ನಮಗೆಲ್ಲರಿಗೂ ಕೆಲವು ಸಮಯದಲ್ಲಿ ಆತ್ಮೀಯರ ಅಗತ್ಯವಿರುತ್ತದೆ. ಒಂಟಿಯಾಗಿದ್ದವರು ತಮಗೊಂದು ಸಂಗಾತಿ ಇದ್ದರೆ ಒಳಿತು ಎಂದು ಭಾವಿಸುವುದುಂಟು. ಇಂತಹ ಸಂದರ್ಭದಲ್ಲಿ ಕೆಲವು ಜನರ ಮೇಲೆ ಪ್ರೀತಿಯಾಗುವುದು ಸಹಜ. ಆದರೆ ಅದಕ್ಕೂ ಮುನ್ನ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಅಗತ್ಯ. ನೀವು ಸಹ ಸಂಬಂಧ ಬೆಳೆಸಲು ಸಿದ್ಧರಾಗಿದ್ದರೆ ಮತ್ತು ಪ್ರೀತಿಯಲ್ಲಿ ಬೀಳಲು ಹೊರಟಿದ್ದರೆ ಕೆಳಗಿನ ಸಲಹೆಗಳನ್ನು ಅನುಸರಿಸಿ. ಈ ಸಲಹೆಗಳೊಂದಿಗೆ, ನೀವು ಆ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಾ ಮತ್ತು ನೀವು ಸಂಬಂಧವನ್ನು ಹೊಂದಲು ಇದು ಸರಿಯಾದ ಸಮಯವೇ ಎಂದು ತಿಳಿದುಕೊಳ್ಳಿ.
ಇದನ್ನೂ ಓದಿ: ಈ ತಿಂಗಳಿನಲ್ಲಿ ಸರ್ಕಾರಿ ನೌಕರರ ಖಾತೆ ಸೇರಲಿವೆ 2.59 ಲಕ್ಷ ರೂ. ಇಲ್ಲಿದೆ ಲೆಕ್ಕಾಚಾರ
ನೀವು ಸಂಬಂಧಕ್ಕೆ ಸಿದ್ಧರಿದ್ದೀರಾ?
ನೀವು ಮೊದಲು ಸಂಬಂಧದಲ್ಲಿದ್ದರೆ, ಹೊಸ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ನೀವು ಡೇಟಿಂಗ್ ಮಾಡಲು ಸಿದ್ಧರಿದ್ದೀರಾ ಎಂದು ಶಾಂತ ಮನಸ್ಸಿನಿಂದ ಯೋಚಿಸಿ, ನಿಮ್ಮ ಜೀವನವನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಮತ್ತು ಹೊಸ ಸಂಬಂಧವನ್ನು ಪ್ರಾರಂಭಿಸಲು ಸಿದ್ಧರಿದ್ದೀರಾ ಎಂದು ಯೋಚಿಸಿ. ನಿಮ್ಮ ಹಿಂದಿನ ಸಂಬಂಧವು ಉತ್ತಮವಾಗಿ ಕೊನೆಗೊಳ್ಳದಿದ್ದರೆ, ನೀವು ಅದರಿಂದ ಹೊರಬಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವು ವಿಶೇಷ ಗಮನ ಹರಿಸಿ ಆಲೋಚಿಸಬೇಕು. ಇದು ನಿಮ್ಮ ಮೊದಲ ಸಂಬಂಧವಾಗಿದ್ದರೆ, ಅದನ್ನು ಚೆನ್ನಾಗಿ ಅರ್ಥಮಾಡಿಕೊಂಡ ನಂತರವೇ ಅದರಲ್ಲಿ ಮುಂದುವರೆಯಿರಿ.
ಆತುರ ಪಡಬೇಡಿ: ಒಂಟಿಯಾಗಿರುವುದು ಕೆಟ್ಟ ವಿಷಯವಲ್ಲ. ನೀವು ಒಂಟಿಯಾಗಿದ್ದರೆ ಸಂಬಂಧವನ್ನು ಹೇಗಾದರೂ ಹುಡುಕಬೇಕು ಎಂಬ ಆತುರಬೇಡ. ಒಂಟಿಯಾಗಿರುವುದಕ್ಕೆ ಸಮಯದ ಯಾವುದೇ ಗಡುವು ಇಲ್ಲ ಮತ್ತು ನೀವು ಸಂಪೂರ್ಣವಾಗಿ ಸಂಬಂಧಕ್ಕೆ ಸಿದ್ಧರಿಲ್ಲದಿದ್ದರೆ, ಅದರ ಬಗ್ಗೆ ಯೋಚನೆಯನ್ನೂ ಮಾಡಬೇಡಿ. ಪ್ರತಿ ಸಂಬಂಧದ ಆರಂಭ, ಅದರ ಅಡಿಪಾಯ ಸ್ನೇಹವಾಗಿರಬೇಕು. ಆದ್ದರಿಂದ, ನಿಮ್ಮ ಸಂಗಾತಿಯನ್ನು ಸರಿಯಾಗಿ ತಿಳಿದುಕೊಳ್ಳಿ ಮತ್ತು ನಂತರ ಮಾತ್ರ ಮುಂದುವರಿಯಿರಿ.
ಇದನ್ನೂ ಓದಿ: WATCHO OTT: ಹಿಂದಿಯಲ್ಲಿ ಡಬ್ ಮಾಡಲಾದ 34 ಕೊರಿಯನ್ ಸಿರೀಸ್ ನೋಡಬೇಕೇ? ಹಾಗಾದ್ರೆ ಈ OTT ಬಳಸಿ
ಸಂಬಂಧದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ: ನೀವು ಯಾರನ್ನಾದರೂ ಇಷ್ಟಪಟ್ಟರೆ, ಅವರೊಂದಿಗೆ ಸಮಯ ಕಳೆಯುವುದನ್ನು ನೀವು ಆನಂದಿಸಿದರೆ ಅದು ಒಳ್ಳೆಯ ಲಕ್ಷಣ, ನಂತರ ಪ್ರತಿ ಸಂಬಂಧವು ಕೆಲವು ಮಿತಿಗಳನ್ನು ಹೊಂದಿರುತ್ತದೆ. ಅವುಗಳನ್ನು ಪಾರ್ಟ್ನರ್ ಗಳು ಗೌರವಿಸಬೇಕು. ನಿಮ್ಮ ಸಂಗಾತಿಯ ಜೊತೆ ಯಾವುದೇ ಸೀಕ್ರೆಟ್ಗಳನ್ನು ಮರೆ ಮಾಡಬೇಡಿ. ಪ್ರತಿಯೊಂದು ವಿಚಾರಗಳನ್ನೂ ಸಹ ಹಂಚಿಕೊಳ್ಳಿ. ಆದರೆ ಸಂಗಾತಿಯೂ ಅಂತಹ ವಿಚಾರಗಳನ್ನು ಗೌರವಯುವತಾಗಿ ಸ್ವೀಕರಿಸಬೇಕು
(ಸೂಚನೆ: ಈ ಸುದ್ದಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. ಝೀ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.