ಪು ತಿಳಿದುಕೊಂಡರೆ ಎಂಬ ಭಯದಲ್ಲಿ ಏನನ್ನು ಹೇಳಿಕೊಳ್ಳದೇ ಮೂಕವಾಗಿ ರೋಧಿಸುತ್ತಾರೆ.

ಸಾಂದರ್ಭಿಕ ಚಿತ್ರ

ನಿಮ್ಮ ಒಂಟಿತನಕ್ಕೆ ಪರಿಹಾರವೆಂದರೆ ಯಾರಾದರೂ ಒಬ್ಬ ಒಳ್ಳೆಯ ಸ್ನೇಹಿತನ ಬಳಿ ನಿಮ್ಮ ಮನಸ್ಸಿನ ನೋವನ್ನು ಹಂಚಿಕೊಳ್ಳುವುದಾಗಿದೆ ಇಲ್ಲದಿದ್ದರೆ ನಿರಾಳವಾಗಿ ಅತ್ತುಬಿಡುವುದಾಗಿದೆ. ಇದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ.

ಆನ್‌ಲೈನ್ ಸಂಬಂಧಗಳನ್ನು ಬೆಳೆಸುವತ್ತ ಗಮನಹರಿಸುತ್ತಾರೆ

ಇಂಟರ್ನೆಟ್‌ಗಿಂತ ನೈಜ ಪ್ರಪಂಚದಲ್ಲಿ ಬಂಧಗಳನ್ನು ಸ್ಥಾಪಿಸಿಕೊಳ್ಳುವುದು ಹೆಚ್ಚು ಭಯಾನಕ ಎಂಬುದು ಒಂಟಿತನ ಅನುಭವಿಸುವ ಪುರುಷರ ವಾದವಾಗಿದೆ.

ಮನೆಯಲ್ಲಿದ್ದುಕೊಂಡೇ ನಾಲ್ಕು ಗೋಡೆಗಳ ನಡುವೆಯೇ ಆನ್‌ಲೈನ್ ಸಂಬಂಧಗಳನ್ನು ನಿರ್ಮಿಸಿಕೊಳ್ಳುವುದನ್ನು ಅವರು ಆರಾಮ ಎಂದು ಪರಿಗಣಿಸುತ್ತಾರೆ.ಆದರೆ ಇದು ಕ್ಷಣಿಕ ಎಂಬುದನ್ನು ಅವರು ಮನಗಾಣುವುದಿಲ್ಲ. ಆನ್‌ಲೈನ್ ಸ್ನೇಹಿತರೊಂದಿಗೆ ನಿಮ್ಮ ಮನಸ್ಸಿನ ನೋವನ್ನು ಹಂಚಿಕೊಳ್ಳಲಾಗುವುದಿಲ್ಲ ಎಂಬ ಅಂಶವನ್ನು ಇವರು ಮರೆಯುತ್ತಾರೆ.

ವಿಡಿಯೋ ಗೇಮ್‌ಗಳಲ್ಲೇ ಹೆಚ್ಚು ಕಾಲ ಕಳೆಯುವುದು

ಒಂಟಿತನದಿಂದ ಬಳಲುವ ಪುರುಷರು ಇತರರಿಂದ ತಪ್ಪಿಸಿಕೊಳ್ಳಲು ಏನಾದರೂ ಕಾರಣಗಳನ್ನು ಹುಡುಕುತ್ತಿರುತ್ತಾರೆ. ಏನಾದರೂ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಂತೆ ನಟಿಸುವುದು, ವಿಡಿಯೋ ಗೇಮ್‌ಗಳಲ್ಲೇ ಹೆಚ್ಚು ಕಾಲ ಕಳೆಯುವುದು, ಸಬೂಬು ಹೇಳುವುದು ಹೀಗೆ ಅವರು ಇತರರೊಂದಿಗೆ ಬೆರೆಯುವುದನ್ನು ಕಡೆಗಣಿಸುತ್ತಾರೆ ಹಾಗೂ ಒಬ್ಬಂಟಿಗರಾಗಿಯೇ ಸಮಯ ಕಳೆಯಲು ಬಯಸುತ್ತಾರೆ. ಆದರೆ ಇದು ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ ಎಂಬ ಅಂಶವನ್ನು ಮರೆತುಬಿಡುತ್ತಾರೆ.

ಸಾಮಾಜಿಕ ಸಂವಹನಗಳ ಕುರಿತು ಅತಿಯಾಗಿ ಯೋಚಿಸುವುದು

ಸಾಮಾಜಿಕ ಸಂವಹನಗಳ ಬಗ್ಗೆ ಅತಿಯಾಗಿ ಯೋಚಿಸಿ ಬೆರೆಯುವುದನ್ನೇ ನಿಲ್ಲಿಸುತ್ತಾರೆ. ಒಂದು ರೀತಿಯ ಭಯ ಇವರನ್ನು ಆವರಿಸಿರುತ್ತದೆ. ಇನ್ನೊಬ್ಬರೊಂದಿಗೆ ಹೊರಹೋಗಲು ಭಯಪಡುತ್ತಾರೆ.

ಆತ್ಮವಿಶ್ವಾಸದ ಕೊರತೆ

ಒಬ್ಬಂಟಿ ಪುರುಷರು ತಮ್ಮ ಜೀವನದಲ್ಲಿ ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಾರೆ. ಸೋಮಾರಿತನ ಅಧೈರ್ಯ ಇವರನ್ನು ಕಾಡುತ್ತದೆ. ಯಾರೊಂದಿಗೆ ಬೆರೆಯುವುದೇ ಬೇಡ ಎಂಬ ಮನಸ್ಥಿತಿ ಇವರಲ್ಲಿರುತ್ತದೆ.

ಹಾಗಾಗಿ ಸಾಮಾಜಿಕವಾಗಿ ಒಂದಾಗುವುದನ್ನು ತಪ್ಪಿಸುತ್ತಾರೆ. ಹಾಗಾಗಿ ಇಂತಹ ಲಕ್ಷಣಗಳನ್ನು ಪುರುಷರು ಪ್ರದರ್ಶಿಸುತ್ತಾರೆ ಎಂದಾದಲ್ಲಿ ಅವರು ಒಂಟಿತನದಿಂದ ಬಳಲುತ್ತಿದ್ದಾರೆ ಎಂದರ್ಥವಾಗಿದೆ.

Leave a Comment