ಆಷಾಡ ಮಾಸ ಎಂದರೆ ಹಲವಾರ ಮನಸ್ಸಿನಲ್ಲಿ ಶೂನ್ಯ ಮಾಸ ಹಾಗೂ ಅಶುಭ ಮಾಸ ಎಂದು ನಂಬಿದ್ದರೆ.ಅದರೆ ಈ ಮಾಸದಲ್ಲಿ ಯಾವುದೇ ಒಂದು ವಿವಾಹ ಹಾಗೂ ಶುಭ ಕಾರ್ಯವನ್ನು ಮಾಡದೇ ಇದ್ದರು ಕೂಡ ಈ ಮಾಸ ದೇವನು ದೇವತೆಗಳಿಗೆ ಅತ್ಯಂತ ಶುಭ ಸಮಯ ಎಂದು ಹೇಳಬಹುದು.ದೇವರ ಜಪ ಮಾಡುವುದಕ್ಕೆ ಈ ಮಾಸ ಅತ್ಯಂತ ಯೋಗ್ಯ ಮಾಸ.ಆಷಾಡ ಮಾಸದಲ್ಲಿ ವಿಶೇಷವಾಗಿ ಶಕ್ತಿ ದೇವತೆಗಳನ್ನು ಪೂಜೆ ಮಾಡುತ್ತೀವಿ.ಬನಶಂಕರಿ ರಾಜರಾಜೇಶ್ವರಿ ದುರ್ಗಾ ಮಾತೇ ಕಾಳಿಕಾಮಾತೇ, ಮಾರಮ್ಮದೇವಿಯ ಪೂಜೆಯನ್ನು ಹೆಚ್ಚಾಗಿ ಈ ಆಷಾಡ ಮಾಸದಲ್ಲಿ ಮಾಡುತ್ತೀವಿ.
ಈ ಆಷಾಡ ಮಾಸದಲ್ಲಿ ಸಾಕಷ್ಟು ದೇವತೆಗಳು ತಮ್ಮ ಒಳಿತನ್ನು ಕಂಡು ಕೊಂಡಿದ್ದಾರೆ.ಹಾಗಾಗಿ ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳ ಪೂಜೆಗೆ ಪ್ರಮುಖ ಸ್ಥಾನವನ್ನು ಕೊಟ್ಟಿದ್ದಾರೆ.ಆಷಾಡ ಮಾಸವನ್ನು ಅತ್ಯಂತ ಪವಿತ್ರ ಹಾಗೂ ಮಹತ್ವವಾದ ಮಾಸ ಎಂದು ಪರಿಗಣಿಸಲಾಗಿದೆ.ಇನ್ನು ಶಿವ ಪಾರ್ವತಿಗೆ ಅಮರತ್ವ ಹೇಳಿಕೊಟ್ಟಿದ್ದು ಇದೆ ಮಾಸದಲ್ಲಿ.ಇನ್ನು ಪ್ರಥಮ ಏಕಾದಶಿ ಈ ಆಷಾಡ ಮಾಸದಲ್ಲಿ ಆರಂಭ ಆಗುತ್ತದೆ.
ಇನ್ನು ಕೋನೇಯದಾಗಿ ಆಷಾಡ ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮಾಡಿ ಸಕಲ ಅಷ್ಟ ಐಶ್ವರ್ಯಗಳನ್ನು ಪಡೆದುಕೊಂಳ್ಳಬಹುದು. ಇಷ್ಟೆಲ್ಲಾ ಮಹತ್ವಗಳು ಈ ಆಷಾಡ ಮಾಸದಲ್ಲಿ ಇರುವುದರಿಂದ ಈ ಮಾಸವು ಸಹ ವಿಶೇಷ ಮಾಸ ಎಂದು ಹೇಳಬಹುದು.ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವ ಕೂಡ ಈ ಆಷಾಡ ಮಾಸದಲ್ಲಿ ಇರುವುದು.ಆಷಾಡ ಮಾಸ ದೇವನು ದೇವತೇಗಳಿಗೆ ಪ್ರಸಿದ್ಧವಾದ ತಿಂಗಳು.ಈ ಮಾಸವನ್ನು ದೇವರ ಆರಾಧನೆಗೆ ಮೀಸಲಾಗಿ ಇಡಬೇಕು.ಒಂದು ವೇಳೆ ಈ ಮಾಸದಲ್ಲಿ ದೇವರ ಆರಾಧನೆ ಮಾಡದೇ ಇದ್ದರೆ ಪುಣ್ಯ ಪ್ರಾಪ್ತಿ ಆಗುವುದಿಲ್ಲ.ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಇನ್ನು ಹಬ್ಬದ ಸಮಯದಲ್ಲಿ ನಿಂಬೆ ಹಣ್ಣಿನ ದೀಪರಾಧನೇ ಮಾಡಬಾರದು. ಅದರೆ ವ್ರತ ಮಾಡುವ ಸಮಯದಲ್ಲಿ ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡಿ ನಂತರ ಶಕ್ತಿಯುತ ಅಮ್ಮನವರ ದೇವಸ್ಥಾನಕ್ಕೆ ಹೊಗಿ ನಿಂಬೆ ಹಣ್ಣಿನ ದೀಪರಾಧನೆ ಮಾಡಬಹುದು.ಇಲ್ಲವಾದರೆ ಪಾರ್ವತಿ ಅಥವಾ ಲಕ್ಷ್ಮಿ ದೇವಸ್ಥಾನಕ್ಕೆ ಹೊಗಿ ಬೆಲ್ಲದ ದೀಪರಾಧನೆಯನ್ನು ಸಹ ಮಾಡಬಹುದು.ಯಾವುದೇ ಕಾರಣಕ್ಕೂ ನಿಂಬೆ ಹಣ್ಣಿನ ದೀಪರಾಧನೇಯನ್ನು ಮನೆಯಲ್ಲಿ ಹಚ್ಚಬಾರದು. ಆದಷ್ಟು ಅಮ್ಮನವರ ದೇವಸ್ಥಾನದಲ್ಲಿ ಮಾತ್ರ ನಿಂಬೆ ಹಣ್ಣಿನ ದೀಪರಾಧನೆ ಮಾಡಿದರೆ ತುಂಬಾ ಒಳ್ಳೆಯದು.
ನೀವು ಯಾವುದೇ ಪೂಜೆ ಅಥವಾ ದೀಪರಾಧನೆಯನ್ನು ನಂಬಿಕೆ ಇಟ್ಟು ಮಾಡಬೇಕು. ಇನ್ನು ಉಪ್ಪಿನ ದೀಪರಾಧನೆಯನ್ನು ಮಾಡಿದರು ಸಹ ಯಾವುದೇ ತೊಂದರೆ ಇಲ್ಲಾ. ಪ್ರತಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿ ಪ್ರಸಾದ ಮಾಡಿ ನೈವೇದ್ಯ ಮಾಡಿ. ಯಾವುದೇ ದಿನವಾದರೂ ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು.