ಮಲಬದ್ಧತೆ :ಕೆಲವೊಂದು ಆಹಾರವನ್ನು ಜೊತೆಯಾಗಿ ಬಳಸಿದಾಗ ನಮ್ಮ ದೇಹದಲ್ಲಿ ಮ್ಯಾಜಿಕ್ ಮಾಡುತ್ತದೆ.ಬಾಳೆಹಣ್ಣು ಮತ್ತು ಜಿರಿಗೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಜೀರ್ಣ ಶಕ್ತಿಗೆ ಹೆಚ್ಚಾಗುತ್ತದೆ. ಇವೆರಡನ್ನು ಜೊತೆಯಾಗಿ ಬಳಸುವುದರಿಂದ ಯಾರಿಗೆ ಮಲಬದ್ಧತೆ ಅಥವಾ ಕಾಂಸ್ಟಿಪೇಷನ್ ಸಮಸ್ಸೆ ಇರುತ್ತದೆಯೋ ಅಂತವರಿಗೆ ಇದೊಂದು ಬೆಸ್ಟ್ ಅಂತ ಹೇಳಬಹುದು. ಬಾಳೆಹಣ್ಣು ಹಾಗೆ ತಿಂದರು ಸಹ ಕಾಂಸ್ಟಿಪೇಷನ್ ಸಮಸ್ಸೆ ಇರುವವರಿಗೆ ತುಂಬಾನೇ ಬೆಸ್ಟ್.
ಪ್ರತಿದಿನ ಕ್ಲಿಯರ್ ಆಗಿ ಮೋಶನ್ ಕಾರೀಕ್ಟ್ ಆಗಿ ಹೋಗಬೇಕು ಎಂದರೆ ಈ ಬಾಳೆಹಣ್ಣು ಜೀರಿಗೆ ಅನ್ನು ಬಳಸಬಹುದು. ರಾತ್ರಿ ಮಲಗುವ ಮುಂಚೆ ಬಾಳೆಹಣ್ಣು ಜೀರಿಗೆ ಅನ್ನು ಸೇವನೆ ಮಾಡಬಹುದು. ಈ ರೀತಿ ಮಾಡಿದರೆ ಪ್ರತಿದಿನ ಮೋಶನ್ ಹೋಗುವುದಕ್ಕೆ ಸಹಾಯ ಆಗುತ್ತದೆ.
ನಿಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡಿಕೊಳ್ಳಲು ನೀವು ಯಾವಾಗಲೂ ಮಾಗಿದ ಬಾಳೆಹಣ್ಣನ್ನು ಉಪಯೋಗಿಸಬೇಕು. ಇದಕ್ಕೂ ಮೊದಲು ನೀವು ಜೀರಿಗೆಯನ್ನು ಸ್ವಲ್ಪ ಹುರಿದುಕೊಳ್ಳಬೇಕು.
ಆನಂತರ ಅದನ್ನು ಪುಡಿಮಾಡಿಕೊಂಡು ಅರ್ಧ ಬಾಳೆಹಣ್ಣಿನ ಜೊತೆ ಒಂದು ಬೌಲ್ ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ದಿನಕ್ಕೆ ಎರಡು ಬಾರಿ ಸೇವನೆ ಮಾಡಬಹುದು. ಅಥವಾ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಇದನ್ನು ತಿಂದರೆ ಸಾಕು.
ಹೇಳಿಕೇಳಿ ಇದು ಮನೆಮದ್ದು. ಹಾಗಾಗಿ ನಿಮಗೆ ತಕ್ಷಣವೇ ಯಾವುದೇ ಫಲಿತಾಂಶಗಳು ಲಭ್ಯವಾಗುವುದಿಲ್ಲ. ನೀವು ಒಂದು ವೇಳೆ ಈಗಾಗಲೇ ತೂಕ ಕಡಿಮೆ ಮಾಡಿಕೊಳ್ಳಲು ವೈದ್ಯರು ನೀಡಿರುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದರ ಬದಲಾಗಿ ಇದನ್ನು ಎಂದಿಗೂ ಉಪಯೋಗಿಸಬಾರದು.
ಯಾವುದಕ್ಕೂ ಒಮ್ಮೆ ನಿಮ್ಮ ವೈದ್ಯರನ್ನು ಭೇಟಿಯಾಗಿ ಅವರಿಂದ ಸೂಕ್ತವಾದ ಮಾಹಿತಿ ಪಡೆದುಕೊಂಡು ಆನಂತರ ಈ ವಿಧಾನವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು.