ಚಿಕ್ಕ ತುಂಡು ಸೋಪ್ ಇದೆಯಾ ಯಾವುದೇ ಕಾರಣಕ್ಕೂ ಎಸೆಯಬೇಡಿ…!ಬಾರಿ ಉಳಿತಾಯ ಟಿಪ್ಸ್

ಪ್ರತಿಯೊಬ್ಬರೂ ಪ್ರತಿದಿನ ಸಾಬೂನು ಬಳಕೆ ಮಾಡುತ್ತಾರೆ. ಸಾಬೂನು ಬಳಸಿದ ನಂತರ ಕೊನೆಗೆ ಉಳಿದ ತುಂಡುಗಳನ್ನು ಎಸೆದು ಬಿಡುತ್ತಾರೆ ಅಥವಾ ನೀರಿನಲ್ಲಿ ಕರಗಿ ವೇಸ್ಟ್ ಆಗಿ ಹೋಗುತ್ತದೆ.ಅದರೆ ಈ ರೀತಿ ಸಾಬೂನು ವೇಸ್ಟ್ ಮಾಡುವ ಬದಲು ಸಾಬೂನು ಬಳಸಿದ ನಂತರ ಹೀಗೆ ಉಳಿದ ಚೂರುಗಳನ್ನು ಶೇಕರಿಸಿ ಇಟ್ಟುಕೊಂಡು ಇದರಿಂದ ಮತ್ತೆ ಹೊಸ ಸಾಬೂನು ತಯಾರು ಮಾಡಬಹುದು. ಈ ರೀತಿ ಮಾಡುವುದರಿಂದ ಉಳಿತಾಯ ಆಗುತ್ತದೆ ಮತ್ತು ವೇಸ್ಟ್ ಆಗುವ ಸಾಬೂನು ಚೂರುಗಳು ಮರು ಬಳಕೆ ಆದಂತೆ ಆಗುತ್ತದೆ.

ಸಾಬೂನು ಚೂರುಗಳನ್ನು ಶೇಖರಣೆ ಮಾಡಿ ಇಡಿ.ನಂತರ ಗ್ಯಾಸ್ ಮೇಲೆ ಪಾತ್ರೆ ಇಟ್ಟು ಇದಕ್ಕೆ ಸ್ವಲ್ಪ ನೀರು ಹಾಕಿ ಬಿಸಿ ಮಾಡಿ ನಂತರ ಒಂದು ಬೌಲ್ ನಲ್ಲಿ ಸಾಬೂನು ಚೂರು ಹಾಕಿ ಪಾತ್ರೆಯ ನೀರಿನ ಮೇಲೆ ಇಟ್ಟು ಕರಗಿಸಿ.ಡೈರೆಕ್ಟ್ ಆಗಿ ಸೋಪ್ ಅನ್ನು ಕರಗಿಸಬಾರದು.ಸೋಪ್ ಕರಗಿದ ನಂತರ ಪ್ಲಾಸ್ಟಿಕ್ ಡಬ್ಬವನ್ನು ತೆಗೆದುಕೊಂಡು ಎಣ್ಣೆಯನ್ನು ಹಚ್ಚಿ.ಕರಗಿದ ಸೋಪ್ ಅನ್ನು ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿ.2 ಗಂಟೆ ಸೆಟ್ ಆಗಲು ಬಿಡಿ. ಈ ರೀತಿ ಮಾಡಿದರೆ ಸಾಬೂನು ತಯಾರು ಆಗುತ್ತದೆ.ಬಳಸಿದ ಸೋಪ್ ತುಂಡುಗಳಿಂದ ಸುಲಭವಾಗಿ ಸೋಪ್ ಅನ್ನು ತಯಾರು ಮಾಡಬಹುದು.

Leave a Comment