ದಿನಕ್ಕೆ 3-4 ಬಾರಿ ಹಲ್ಲು ಉಜ್ಜುವುದರಿಂದ ನಿಮ್ಮ ದೇಹದಲ್ಲಿ ಆಗುತ್ತದೆ!

ದಿನಕ್ಕೆ 3-4 ಬಾರಿ ಹಲ್ಲು ಉಜ್ಜುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ. ಇದರಿಂದ ಹೃದಯ ಬಡಿತ ಏರುಪೇರು ಆಗದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ ಹೃದಯಘಾತದ ಅಪಾಯ ಕೂಡ ಕಡಿಮೆ ಅನ್ನೋದು ಇತ್ತೀಚಿನ ದಿನಗಳಲ್ಲಿ ನಡೆಸಿದ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳದೆ ಇದ್ದರೆ ಆ ಬಾಕ್ಟೆರಿಯಗಳು ರಕ್ತ ಸೇರುತ್ತವೆ. ಇದರಿಂದಲೇ ಉರಿಯುತ ಕಾಣಿಸಿಕೊಳ್ಳುತ್ತದೆ. ಅಂತಹ ದಕ್ಷಿಣ ಕೊರಿಯಾದ ವೈದ್ಯರ ತಂಡ ಅಭಿಪ್ರಾಯ ಪಟ್ಟಿದೆ.

ಈ ಉರಿಯುತ ಹೃದಯ ಬಡಿತದ ಏರಿಳಿತ ಹಾಗು ಹೃದಯಘಾತಕ್ಕೂ ಕಾರಣವಾಗಬಲ್ಲದು.ಹೃದಯ ಕಾರ್ಯಕ್ಕೂ ಹಲ್ಲು ಉಜ್ಜುವ ಕ್ರಿಯೆಗೂ ಸಂಬಂಧ ಇದೆ ಅನ್ನೋದನ್ನ ಯುರೋಪ್ ನ ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದಾರೆ. 40 ರಿಂದ 79 ವರ್ಷ ವಯಸ್ಸಿನ ಸುಮಾರು 161286 ಜನರನ್ನು ಪರೀಕ್ಷೆಗೆ ಒಳಪಡಿಸಿ ತಜ್ಞ ವೈದ್ಯರು ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ದಿನಕ್ಕೆ 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ಹಲ್ಲು ಉಜ್ಜಿದರೆ ಹೃದಯ ಬಡಿತ ಏರುಪೇರು ಆಗುವ ಅಪಾಯ ಶೇಕಡಾ 10ರಷ್ಟು ಕಡಿಮೆ ಆಗುತ್ತದೆ. ಹೃದಯಘಾತ ಸಾಧ್ಯತೆ ಕೂಡ ಶೇಕಡಾ 12ರಷ್ಟು ಕಡಿಮೆ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ನಿಮ್ಮ ಹಲ್ಲುಗಳನ್ನು ಆದಷ್ಟು ಸೂಚಿಯಾಗಿ ಇಟ್ಟುಕೊಳ್ಳಿ ಹಾಗು ಹೃದಯ ಅರೋಗ್ಯವನ್ನು ಕಾಪಾಡಿಕೊಳ್ಳಿ.

Leave a Comment