ಚಹಾ ಕಾಫಿ ಬದಲು ದಿನಾಲು ಒಂದು ಗ್ಲಾಸ್ ಆಪಲ್ ಜ್ಯೂಸ್ ಕುಡಿಯಿರಿ!

ಸೇಬನ್ನು ಹಾಗೆ ತಿನ್ನಬಹುದು ಅಥವಾ ಇದನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡು ಸೇವಿಸಬಹುದು. ಇದರಲ್ಲಿ ಮುಖ್ಯವಾಗಿ ಸೇಬನ್ನು ಜ್ಯೂಸ್ ಮಾಡಿಕೊಂಡು ಕುಡಿದರೆ ಅದರಿಂದ ಅತ್ಯಧಿಕ ಲಾಭಗಳು ದೇಹಕ್ಕೆ ಲಭ್ಯವಾಗುವುದು. ಆದರೆ ಇದನ್ನು ಸಕ್ಕರೆ ಹಾಕದೆ ಕುಡಿಯಬೇಕು. ಸಕ್ಕರೆ ಹಾಕದೆ ತಯಾರಿಸುವ ಸೇಬಿನ ಜ್ಯೂಸ್ ಅದ್ಭುತವಾಗಿ ನಮ್ಮ ದೇಹಕ್ಕೆ ನೆರವಾಗುವುದು. ಇಂತಹ ಯಾವ ಲಾಭಗಳು ನಮ್ಮ ಆರೋಗ್ಯಕ್ಕೆ ಸಿಗುತ್ತದೆ ಎಂದು ನೀವು ಯೋಚಿಸುತ್ತಿದ್ದರೆ ತಕ್ಷಣವೇ ಈ ಲೇಖನ ಓದಿ ಮುಗಿಸಿ….

ಕಾಂತಿಯುತ ತ್ವಚೆಗೆ ಸೇಬಿನ ಜ್ಯೂಸ್

ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹಾಗೂ ಕೂದಲಿಗೆ ಸೇಬಿನ ಜ್ಯೂಸ್ ತುಂಬಾ ಪರಿಣಾಮಕಾರಿ ಆಗಿರುವುದು. ಚರ್ಮದ ಉರಿಯೂತ, ತುರಿಕೆ, ಒಡೆದ ಚರ್ಮ, ಮೊಡವೆ, ಬೊಕ್ಕೆ ಮತ್ತು ನೆರಿಗೆ ಸಮಸ್ಯೆ ನಿವಾರಣೆ ಮಾಡಲು ಸೇಬು ತುಂಬಾ ಲಾಭಕಾರಿ ಆಗಿರುವುದು.

ತಲೆಹೊಟ್ಟಿಗೆ ಇದರ ಜ್ಯೂಸ್ ಬಳಸಿಕೊಂಡರೆ ಅದು ಅದ್ಭುತವಾಗಿ ಕೆಲಸ ಮಾಡುವುದು. ಸೇಬಿನ ಜ್ಯೂಸ್ ನ್ನು ತಲೆಬುರುಡೆಗೆ ಹಚ್ಚಿಕೊಂಡು ಕೆಲವು ನಿಮಿಷ ಬಿಟ್ಟು ತೊಳೆದರೆ ಅದು ತಲೆಹೊಟ್ಟು ಬರದಂತೆ ತಡೆಯುವುದು. ಹಸಿ ಸೇಬಿನ ಜ್ಯೂಸ್ ನಲ್ಲಿ ವಿಟಮಿನ್ ಸಿ ಅತ್ಯಧಿಕವಾಗಿದೆ ಮತ್ತು ಇದು ಚರ್ಮದ ಹಲವು ಸಮಸ್ಯೆಗಳನ್ನು ದೂರವಿಡುವುದು.

