ಜೋತಿಷ್ಯ ಶಾಸ್ತ್ರ ಪ್ರಕಾರ ವ್ಯಕ್ತಿ ಜನಿಸಿದ ದಿನಕ್ಕೆ ಅನುಗುಣವಾಗಿ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಶನಿವಾರ ಜನಿಸಿದ ವ್ಯಕ್ತಿಗಳ ಕುರಿತು ಮಾಹಿತಿ ನೀಡಲಿದ್ದೇವೆ. ಶನಿವಾರ ಜನಿಸಿದ ವ್ಯಕ್ತಿಗಳ ಮೇಲೆ ಶನಿ ದೇವನ ವಿಶೇಷ ಪ್ರಭಾವ ಇರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿವಾ ,ಶನಿದೇವನಿಗೆ ಸಮರ್ಪಿತ ದಿನವಾಗಿದೆ. ಈ ಕಾರಣದಿಂದ ಶನಿದೇವನ ಪ್ರಭಾವ ವ್ಯಕ್ತಿಗಳ ಮೇಲೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಜೀವನ ಏರಿಳಿತಗಳಿಂದ ಕೂಡಿರುತ್ತದೆ-ಜೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ ಶನಿವಾರ ಜನಿಸಿದ ವ್ಯಕ್ತಿಗಳ ಜೀವನ ಏರಿಳಿತದಿಂದ ಕೂಡಿರುತ್ತದೆ. ಈ ವ್ಯಕ್ತಿಗಳ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಕೊನೆಗೆ ಇವರು ಗೆದ್ದೇಗೆಲ್ಲುತ್ತಾರೆ.
ಇವರಿಗೆ ಕ್ರೋಧ ಹೆಚ್ಚಾಗಿರುತ್ತದೆ-ಶನಿವಾರ ಜನಿಸಿದ ಜನರು ಹೆಚ್ಚು ಕೋಪಿಷ್ಠರಾಗಿರುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇವರ ಕೋಪ ಮೂಗಿನ ಮೇಲಿರುತ್ತದೆ.ಪರಿಶ್ರಮ ಜೀವಿಗಳಗಿರುತ್ತಾರೆ-ಶನಿವಾರ ಜನಿಸಿದ ಜನರು ಪರಿಶ್ರಮ ಜೀವಿಗಳಾಗಿರುತ್ತಾರೆ. ತಮ್ಮ ಪರಿಶ್ರಮದಿಂದ ಇವರು ಯಶಸ್ಸನ್ನು ಸಾಧಿಸುತ್ತಾರೆ.
ಶನಿದೇವನ ಕೃಪೆ-ಶನಿವಾರ ಜನಿಸಿದ ಜನರ ಮೇಲೆ ಶನಿದೇವನ ವಿಶೇಷ ಕೃಪೆ ಇರುತ್ತದೆ. ಇವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ, ಇವರ ಮೇಲೆ ಶನಿದೇವನ ವಿಶೇಷ ಕೃಪೆ ಇರುವುದರಿಂದ ಇವರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪಾರಾಗುತ್ತಾರೆ.
ಎಲ್ಲಾ ಕಾರ್ಯಗಳನ್ನು ಸಂಪೂರ್ಣ ಶ್ರದ್ಧೆಯಿಂದ ನಿರ್ವಹಿಸುತ್ತಾರೆ:ಶನಿವಾರ ಜನಿಸಿದ ಜನರು ಯಾವುದೇ ಕೆಲಸ ಮಾಡಿದರು ಕೂಡ ಅದನ್ನು ಸಂಪೂರ್ಣ ಶ್ರದ್ಧೆ ಹಾಗೂ ನಿಷ್ಠೆಯಿಂದ ಪೂರ್ಣಗೊಳಿಸುತ್ತಾರೆ. ಈ ಜನರ ಕೆಲಸ ಯಾವಾಗಲು ಉತ್ತಮ ಗುಣಮಟ್ಟದ್ದಾಗಿರುತ್ತದೆ.
ಇತರರಿಗೆ ಸಹಾಯ ಮಾಡುವ ಜೀವಿಗಳು:ಶನಿವಾರ ಹುಟ್ಟಿದವರು ಪರ ಸಹಾಯ ಮೆರೆಯುವಂತರಾಗಿರುತ್ತಾರೆ. ಯಾರಿಗಾದರೂ ಕೂಡ ಸಹಾಯ ಮಾಡುವಲ್ಲಿ ಇವರು ಯಾವತ್ತು ಮುಂದು. ದಾನ-ಪುಣ್ಯ ಕಾರ್ಯಗಳನ್ನು ಮಾಡುವಲ್ಲಿ ಇವರು ಯಾವತ್ತು ಮುಂದಿರುತ್ತಾರೆ.
ಇವರ ಜೀವನದ ಆರಂಭದ ದಿನಗಳು ಕಷ್ಟದಿಂದ ಕೂಡಿರುತ್ತದೆ:ಶನಿವಾರ ಹುಟ್ಟಿದ ಜನರು ತಮ್ಮ ಜೀವನದ ಆರಂಭದ ದಿನಗಳಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಆದರೆ, ನಂತರ ಇವರ ಜೀವನ ಖುಷಿಯಿಂದ ತುಂಬಿರುತ್ತದೆ.