ಹೊಟ್ಟೆಯ ಹೊಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆಯುರ್ವೇದದ ಅನುಸಾರವಾಗಿ ಕೊಬ್ಬರಿ ಎಣ್ಣೆಯಲ್ಲಿ ಔಷಧಿ ಗುಣ ಇರುತ್ತದೆ.ಇದನ್ನು ಆಹಾರದ ರೂಪದಲ್ಲಿ ನೀವು ಬಳಸಬಹುದಾಗಿದೆ ಮತ್ತು ಔಷಧಿ ರೂಪದಲ್ಲಿ ಕೂಡ ಬಳಸಬಹುದು. ಹಲವಾರು ರೀತಿಯ ಔಷಧಿಗಳಲ್ಲಿ ಕೊಬ್ಬರಿ ಎಣ್ಣೆಯ ಬಳಕೆಯನ್ನು ಸಹ ಮಾಡುತ್ತಾರೆ.
1, ಕೂದಲು ಬೆಳೆಯುವುದಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚುತ್ತಾರೆ. ಆದರೆ ಹೊಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಪುರುಷರು ಅಥವಾ ಮಹಿಳೆಯರು ಫರ್ಟಿಲಿಟಿ ಇಂಪ್ರೂವ್ ಮಾಡಲು ಇದು ಸಹಾಯ ಮಾಡುತ್ತದೆ.ಫರ್ಟಿಲಿಟಿ ಸಮಸ್ಯೆ ಇರುವವರು ರಾತ್ರಿ ಮಲಗುವ ಮೊದಲು ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಚ್ಚಿ ಮಲಗಬೇಕು.
2, ಒಂದು ವೇಳೆ ಪ್ರತಿದಿನ ಹೊಕ್ಕಳಿನ ಭಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿದರೆ ನೆಗಡಿ, ಕೆಮ್ಮು,ಶೀತ, ಕಫದ ಸಮಸ್ಯೆ ನಿವಾರಣೆಯಾಗುತ್ತದೆ.3, ಒಂದು ವೇಳೆ ಮುಖದಲ್ಲಿ ಮೊಡವೆಗಳು, ನೆರಿಗೆಗಳು ಇದ್ದಾರೆ ಪ್ರತಿದಿನ ಹೊಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಲಗಿಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಸ್ಕಿನ್ ಗ್ಲೋ ಆಗುತ್ತದೆ.
4, ಬೆರಳಿನ ಉಗುರುಗಳು, ಕಾಲಿನ ಉಗುರುಗಳು ಚೆನ್ನಾಗಿ ಕಾಣಲಿ ಎಂದು ಬಯಸಿದರೆ ಉಗುರಿಗೆ, ಹೊಕ್ಕಳಿಗೆ, ಅಂಗಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದು ಒಳ್ಳೆಯದು.5, ಕೆಲವರಿಗೆ ತೂಕ ಹೆಚ್ಚಾದಾಗ ಹೊಟ್ಟೆಯ ಭಾಗದಲ್ಲಿ ಸ್ಟ್ರೈಚ್ ಮಾರ್ಕ್ ಕಾಣಲು ಶುರು ಆಗುತ್ತದೆ ಹಾಗೂ ಗರ್ಭಿಣಿಯಾರಿಗೂ ಡೆಲಿವರಿ ನಂತರ ಈ ರೀತಿ ಮಾರ್ಕ್ ಕಂಡು ಬಂದರೆ ಹೊಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮಲಗುವುದರಿಂದ ಸ್ಟ್ರೈಚ್ ಮಾರ್ಕ್ಸ್ ಕಡಿಮೆ ಆಗುತ್ತವೆ.
6, ಋತು ಚಕ್ರ ಸಮಯದಲ್ಲಿ ಹೊಟ್ಟೆ ನೋವು ಬಂದರೆ ಹೊಕ್ಕಳಿನ ಭಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಲಗಬೇಕು. ಕೊಬ್ಬರಿ ಎಣ್ಣೆಯು ದೇಹದಲ್ಲಿರುವ ಉಷ್ಣತೆಯನ್ನು ತೆಗೆದುಹಾಕುವ ಕೆಲಸವನ್ನು ಮಾಡುತ್ತದೆ.ಇದನ್ನು ಒಂದು ವಾರ ಹಚ್ಚಿದರೆ ನಿಮಗೆ ಇದರ ಉತ್ತಮ ಫಲಿತಾಂಶ ಸಿಗುತ್ತದೆ.