ಮಧುಮೇಹ ನಿಯಂತ್ರಣಕ್ಕೆ ಸೇಬಿನ ಜ್ಯೂಸ್

ಸೇಬಿನ ಜ್ಯೂಸ್ ಕುಡಿದರೆ ಅದರಿಂದ ಟೈಪ್-2 ಮಧುಮೇಹದ ಅಪಾಯ ತಗ್ಗಿಸಬಹುದು. ಸೇಬಿನಲ್ಲಿ ಇರುವಂತಹ ಪೈಥೋಕೆಮಿಕಲ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಫೆನೊಲಿಕ್ ಅಂಶವು ಮೇಧೋಗ್ರಂಥಿಯಲ್ಲಿ ಬೀಟಾ ಕೋಶಗಳನ್ನು ಉತ್ತೇಜಿಸಿ ಹೆಚ್ಚು ಇನ್ಸುಲಿನ್ ಉತ್ಪತ್ತಿ ಮಾಡುವಂತೆ ಮಾಡುವುದು ಮತ್ತು ಜೀರ್ಣಕ್ರಿಯೆಯು ಸರಿಯಾದ ರೀತಿಯಲ್ಲಿ ಗ್ಲೂಕೋಸ್ ನ್ನು ಹೀರಿಕೊಳ್ಳುವಂತೆ ಮಾಡುವುದು. ಹಸಿರು ಸೇಬು ಮಧುಮೇಹಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಇದರಲ್ಲಿ ನಾರಿನಾಂಶ ಅಧಿಕವಾಗಿದೆ.

ತೂಕ ಇಳಿಸಲು ಆಪಲ್ ಜ್ಯೂಸ್

ಆಪಲ್ ಜ್ಯೂಸ್ ನಲ್ಲಿ ತುಂಬಾ ಕಡಿಮೆ ಕ್ಯಾಲರಿ ಮೌಲ್ಯಗಳು ಇವೆ. ಅದೇ ರೀತಿಯಾಗಿ ಈ ಜ್ಯೂಸ್ ನಲ್ಲಿ ಸೋಡಿಯಂ ಕೂಡ ಕಡಿಮೆ ಇದ್ದು, ಇದು ದೇಹದಲ್ಲಿ ಇರು ಹೆಚ್ಚುವರಿ ನೀರಿನಾಂಶವನ್ನು ಹೊರಹಾಕಲು ನೆರವಾಗುವುದು.

ದೇಹದಲ್ಲಿ ನೀರಿನಾಂಶವು ಹೆಚ್ಚಾಗಿದ್ದರೆ ಅದರಿಂದ ದೇಹವು ಭಾರ ಮತ್ತು ಬೊಜ್ಜು ಆವರಿಸಿದಂತೆ ಆಗುವುದು. ಸೇಬಿನ ಜ್ಯೂಸ್ ನಲ್ಲಿ ಇರುವಂತಹ ನಾರಿನಾಂಶವು ಹೊಟ್ಟೆಯು ತುಂಬಿದಂತೆ ಮಾಡುವುದು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುವುದು.

ಹೃದಯಕ್ಕೂ ಸೇಬಿನ ಜ್ಯೂಸ್ ಒಳ್ಳೆಯದು

ಸೇಬಿನ ಜ್ಯೂಸ್ ನಲ್ಲಿ ಪ್ರಮುಖವಾದ ಆಂಟಿಆಕ್ಸಿಡೆಂಟ್ ಗಳು ಇವೆ. ಇದರಲ್ಲಿ ಬಯೋಕೆಮಿಕಲ್ ಗಳಾಗಿರುವಂತಹ ಪಾಲಿಫೆನಾಲ್ ಮತ್ತು ಫ್ಲಾವನಾಯ್ಡ್ ಕೂಡ ಇದೆ. ಈ ಅಂಶಗಳು ಹೃದಯದ ಆರೋಗ್ಯ ಕಾಪಾಡುವುದು.

