ಈ ಐದು ಅಕ್ಷರಗಳು ನಿಮ್ಮ ಹೆಸರಿನಲ್ಲಿ ಇದೆಯೇ? ಹಾಗಾದ್ರೆ ನಿಮ್ಮಷ್ಟು ಅದೃಷ್ಟವಂತರು ಯಾರಿಲ್ಲ!

ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಅಕ್ಷರಗಳು ಬಹಳಷ್ಟು ಪ್ರಭಾವಶಾಲಿಯಾಗಿರುತ್ತದೆ. ಒಂದು ವೇಳೆ ಅಂತಹ ಅಕ್ಷರ ನಿಮ್ಮ ಹೆಸರಿನಲ್ಲಿದ್ದರೆ ಅಂತವರು ಯಶಸ್ಸು, ಸಂಪತನ್ನು ಹೆಚ್ಚಾಗಿ ಅನುಭವಿಸುತ್ತಾರೆ ಎಂದು ಹೇಳಬಹುದು.ಜೋತಿಷ್ಯ ಶಾಸ್ತ್ರದ ಮೂಲಕ ತಮ್ಮ ಜೀವನ ಯಾವ ರೀತಿ ನಡೆಯಲಿದೆ, ಯಾವ ರೀತಿಯ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಊಹಿಸಬಹುದು. ಅದರ ಜೊತೆಗೆ ಕೆಲವೊಂದು ಹೆಸರುಗಳ ಬದಲಾವಣೆಯಿಂದಲೂ ಅದೃಷ್ಟ ಖುಲಾಯಿಸುತ್ತದೆ.ಜ್ಯೋತಿಷ್ಯದಲ್ಲಿ ವ್ಯಕ್ತಿಯ ಹಣೆಬರಹವು ಹೆಸರಿನ ಮೊದಲ ಅಕ್ಷರದಿಂದ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಕೆಲವರು ನಾಮ ಬದಲಾವಣೆಯಿಂದ ರಾತ್ರೋರಾತ್ರಿ ಫೇಮಸ್ ಆದವರೂ ಇದ್ದಾರೆ.

‘A’ ಅಕ್ಷರದ ಹೆಸರುಗಳು: ‘A’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳುಳ್ಳ ಜನರು ತುಂಬಾ ಅದೃಷ್ಟವಂತರು. ಈ ಜನರ ಅದೃಷ್ಟವು 25 ವರ್ಷಗಳ ಬಳಿಕ ಪ್ರಾರಂಭವಾಗುತ್ತದೆ. ಇನ್ನು ಬಾಲ್ಯದಿಂದಲೂ ಶ್ರಮಜೀವಿಗಳಾಗಿರುವ ಇವರು ಪ್ರತಿಭಾವಂತರು ಕೂಡ.

‘C’ ಅಕ್ಷರದ ಹೆಸರುಗಳು: ‘C’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳ ಜನರು ಅನೇಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಶಸ್ಸು ಎಂಬುದು ಇವರಿಗೆ ಇದ್ದಕ್ಕಿದ್ದಂತೆ ಬರುತ್ತದೆ.“H” ಅಕ್ಷರದ ಹೆಸರುಗಳು: ‘H’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳ ಜನರು ಶ್ರೇಷ್ಠ ನಾಯಕರಾಗುತ್ತಾರೆ ಎನ್ನಬಹುದು. ಕಡಿಮೆ ಸಮಯದಲ್ಲಿ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಇವರಿಗಿದೆ.

‘K’ ಅಕ್ಷರದ ಹೆಸರುಗಳು: ‘K’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳ ಜನರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇವರು ಶ್ರಮವಂತರು ಮತ್ತು ಬುದ್ಧಿವಂತರು. ಆದರೆ ತಾವಾಗಿಯೇ ಅನೇಕ ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.‘S’ ಅಕ್ಷರದ ಹೆಸರುಗಳು: ‘S’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳ ಜನರು ಧನಾತ್ಮಕತೆಯನ್ನು ಹೊಂದಿರುತ್ತಾರೆ. ಉತ್ತಮ ರಾಜಕಾರಣಿ, ವಾಗ್ಮಿಗಳಾಗಿರುತ್ತಾರೆ. ಕಡಿಮೆ ಸಮಯದಲ್ಲಿ ಅಧಿಕ ಹಣ ಗಳಿಸುವ ಸಾಮಾರ್ಥ್ಯ ಇವರಿಗಿದೆ.

Leave a Comment