ಸಾಮಾನ್ಯವಾಗಿ ಒಬ್ಬರಿಗೆ ಮತ್ತೊಬ್ಬರ ಮೇಲೆ ಪ್ರೀತಿಯ ಭಾವನೆಗಳು ಮೂಡಲಾರಂಭಿಸಿದಾಗ ಅವರು ಹೆಚ್ಚು ಸಮಯ ತೆಗೆದುಕೊಂಡು ತಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಾರೆ. ಈ ರಾಶಿಯ ವ್ಯಕ್ತಿಗಳು ತುಂಬಾ ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಅಂತಹ ರಾಶಿಗಳ ಬಗ್ಗೆ ಇಲ್ಲಿ ತಿಳಿಯೋಣ. ಈ ರಾಶಿಯವರನ್ನು ಸುಲಭ ಪ್ರೀತಿಯಲ್ಲಿ ಬೀಳುವುದನ್ನು ತಡೆಯುವುದು ತುಂಬಾ ಕಠಿಣ ಕೆಲಸ.
ಮೇಷ ರಾಶಿ: ಈ ಜನರು ಒಳ್ಳೆಯದನ್ನು ಮಾಡುವ ಯಾರನ್ನಾದರೂ ಸುಲಭವಾಗಿ ಇಷ್ಟ ಪಡುತ್ತಾರೆ. ಅವರು ಅಪಾಯ-ತೆಗೆದುಕೊಳ್ಳುವವರು ಮತ್ತು ಧೈರ್ಯಶಾಲಿ ಜನರು. ಸಮಾನವಾಗಿ ಸಾಹಸಮಯವಾಗಿರುವ ಯಾರಿಗಾದರೂ ಸುಲಭವಾಗಿ ಆಕರ್ಷಿತರಾಗುತ್ತಾರೆ. ಅಲ್ಲದೆ, ಅವರಿಗೆ ಜೀವನದಲ್ಲಿ ಎಲ್ಲವೂ ಬೇಗ ಬೇಕು. ಹಾಗೆಯೇ ಪ್ರೀತಿ ಮತ್ತು ಪ್ರೀತಿಸುವ ಅನುಭವ ಕೂಡಾ.
ಕಟಕ ರಾಶಿ: ಕಟಕ ರಾಶಿಯವರು ತುಂಬಾ ಭಾವನಾತ್ಮಕವಾಗಿರುತ್ತಾರೆ. ಯಾರಾದರೂ ಕೊಂಚ ಕಾಳಜಿ ತೋರಿದರೂ ಅವರನ್ನು ಇಷ್ಟಪಡುತ್ತಾರೆ. ಮನಸ್ಸಿಗೆ ಹಿತವಾಗಿ ಮಾತನಾಡಿದರೂ ಅವರಿಗೆ ಅವರ ಮೇಲೆ ಪ್ರೀತಿಯಾಗಿ ಬಿಡುತ್ತದೆ. ಆದರೆ ಅವರ ಮನಸ್ಸಿಗೆ ನೋವಾಗುವಂತಹ ಕೆಲಸ ಮಾಡಿದರೆ ಮಾತ್ರ ಆ ಸಂಬಂಧ ಮುಂದುವರೆಯುವುದಿಲ್ಲ.
ತುಲಾ ರಾಶಿ: ಈ ರಾಶಿಯವರು ಅತ್ಯಂತ ಸಕಾರಾತ್ಮಕ ಮನೋಭಾವ ಉಳ್ಳವರಾಗಿರುತ್ತಾರೆ. ತುಲಾ ರಾಶಿಯವರು ಸಂತೋಷವಾಗಿರುವ ಆತ್ಮಗಳು. ಅವರ ನಡುವಳಿಕೆ ಬಲು ಸಿಹಿಯಾಗಿರುತ್ತದೆ. ಉತ್ತಮ ನಡವಳಿಕೆಯಿಂದ ಸುಲಭವಾಗಿ ಅವರನ್ನು ಸೆಳೆಯಬಹುದು. ಅವರು ಸುಲಭವಾಗಿ ಪ್ರೀತಿಯಲ್ಲಿ ಬೀಳಬಹುದು. ಆದರೆ ಅವರಿಗಾಗುವುದು ಕೇವಲ ಆಕರ್ಷಣೆಯಲ್ಲ, ಅವರೊಬ್ಬರನ್ನು ಪ್ರೀತಿಸಿದರೆ ಅವರಿಗೆ ಸಂಪೂರ್ಣ ನಿಷ್ಠರಾಗಿರುತ್ತಾರೆ. ಅವರನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟು ಕಾಳಜಿಯಿಂದ ನೋಡಿಕೊಳ್ಳುತ್ತಾರೆ.