ಪೊಟಾಶಿಯಂ ಇರುವ ಸೇಬು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೊಟಾಶಿಯಂ ದೇಹದ ಎಲೆಕ್ಟ್ರಿಕ್ ಚಟುವಟಿಕೆ ನಿಯಂತ್ರಿಸುವುದು ಮತ್ತು ಆಮ್ಲ ಮೂಲ ಅಂತರವನ್ನು ಕಾಪಾಡುವುದು.

ಒಂದು ಕಪ್ ಸೇಬಿನ ಜ್ಯೂಸ್ ನಲ್ಲಿ ದೇಹದ ದಿನದ ಅಗತ್ಯಕ್ಕಿಂತ ಹೆಚ್ಚಿನ ಪೊಟಾಶಿಯಂ ಇದೆ. ಸೇಬಿನ ಜ್ಯೂಸ್ ಕುಡಿದರೆ ಅದರಿಂದ ಪಾರ್ಶ್ವವಾಯುವಿನ ಅಪಾಯ ಕೂಡ ಕಡಿಮೆ ಮಾಡಬಹುದು. ನಿಯಮಿತವಾಗಿ ಆಪಲ್ ಜ್ಯೂಸ್ ಕುಡಿದರೆ ಅದರಿಂದ ಅಪಧಮನಿಗಳು ಕಠಿಣವಾಗುವ ಸಮಸ್ಯೆ ತಡೆಯಬಹುದು.

ಇದರಲ್ಲಿರುವಂತಹ ವಿಟಮಿನ್ ಸಿ ಅಂಶವೇ ಇದಕ್ಕೆ ಕಾರಣವಾಗಿದೆ. ಸೇಬಿನ ಜ್ಯೂಸ್ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಸಮಸ್ಯೆಗಳ ಅಪಾಯ ಕಡಿಮೆ ಮಾಡುವುದು. ದಿನಿನಿತ್ಯ ಸೇಬಿನ ಜ್ಯೂಸ್ ಕುಡಿದರೆ ದೇಹದಲ್ಲಿ ಪ್ರತಿರೋಧಕ ಶಕ್ತಿಯು ವೃದ್ಧಿಸುವುದು.

ಅಸ್ತಮಾ ತಡೆಯಲು ಸೇಬಿನ ಜ್ಯೂಸ್

ಸೇಬಿನ ಜ್ಯೂಸ್ ನಲ್ಲಿ ಫ್ಲಾವನಾಯ್ಡ್ ಉತ್ತಮ ಮಟ್ಟದಲ್ಲಿ ಇದೆ ಮತ್ತು ಇದು ಅಸ್ತಮಾ ಆಘಾತವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳು ಶ್ವಾಸಕೋಶವು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು.

ಇತ್ತೀಚಿನ ಅಧ್ಯಯನದ ಪ್ರಕಾರ ಸೇಬಿನ ಜ್ಯೂಸ್ ಶ್ವಾಸಕೋಶದ ಕಾರ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ದಿನನಿತ್ಯವೂ ಸೇಬಿನ ಜ್ಯೂಸ್ ಕುಡಿದರೆ ಅದರಿಂದ ಅಸ್ತಮಾ ಆಘಾತವು ಆಗುವುದು ಶೇ.30-40ರಷ್ಟು ಕಡಿಮೆ ಅಗುವುದು. ಉಬ್ಬಸ ಕಡಿಮೆ ಆಗುವುದು ಮತ್ತು ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಅಸ್ತಮಾ ಆಘಾತ ತಪ್ಪಿಸುವುದು.

ಯಕೃತ್ ನ್ನು ಆರೋಗ್ಯವಾಗಿಡುವುದು

ಕ್ಷಾರೀಯ ಗುಣ ಹೊಂದಿರುವಂತಹ ಸೇಬು ದೇಹದಲ್ಲಿ ಇರುವಂತಹ ವಿಷಕಾರಿ ಮತ್ತು ಕಲ್ಮಷವನ್ನು ಹೊರಗೆ ಹಾಕುವುದು. ಇದು ದೇಹದಲ್ಲಿ ಪಿಎಚ್ ಮಟ್ಟ ಕಾಪಾಡಲು ತುಂಬಾ ಪರಿಣಾಮಕಾರಿ.

