ಮೇಷ ರಾಶಿಯ ಪುರುಷರ ಗುಣ ಸ್ವಭಾವಗಳು!

Characteristics of Aries men :ಮೇಷ ರಾಶಿಯು ಮಂಗಳ ಗ್ರಹದ ಅಧಿಪತ್ಯವನ್ನು ಪಡೆದ ರಾಶಿಗಳಲ್ಲಿ ಒಂದಾಗಿದೆ. ಮೇಷ ರಾಶಿಯವರು ಚುರುಕು ಬುದ್ಧಿಯುಳ್ಳವರು, ಧೈರ್ಯಶಾಲಿಗಳು ಹಾಗೂ ಬಲಶಾಲಿಗಳೂ ಹೌದು. ಇವರಿಗೆ ಸಾಹಸ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚು. ಇವರು ಆಗಾಗ್ಗೆ ಸವಾಲುಗಳನ್ನು ಸ್ವೀಕರಿಸಲು ಇಷ್ಟಪಡುತ್ತಾರೆ. ಆದರೆ ಇವರಿಗೆ ತಾಳ್ಮೆ ಸ್ವಲ್ಪ ಕಡಿಮೆ. ಇವರು ಜನ್ಮದಿಂದಲೇ ಸ್ವಾರ್ಥಿಗಳು ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯವರ ಅದೃಷ್ಟದ ರತ್ನ ಯಾವುದು ಎನ್ನುವುದನ್ನು ತಿಳಿಯೋಣ.

ಮೇಷ ರಾಶಿಯ ಪುರುಷರು ಯಾವಾಗಲೂ ತಮ್ಮ ಪತ್ನಿಯರು ಸಕ್ರಿಯ ಮತ್ತು ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ. ಮೇಷ ರಾಶಿಯವರಿಗೆ ಪ್ರೀತಿಯಲ್ಲಿ ಸಾಕಷ್ಟು ಭರವಸೆ ಬೇಕು. ಗಂಡ ಮತ್ತು ಹೆಂಡತಿಯ ವೈಯಕ್ತಿಕ ಸಂಬಂಧಗಳ ವಿಷಯದಲ್ಲಿ, ಮೇಷ ರಾಶಿಯ ಜನರು ತುಂಬಾ ಆದರ್ಶಪ್ರಾಯರಾಗಿದ್ದಾರೆ, ಈ ಕಾರಣದಿಂದಾಗಿ ಅವರ ಸಂಬಂಧದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ.

ಮೇಷ ರಾಶಿಯವರ ಜಾತಕದಲ್ಲಿ ಅದೃಷ್ಟ ರತ್ನ ವಜ್ರವಾಗಿದ್ದರೂ ಈ ರಾಶಿಯ ಪುರುಷರು ಅಕ್ವಾಮರೀನ್‌, ಹಳದಿ ನೀಲ ರತ್ನ, ಬ್ಲಡ್‌ ಸ್ಟೋನ್‌, ನೀಲಂ ಮತ್ತು ಸೂರ್ಯಕಾಂತ ಮಣಿಯನ್ನೂ ಧರಿಸಬಹುದು. ವಜ್ರವೂ ನಿಮಗೆ ವಿಶೇಷವಾದ ರತ್ನವೇ. ವಜ್ರವನ್ನು ಧರಿಸುವ ಮೂಲಕ ಮಂಗಳನ ಶಕ್ತಿಯು ನಿಮಗೆ ಪ್ರಯೋಜನವನ್ನು ನೀಡಲಾರಂಭಿಸುತ್ತದೆ. ಇದು ಇವರ ವ್ಯಕ್ತಿತ್ವದ ಮೇಲೂ ಆಳವಾದ ಪ್ರಭಾವವನ್ನು ಬೀರುತ್ತದೆ. ವಜ್ರವು ಬಿಳಿ ಹಾಗೂ ಸಾರ್ವತ್ರಿಕ ಬೆಳಕಿನ ಅತ್ಯುನ್ನತ ಅಭಿವ್ಯಕ್ತಿಯಾಗಿದೆ. ಜೊತೆಗೆ ಇದು ಬುದ್ಧಿವಂತಿಕೆ ಹಾಗೂ ಶುದ್ಧತೆಯ ಸಂಕೇತವಾಗಿದೆ.

ಮೇಷ ರಾಶಿಯು ಸಂಗಾತಿಯನ್ನು ತಟಸ್ಥಗೊಳಿಸಲು ತಮ್ಮ ಮೋಡಿಯನ್ನು ಬಳಸುತ್ತಾರೆ. ಮೇಷ ರಾಶಿಯ ಮಹಿಳೆಯರು ತಮ್ಮ ಪಾಲುದಾರರನ್ನು ಮೋಹಿಸಿದರೆ, ಮೇಷ ರಾಶಿಯ ಪುರುಷರು ತಮ್ಮ ಮಹಿಳೆಯರನ್ನು ಮೋಡಿ ಮಾಡಲು ಮತ್ತು ಬೆರಗುಗೊಳಿಸಲು ಇಷ್ಟಪಡುತ್ತಾರೆ. ಪ್ರೀತಿಯಲ್ಲಿರುವ ಮೇಷ ರಾಶಿಯು ಉತ್ಸಾಹೀ ಮತ್ತು ಶಕ್ತಿಯುತವಾಗಿರುತ್ತದೆ. ವಿಶೇಷವಾಗಿ ಮನೆಯ ದಿನನಿತ್ಯದ ಚಟುವಟಿಕೆಯಲ್ಲೂ, ಸಂಗಾತಿಯೊಂದಿಗೆ ಪ್ರಣಯದಲ್ಲಿಯೂ ಉತ್ಸುಕರಾಗಿರುತ್ತಾರೆ. ಇಷ್ಟೆಲ್ಲಾ ಆದ ನಂತರವೂ ಮೇಷ ರಾಶಿಯವರು ನಿಯಂತ್ರಣದಲ್ಲಿರಲು ಇಷ್ಟಪಡುತ್ತಾರೆ.

