ಹಣೆಗೆ ತಿಲಕವಿಟ್ಟರೆ ಏನೆಲ್ಲ ಲಾಭವಿದೆ ಗೊತ್ತಾ?

ನೀವು ಹಣೆಗೆ ಪ್ರತಿ ದಿನ ತಿಲಕ ಇಟ್ಟು ಕೊಳ್ಳುತ್ತಾ ಇದ್ದೀರಿಯೇ ಹಾಗಿದ್ದರೆ ತಪ್ಪದೆ ಈ ಲೇಖನ ಓದಿರಿ. ಅನೇಕರು ತಿಲಕವನ್ನು ಇಟ್ಟುಕೊಳ್ಳುತ್ತಾರೆ ಹಿಂದೂ ಧರ್ಮದಲ್ಲಿ ತಿಲಕಕ್ಕೆ ಮಹತ್ವ ಇದೆ. ಸಾಮಾನ್ಯವಾಗಿ ಅನೇಕರು ಪೂಜೆ ಮಾಡಿದ ನಂತರ ತಿಲಕ ಇಟ್ಟುಕೊಳ್ಳುತ್ತಾರೆ. ತಿಲಕವನ್ನು ಇಟ್ಟುಕೊಳ್ಳುವುದರಿಂದ ಅನೇಕ ಲಾಭಗಳು ಇವೆ ಹಾಗೆ ತಿಲಕವನ್ನು ಇಟ್ಟುಕೊಳ್ಳಲು ಕೆಲವು ನಿಯಮಗಳನ್ನು ಪಾಲಿಸಬೇಕು.

ತಿಲಕ ನಮ್ಮ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಬೆಳವಣಿಗೆ ಹಾಗೂ ಆರೋಗ್ಯಕ್ಕೂ ಬಹಳ ಒಳ್ಳೆಯದು ಅರಿಶಿಣ ಶ್ರೀ ಗಂಧ ಕುಂಕುಮ ಮತ್ತು ಭಸ್ಮದಲ್ಲಿ ತಿಲಕ ಇಟ್ಟು ಕೊಳ್ಳುತ್ತಾರೆ. ತಿಲಕವನ್ನು ಧಾರ್ಮಿಕವಾಗಿ ಮಾತ್ರ ಅಲ್ಲ ಮಾನಸಿಕ ಕಾರಣಗಳಿಗೆ ಇಟ್ಟು ಕೊಳ್ಳುತ್ತಾರೆ. ತಿಲಕ ದೇಹ ಹಾಗೂ ಮನಸ್ಸನ್ನು ಶಾಂತವಾಗಿ ಇಡುತ್ತದೆ. ಹಣೆಗೆ ತಿಲಕ ಇಡುವುದರಿಂದ ವ್ಯಕ್ತಿತ್ವ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಇದರಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ ಪ್ರತಿ ದಿನ ಹಣೆ ಮೇಲೆ ತಿಲಕ ಇಟ್ಟು ಕೊಳ್ಳುವುದರಿಂದ ಮೆದುಳು ಶಾಂತವಾಗಿ ಇರುತ್ತದೆ ಮುಖದಲ್ಲಿ ಶಾಂತಿ ಭಾವ ಮೂಡುತ್ತದೆ

ದೈಹಿಕವಾಗಿ ಸದೃಢತೆ ಕಾಣುತ್ತದೆ ಹಣೆಗೆ ತಿಲಕ ಇಟ್ಟು ಕೊಳ್ಳುವುದರಿಂದ ಮೆದುಳಿನಲ್ಲಿ ಇರುವ ಸೇರಾತೋನಿನ್ ಮತ್ತು ಬೀಟಾ ಎಂಡೋಸಿನ್ಗಳ ಸ್ರವಿಸುವಿಕೆ ಸಮತೋಲನ ಗೊಳಿಸುತ್ತದೆ. ದುಃಖ ಒತ್ತಡ ಸಮಸ್ಯೆ ಕಾಡುವುದಿಲ್ಲ ತಲೆ ನೋವಿನ ಸಮಸ್ಯೆಯೂ ಪರಿಹಾರ ಆಗುತ್ತದೆ. ಹಣೆಗೆ ಶ್ರೀ ಗಂಧದ ತಿಲಕ ಇಟ್ಟುಕೊಳ್ಳುವುದರಿಂದ ಗ್ರಹ ದೋಷಗಳ ಪರಿಹಾರ ಆಗುತ್ತದೆ ವ್ಯಕ್ತಿ ಅದೃಷ್ಟ ಶಾಲಿ ಆಗುತ್ತಾನೆ.

