ಪ್ಯಾರಾ ಪವರ್ ಲಿಫ್ಟರ್ ಸುಧೀರ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಭಾರತ ಈಗ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಒಟ್ಟು 6 ಚಿನ್ನದ ಪದಕಗಳನ್ನು ಹೊಂದಿದೆ. ಸುಧೀರ್ 212 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದರು. ಇದೇ ಮೊದಲ ಬಾರಿಗೆ ಭಾರತ ಈ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
ಇದನ್ನೂ ಓದಿ: ವರಮಹಾಲಕ್ಷ್ಮೀ ವ್ರತ 2022: ಹಬ್ಬದ ಮಹತ್ವ, ಮುಹೂರ್ತದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ
ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸುಧೀರ್ ಪಾತ್ರರಾಗಿದ್ದಾರೆ. ಸುಧೀರ್ ಕಾಮನ್ವೆಲ್ತ್ ಗೇಮ್ಸ್ನ ಪ್ಯಾರಾ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 134.5 ಕೆಜಿ ದಾಖಲೆಯೊಂದಿಗೆ ಒಟ್ಟಾರೆ 212 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು. ಆದರೆ ಸುಧೀರ್ ತಮ್ಮ ಕೊನೆಯ ಪ್ರಯತ್ನದಲ್ಲಿ 217 ಕೆಜಿ ಎತ್ತುವಲ್ಲಿ ವಿಫಲರಾಗಿದ್ದರು.
ಇನ್ನು ನೈಜೀರಿಯಾದ ಇಕೆಚುಕ್ವು ಕ್ರಿಶ್ಚಿಯನ್ ಉಬಿಚುಕ್ವು 133.6 ರೊಂದಿಗೆ ಬೆಳ್ಳಿ ಮತ್ತು ಸ್ಕಾಟ್ಲೆಂಡ್ನ ಮಿಕ್ಕಿ ಯೂಲ್ 130.9 ಕಂಚಿನ ಪದಕ ಗೆದ್ದರು. ಕ್ರಿಸ್ಟಿಯನ್ 197 ಕೆಜಿ ಎತ್ತಿದರೆ ಯೂಲ್ 192 ಕೆಜಿ ಎತ್ತಿದರು.
ಇದನ್ನೂ ಓದಿ: ಅಮೆರಿಕದಲ್ಲಿ ಮಂಕಿಪಾಕ್ಸ್ ಅಲರ್ಟ್- ಹೆಲ್ತ್ ಎಮರ್ಜೆನ್ಸಿ ಘೋಷಣೆ
ಇದಕ್ಕೂ ಮೊದಲು, ಮನ್ಪ್ರೀತ್ ಕೌರ್ ಮತ್ತು ಸಕೀನಾ ಖಾತೂನ್ ಮಹಿಳೆಯರ ಲೈಟ್ವೇಟ್ ಫೈನಲ್ನಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆಯುವ ಮೂಲಕ ಪದಕದಿಂದ ವಂಚಿತರಾದರು, ಆದರೆ ಪುರುಷರ ಲೈಟ್ವೇಟ್ ಫೈನಲ್ನಲ್ಲಿ ಪರಮ್ಜಿತ್ ಕುಮಾರ್ ಎಲ್ಲಾ ಮೂರು ಪ್ರಯತ್ನಗಳಲ್ಲಿ ವಿಫಲರಾಗಿ ಕೊನೆಯ ಸ್ಥಾನ ಪಡೆದರು. ಮನ್ಪ್ರೀತ್ ತನ್ನ ಮೊದಲ ಪ್ರಯತ್ನದಲ್ಲಿ 87 ಕೆಜಿ ಮತ್ತು ಎರಡನೇ ಪ್ರಯತ್ನದಲ್ಲಿ 88 ಕೆಜಿ ಎತ್ತಿದರು. ಆದರೆ ಮೂರನೇ ಪ್ರಯತ್ನದಲ್ಲಿ 90 ಕೆಜಿ ಎತ್ತುವಲ್ಲಿ ವಿಫಲರಾದರು. ಮನ್ಪ್ರೀತ್ 89.6 ಅಂಕ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.