ಸೇಬಿನ ಚರ್ಮದಲ್ಲಿ ಇರುವಂತಹ ಪೆಕ್ಟಿನ್ ಎನ್ನುವ ಅಂಶವು ಜೀರ್ಣಕ್ರಿಯೆ ವ್ಯವಸ್ಥೆಯು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡಲು ಸಹಕಾರಿ. ಸೇಬಿನ ಜ್ಯೂಸ್ ಯಕೃತ್ ನ್ನು ಶುದ್ಧೀಕರಿಸುವುದು.

ಕ್ಯಾನ್ಸರ್ ತಡೆಯುವುದು

ಸೇಬಿನ ಜ್ಯೂಶ್ ಕ್ಯಾನ್ಸರ್ ನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದರಲ್ಲೂ ಮುಖ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ನ್ನು ಇದು ತಡೆಯುತ್ತದೆ. ಆಂಟಿಆಕ್ಸಿಡೆಂಟ್ ಫ್ಲಾವನಾಯ್ಡ್ ಮತ್ತು ಫೆನೊಲಿಕ್ ಆಮ್ಲವು ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸೇಬಿನಲ್ಲಿ ಆಂಟಿಮುಟಜೆನಿಕ್ ಕಾರ್ಯ, ಆಂಟಿಆಕ್ಸಿಡೆಂಟ್ ಕಾರ್ಯ, ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದಾಗಿ ಇದು ಚರ್ಮದ ಕ್ಯಾನ್ಸರ್ ನ್ನು ಕೂಡ ತಡೆಯಬಲ್ಲದು.

ಸೇಬಿನ ಜ್ಯೂಸ್ ನ್ನು ಅದರ ಸಿಪ್ಪೆಯ ಜತೆಗೆ ಸೇವಿಸಿದರೆ ತುಂಬಾ ಲಾಭಕಾರಿ. ಸಿಪ್ಪೆಯಲ್ಲಿ ಇರುವಂತಹ ಕ್ವೆರ್ಸೆಟಿನ್ ಅಂಶವು ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಎಂದು ಅಮೆರಿಕಾದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಹೇಳಿದೆ.

ಪ್ರತಿರೋಧಕ ಶಕ್ತಿ ವೃದ್ಧಿ

ಸೇಬಿನ ಜ್ಯೂಸ್ ಕುಡಿದರೆ ಅದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ ಮತ್ತು ಇದು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಬ್ಯಾಕ್ಟೀರಿಯಾ ಮತ್ತು ವೈರಸ್ ನಿಂದ ಕಾಡುವ ರೋಗಗಳನ್ನು ಇದು ತಡೆಯುವುದು. ವಿಟಮಿನ್ ಸಿ ಮತ್ತು ಕಬ್ಬಿನಾಂಶವು ಮೂಳೆಗಳನ್ನು ಬಲಪಡಿಸಲು ತುಂಬಾ ಪರಿಣಾಮಕಾರಿ.

ಮಲಬದ್ಧತೆ ನಿವಾರಿಸುವುದು

ಮಲಬದ್ಧತೆ ಸಮಸ್ಯೆ ಇರುವವರು ಆಪಲ್ ಜ್ಯೂಸ್ ಕುಡಿಯಬೇಕು. ಸೇಬಿನಲ್ಲಿ ಇರುವಂತಹ ಸೋರ್ಬಿಟೊಲ್ ಅಂಶವು ದೊಡ್ಡ ಕರುಳಿನಲ್ಲಿರುವ ನೀರಿನಾಂಶವನ್ನು ಹೀರಿಕೊಂಡು ಕರುಳಿಗೆ ತಲುಪಿಸಲು ನೆರವಾಗುವುದು.

