Friday born people :ಎಲ್ಲರಿಗೂ ನಮಸ್ಕಾರ, ಸ್ನೇಹಿತರೇ ಶುಕ್ರವಾರ ಜನಿಸಿದವರ ಸ್ವಭಾವ ಮತ್ತು ಗುಣಲಕ್ಷಣಗಳು ಹೇಗಿರುತ್ತದೆ ? ಅವರ ರಹಸ್ಯಗಳೇನು ? ಅವರು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಅದೃಷ್ಟ ಬರುತ್ತದೆ? ಅವರ ಶುಭ ಸಂಖ್ಯೆ ಯಾವುದು? ಈ ರೀತಿಯಾದಂತಹ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ, ಹಾಗಾಗಿ ಇದನ್ನು ಕೊನೆಯವರೆಗೂ ಓದಿ
ಶುಕ್ರವಾರದ ಅಧಿಪತಿ ಶುಕ್ರ ಗ್ರಹ: ಶುಕ್ರವಾರ ಹುಟ್ಟಿದವರು ಕಲೆಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ, ಆದರೆ ಕೊಂಚ ಆಲಸ್ಯದ ಸ್ವಭಾವವನ್ನು ಕೂಡ ಹೊಂದಿರುತ್ತಾರೆ, ಆಲಸ್ಯವನ್ನು ಬಿಟ್ಟು ಯಾವ ಕಲೆಯಲ್ಲಿ ಆಸಕ್ತಿ ಇರುತ್ತದೆಯೋ ಆ ಕಲೆಯಲ್ಲಿ ಮುಂದೆ ಬರಲು ಪ್ರಯತ್ನಿಸಿದರೆ ಖಂಡಿತವಾಗಿಯು ಅವರು ಯಶಸ್ಸನ್ನು ಕಾಣಬಹುದು.
ಶುಕ್ರವಾರ ಹುಟ್ಟಿರುವುದರಿಂದ ಅವರ ಮೇಲೆ ಲಕ್ಷ್ಮಿ ಕೃಪಾಕಟಾಕ್ಷ ಇದ್ದೇ ಇರುತ್ತದೆ, ಶುಕ್ರವಾರ ಜನಿಸಿದವರು ನೋಡಲು ಸುಂದರವಾಗಿರುತ್ತಾರೆ ಹಾಗೂ ಅಲಂಕಾರಪ್ರಿಯರು ಆಗಿರುತ್ತಾರೆ, ಅಲ್ಲದೆ ಆಕರ್ಷಕ ವ್ಯಕ್ತಿತ್ವವನ್ನು ಕೂಡ ಅವರು ಹೊಂದಿರುತ್ತಾರೆ. ಇವರಿಗೆ ದಾನ ಮಾಡುವ ಗುಣ, ಸಹಾಯ ಮಾಡುವ ಗುಣ ಇರುತ್ತದೆ.
ಇನ್ನು ಇವರ ವೈವಾಹಿಕ ಜೀವನ ಹೇಗಿರುತ್ತದೆ ಎಂದು ನೋಡುವುದಾದರೆ: ವೈವಾಹಿಕ ಜೀವನದಲ್ಲಿ ಇವರು ಬಹಳಷ್ಟು ಹೊಂದಾಣಿಕೆಯನ್ನು ಮಾಡಿಕೊಳ್ಳುವಂತಹ ಸ್ವಭಾವದವರಾಗಿರುತ್ತಾರೆ, ಇವರು ಯಾರೊಂದಿಗೂ ಜಗಳವನ್ನು ಮಾಡುವುದಿಲ್ಲ.ಶುಕ್ರವಾರ ಜನಿಸಿದವರ ಶುಭವಾದ ಸಂಖ್ಯೆ: 6 ಶುಭವಾದ ವರ್ಣ: ನೀಲಿ.