ಯಾವುದೇ ಬಣ್ಣದ ತಿಲಕ ಹಚ್ಚಿದರೂ ಅದರಿಂದ ಶಕ್ತಿ ಹೆಚ್ಚುತ್ತದೆ ಆದರೆ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಬಿಳಿ ಅಥವಾ ಗಂಧದ ತಿಲಕ ಸೌಮ್ಯ ಸಂಕೇತವಾದರೆ ಕೆಂಪು ಶಕ್ತಿಯ ಸಂಕೇತ. ಅದೇ ರೀತಿ ಹಳದಿ ಬಣ್ಣದ ತಿಲಕ ಸಂತೋಷದ ಸಂಕೇತವಾಗಿದೆ. ಇನ್ನೂ ಯಾವಾಗಲೂ ಉಂಗುರ ಬೆರಳಿನಿಂದ ತಿಲಕವನ್ನು ಹಚ್ಚಲಾಗುತ್ತದೆ. ಉಂಗುರ ಬೆರಳು ಸೂರ್ಯನ ಪ್ರತೀಕ. ಈ ಬೆರಳಿನಿಂದ ತಿಲಕ ಹಚ್ಚಿದರೆ ಯಶಸ್ಸು ಸಿಗುತ್ತದೆ. ಇದಲ್ಲದೇ ಗೌರವದ ಪ್ರತೀಕವಾಗಿ ಹೆಬ್ಬೆಟ್ಟಿನಿಂದ ತಿಲಕವನ್ನು ಇಡಲಾಗುತ್ತದೆ ವಿಜಯದ ಪ್ರತೀಕವಾಗಿ ತೋರು ಬೆರಳಿನಿಂದ ತಿಲಕವಿಡಲಾಗುತ್ತದೆ. ತಿಲಕವು ಹಲವು

ಹಿಂದೂ ದೇವತೆಗಳ ವಿಚಾರದಲ್ಲಿ ಕಂಡುಬರುವ ಮೂರನೆಯ ಕಣ್ಣು ಎಂದು ಕರೆಯುತ್ತಾರೆ. ಮನಸ್ಸಿನ ಕಣ್ಣನ್ನು ಪ್ರತಿನಿಧಿಸುತ್ತದೆ ಹಾಗೂ ದೈವಧ್ಯಾನ ಮತ್ತು ಪಾರಮಾರ್ಥಿಕ ಜ್ಞಾನೋದಯಗಳಿಗೆ ಸಂಬಂಧಪಟ್ಟಿರುತ್ತದೆ. ಹಿಂದಿನ ಕಾಲದಲ್ಲಿ ತಿಲಕಗಳನ್ನು ಸಾಧಾರಣವಾಗಿ ದೇವತೆಗಳು, ಅರ್ಚಕಪೂಜಾರರು ಸಂನ್ಯಾಸಿಗಳು ಅಥವಾ ಆರಾಧಕರು ಹಚ್ಚಿಕೊಳ್ಳುತ್ತಿದ್ದರು. ಹಾಗಾಗಿ ನೀವು ಕೂಡ ತಿಲಕ ಇಡುವುದರ ಈ ಸುಂದರ ಮಹತ್ವವನ್ನು ಅರಿತು ಖಂಡಿತವಾಗಿ ಈ ತಿಲಕ ಇಟ್ಟು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. 

Leave a Comment