ಇದರಿಂದ ಮಲಬದ್ಧತೆ ನಿವಾರಣೆ ಆಗುವುದು. ದಿನನಿತ್ಯವೂ ಒಂದು ಲೋಟ ಜ್ಯೂಸ್ ಕುಡಿದರೆ ಪರಿಣಾಮ ಕಂಡುಬರುವುದು. ಸೇಬು ನೈಸರ್ಗಿಕ ವಿರೇಚಕ ಗುಣ ಹೊಂದಿದೆ.

ಇದನ್ನು ಕುಡಿದರೆ ಹೊಟ್ಟೆಯ ಕ್ರಿಯೆಗಳು ಮತ್ತು ಕರುಳಿನ ಚಟುವಟಿಕೆ ಸುಧಾರಣೆ ಆಗುವುದು. ಕರುಳಿನ ಕ್ರಿಯೆ ಸರಾಗವಾಗಿದ್ದರೆ ಅದರಿಂದ ಕರುಳಿನ ಕ್ಯಾನ್ಸರ್ ತಡೆಯಬಹುದು.

ಪೋಷಕಾಂಶಗಳ ಆಗರ

ಸೇಬಿನ ಸಿಪ್ಪೆಯಲ್ಲಿ ಹೆಚ್ಚಿನ ಪೋಷಕಾಂಶಗಳು ಇವೆ. ಇದರಲ್ಲಿ ಪೆಕ್ಟಿನ್ ಮತ್ತು ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಇದೆ. ವಿಟಮಿನ್ ಎ, ಸಿ ಮತ್ತು ಬಿ6 ಕೂಡ ಇದರಲ್ಲಿದೆ. ಒಂದು ಕಪ್ ಸೇಬಿನ ಜ್ಯೂಸ್ ಕುಡಿದರೆ ಹತ್ತು ವಿಟಮಿನ್ ಗಳು ಲಭ್ಯವಾಗುವುದು.

ಖನಿಜಾಂಶಗಳಾಗಿರುವಂತಹ ಕ್ಯಾಲ್ಸಿಯಂ, ಪೊಟಾಶಿಯಂ, ಪೋಸ್ಪರಸ್, ಮೆಗ್ನಿಶಿಯಂ, ಮ್ಯಾಂಗನೀಸ್ ಮತ್ತು ಕಬ್ಬಿನಾಂಶವು ಸೇಬಿನಲ್ಲಿದೆ. ಸೇಬಿನ ಜ್ಯೂಸ್ ಕುಡಿದರೆ ಅದರಲ್ಲಿನ ಪೈಥೋ ನ್ಯೂಟ್ರಿಯೆಂಟ್ಸ್ ಗಳು ದೇಹಕ್ಕೆ ಲಭ್ಯವಾಗುವುದು. ಇದರಲ್ಲಿ ಕಡಿಮೆ ಸೋಡಿಯಂ, ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲ.

ಸೇಬಿನ ಸಿಪ್ಪೆಯ ಆರೋಗ್ಯ ಗುಣಗಳು

ಸೇಬಿನ ಸಿಪ್ಪೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದರ ಸಿಪ್ಪೆಯು ಆಂಟಿ ಆಕ್ಸಿಡೆಂಟ್ ಗಳಾಗಿರುವಂತಹ ಕ್ಯಾಟೆಚಿನ್, ಪ್ರೊಸಿಯಾನಿಡಿನ್ಗಳು, ಕ್ಲೋರೊಜೆನಿಕ್ ಆಮ್ಲ ಮತ್ತು ಫ್ಲೋರಿಡ್ಜಿನ್ ನಿಂದ ಸಮೃದ್ಧವಾಗಿದೆ. ಈ ಬಲಶಾಲಿ ಆಂಟಿಆಕ್ಸಿಡೆಂಟ್ ಗಳು ಯಕೃತ್ ನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ನ ಅಪಾಯ ತಗ್ಗಿಸುವುದು.

Leave a Comment