ಮೇಷ ರಾಶಿಯ ವ್ಯಕ್ತಿಯು ಇನ್ನೊಬ್ಬರ ಹಂಗಿನಲ್ಲಿ ಇರಲು ಬಯಸಲಾರ. ಒಮ್ಮೆ ಕಮಿಟ್ ಆದರೆ ಸಾಕು ಅದಕ್ಕಾಗಿ ಅವನು ಎಷ್ಟು ದೂರಕ್ಕೂ ಹೋಗಬಲ್ಲನು. ಸ್ವತಂತ್ರವಾಗಿರಲು ಬಯಸುವ ಈ ವ್ಯಕ್ತಿ, ಒಂದು ಸಂಗತಿಯನ್ನು ಅಚೀವ್ ಮಾಡಿದ ಮೇಲೆ ಮತ್ತೊಂದಕ್ಕೆ ಕೈ ಹಾಕಿಬಿಡುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಹಾಗಾಗಿ ಅವನೊಂದಿಗೆ ಡೇಟಿಂಗ್ ಮಾಡುವಾಗ ಎಲ್ಲಾ ವಿಷಯಗಳನ್ನು ತಾಜಾ, ರೋಮಾಂಚಕ ಮತ್ತು ಹೊಸತನ್ನು ನೀಡಲು ಪ್ರಯತ್ನಿಸಿ. ಅದಕ್ಕೆ ಪ್ರತಿಯಾಗಿ ಆತ ನಿಮಗೆ ಅಷ್ಟೇ ನಿಷ್ಠೆ ಮತ್ತು ಪ್ರೀತಿಯನ್ನು ತೋರುತ್ತಾನೆ. 

ಹೆಚ್ಚಿನ ಪುರುಷರು ತಮ್ಮ ಸಂಗಾತಿಗೆ ಸುಳ್ಳನ್ನು ಹೇಳುತ್ತಾರೆ. ಆದರೆ, ಮೇಷ ರಾಶಿಯವರು ಪ್ರಾಮಾಣಿಕರಾಗಿದ್ದು, ಇದ್ದ ಸತ್ಯವನ್ನು ಇದ್ದಂತೆ ಹೇಳಿಬಿಡುತ್ತಾರೆ. ಹಾಗೇ ಸಂಗಾತಿಯಿಂದಲೂ ಬಯಸುತ್ತಾರೆ. 

ಈ ರಾಶಿಯ ವ್ಯಕ್ತಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುವವರು ಮೂರ್ಖರು. ಅವರಿಗೆ ಸವಾಲನ್ನೂ  ಹಾಕಬೇಡಿ. ಕಾರಣ, ಅವರು ಒಮ್ಮೆ ಸವಾಲು ಸ್ವೀಕರಿಸಿದರೆ ಅದನ್ನು ಮಾಡಿ ಗೆಲ್ಲುತ್ತಾರೆ. ಕಾರಣ, ಅವರಿಗೆ ಸೋಲುಪ್ಪುವುದು ಬಹಳವೇ ಕಷ್ಟ. ನೀವು ಎಷ್ಟು ಪ್ರೀತಿ ಕೊಡುತ್ತೀರೋ ಅದಕ್ಕಿಂತ ದುಪ್ಪಟ್ಟು ಪ್ರೀತಿ ಆತನಿಂದ ನಿಮಗೆ ಸಿಗಲಿದೆ. 

ಮೇಷ ರಾಶಿಯ ವ್ಯಕ್ತಿಗಳಿಗೆ ಸ್ವಲ್ಪ ಯಜಮಾನಿಕೆ ಜಾಸ್ತಿ. ಆದರೆ, ಅವರ ಉದ್ದೇಶ ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡುವುದಲ್ಲ. ಮಾತಿನ ಭರದಲ್ಲಿ ತುಸು ಜೋರೇ ಹೇಳಬಹುದು. ಆದರೆ, ಅದು ಪ್ರೀತಿಯಿಂದ ಎಂಬುದನ್ನು ಮಾತ್ರ ಅರಿಯಿರಿ. ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. 

ಮೇಷ ರಾಶಿಯ ವ್ಯಕ್ತಿಯು ಪ್ರೀತಿಸುತ್ತಿದ್ದಾನಾ ಇಲ್ಲವಾ ಎಂಬುದನ್ನು ತಿಳಿಯುವುದು ಬಹಳ ಸುಲಭ. ಕಾರಣ, ಅವರಿಗೆ ಅಸೂಯೆ ಹೆಚ್ಚು. ನೀವು ಇನ್ನೊಬ್ಬರ ಹತ್ತಿರ ಖುಷಿಯಿಂದಿದ್ದರೆ ಸಹಿಸಲಾರರು. ಹಾಗಾಗಿ ಅವರ ಪ್ರೀತಿಯನ್ನು ಕಳೆದುಕೊಳ್ಳದಂತಿರಿ. 

Leave a Comment