ಎಕ್ಕದ ಎಲೆ ಹೀಗೆ ಬಳಸಿ ಯಾಕಂದ್ರೆ!

ಎಕ್ಕದ ಗಿಡದಲ್ಲಿ 2 ವಿಧ ಇದೆ. ಒಂದು ಬಿಳಿ ಎಕ್ಕದ ಗಿಡ ಮತ್ತು ಇನ್ನೊಂದು ನೀಲಿ ಬಣ್ಣದ ಎಕ್ಕದ ಗಿಡ.ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಈ ಎಕ್ಕದ ಹೂವು ಕೂಡ ಒಂದು. ಶಿವರಾತ್ರಿ ದಿನ ಈ ಎಕ್ಕದ ಹೂವಿಗೆ ವಿಶೇಷ ಬೇಡಿಕೆ ಇದೆ. ಅದೇ ರೀತಿ ಆರೋಗ್ಯದ ವಿಷಯಕ್ಕೆ ಬಂದಾಗ ಎಕ್ಕದ ಗಿಡ ಶ್ರೀಮಂತವಾಗಿದೆ.

ಮುಳ್ಳು ತಾಗಿದರೆ ಮತ್ತು ಚೇಳು ಹಾಗು ಇನ್ನು ಇತರೆ ವಿಷ ಜಂತುಗಳು ಕಡಿದಾಗ ಈ ಎಕ್ಕದ ಗಿಡದ ಹಾಲನ್ನು ಹಚ್ಚುತ್ತಾರೆ. ಅದರೆ ಎಕ್ಕದ ಗಿಡದ ಹಾಲು ಕಣ್ಣಿಗೆ ಸಿಡಿಯಬಾರದು. ಸಿಡಿದರೆ ಕಣ್ಣು ಕುರುಡು ಆಗುವ ಅಪಾಯ ಇರುತ್ತದೆ.

ಎಕ್ಕದ ಗಿಡ ಯಾವೆಲ್ಲಾ ಅರೋಗ್ಯ ಸಮಸ್ಸೆಗೆ ಪರಿಹಾರ ನೀಡುತ್ತದೆ.?ವಯಸ್ಸು ಅದರೆ ಕಾಲಿನ ಸ್ನಾಯುಗಳಲ್ಲಿ ಶಕ್ತಿಯ ಕೊರತೆ ಉಂಟಾಗುತ್ತದೆ. ಇದರಿಂದ ಕುಳಿತರು ಮತ್ತು ನಿಂತುಕೊಂಡರು ನೋವು ಕಾಡುತ್ತದೆ. ಇದಕ್ಕೆ ಎಕ್ಕದ ಎಲೆ ಪರಿಹಾರ ನೀಡುತ್ತದೆ. ಮಂಡಿ ನೋವು ಇರುವವರು ಎಕ್ಕದ ಎಲೆಯನ್ನು ಸುಟ್ಟು ಬಿಸಿ ಇರುವಾಗಲೇ ಅದನ್ನು ನೋವು ಇರುವ ಜಾಗದಲ್ಲಿ ಇರಿಸಿಕೊಂಡು ಬಟ್ಟೆಯನ್ನು ಕಟ್ಟಿಕೊಂಡರೆ ನೋವು ಕಡಿಮೆ ಆಗುತ್ತದೆ. ದಿನದಲ್ಲಿ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡಿದರೆ ಉತ್ತಮವಾದ ಫಲಿತಾಂಶ ಕಂಡು ಬರುತ್ತದೆ.

ಎಕ್ಕದ ಗಿಡ ವಿಷ ಆದರೂ ಸರಿಯಾಗಿ ಬಳಕೆ ಮಾಡಿದರೆ ಅರೋಗ್ಯಕ್ಕೆ ಒಳಿತು ಆಗುವ ಹಲವು ಗುಣಗಳನ್ನು ಒಳಗೊಂಡಿದೆ. ಎಕ್ಕದ ಗಿಡದ ಹೂವನ್ನು ಒಣಗಿಸಿ ಪುಡಿ ಮಾಡಿ ಚೂರಣದಂತೇ ಮಾಡಿ ಇಟ್ಟುಕೊಂಡರೆ ಅಸ್ತಮಾ ರೋಗಿಗಳಿಗೆ ಉತ್ತಮ ಔಷಧವಾಗಿದೆ.ಪ್ರತಿದಿನ ಈ ಚೂರಣದ ಸೇವನೆ ಮಾಡುತ್ತಿದ್ದಾರೆ ಅಸ್ತಮಾ ದುರ್ಬಲತೇ ಶ್ವಾಸಕೋಶದ ಸಮಸ್ಸೆಗಳು ದೂರ ಆಗುತ್ತದೆ.

ಇನ್ನು ಎಕ್ಕದ ಗಿಡದಿಂದ ಬರುವ ಹಾಲನ್ನು ಚೇಳು ಕಚ್ಚಿರುವ ಜಾಗಕ್ಕೆ ಹಚ್ಚಿದರೆ ನಂಜು ಅಂಟುವುದಿಲ್ಲ ಹಾಗು ಮುಳ್ಳು ಚುಚ್ಚಿರುವ ಜಾಗಕ್ಕೆ ಈ ಹಾಲನ್ನು ಹಾಕಿದರೆ ಮುಳ್ಳು ಹೊರಗೆ ಬರುತ್ತದೆ.ಅಷ್ಟೇ ಅಲ್ಲದೆ ಮದುಮೇಹದ ಸಮಸ್ಸೆಗೆ ಎಕ್ಕದ ಎಲೆ ಸಹಾಯಕರಿ ಆಗಿದೆ. ಎಕ್ಕದ ಎಲೆಯನ್ನು ಬಿಸಿ ಮಾಡಿ ರಾತ್ರಿ ಪಾದದ ಕೆಳಗೆ ಇಟ್ಟು ಬಟ್ಟೆ ಸುತ್ತಿಕೊಂಡು ಮಲಗಿ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ.ಅದರೆ ಎಕ್ಕದ ಎಲೆ ಬಳಸುವ ಮುನ್ನ ವೈದ್ಯರ ಸಲಹೆಯನ್ನು ಪಡೆದುಕೊಂಡರೆ ತುಂಬಾ ಒಳ್ಳೆಯದು.

Leave a Comment