ಇಂತಹವರಿಗೆ ಮಾತ್ರವೇ ದೇವರು ಸಹಾಯ ಮಾಡುತ್ತಾರೆ?? ನಾವು ಕಷ್ಟದಲ್ಲಿದ್ದೇವೆಂದು

ಒಂದಾನೊಂದು ಕಾಲದಲ್ಲಿ ಚಿಕ್ಕ ಪಕ್ಷಿಯೊಂದು ಸಮುದ್ರದ ದಡದಲ್ಲಿ ಒಣಗಿದ ಹೋದ ಒಂದು ಮರದ ಮೇಲೆ ಗೂಡು ಒಂದನ್ನು ಕಟ್ಟಿ ಅದರಲ್ಲಿ ಅದು ಎರಡು ಮೊಟ್ಟೆಗಳನ್ನು ಇಟ್ಟು ಕಾಪಾಡುತ್ತಿತ್ತು. ಆ ಪಕ್ಷಿ ಬೆಳಗ್ಗೆ ಪ್ರತಿದಿನ ಗೂಡನ್ನು ತೊರೆದು ಆಹಾರ ಹುಡುಕುತ್ತಾ ಹೋಗಿ ಸಂಜೆ ಮತ್ತೆ ಗೂಡು ಸೇರಿಸುತ್ತಿತ್ತು ಹೀಗೆ ಕೆಲ ದಿನಗಳು ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು ಆದರೆ ಒಂದು ದಿನ ಎಂದಿನಂತೆ ಆ ಪಕ್ಷ ಬೆಳಗ್ಗೆ ಎದ್ದು ಆಹಾರ ಹುಡುಕುತ್ತಾ ಗೂಡು ಬಿಟ್ಟು ಹೋಗಿ ಸಂಜೆ ಹಿಂದಿರುಗಿ ಬಂದು ನೋಡಿದರೆ ಆ ಸ್ಥಳದಲ್ಲಿ ಕೂಡು ಇರಲಿಲ್ಲ.

ಗೂಡಿನಲ್ಲಿ ಇದ್ದಂತ ಮೊಟ್ಟೆಗಳು ಇರಲಿಲ್ಲ ಅದನ್ನು ನೋಡಿ ಪಕ್ಷಿಗೆ ತುಂಬಾನೆ ದುಃಖವಾಯಿತು. ಅಳುತ್ತಲೇ ಆ ಪಕ್ಷಿಸುತ್ತ ಮುತ್ತಲು ಅದರ ಮೊಟ್ಟೆಗಳಿಗಾಗಿ ಹುಡುಕಾಡಿತು . ಆದರೆ ಮೊಟ್ಟೆಗಳ ಆಚೆಗೆ ಮಾತ್ರ ಎಲ್ಲೂ ಸಿಗಲಿಲ್ಲ . ಒಂದು ವೇಳೆ ಈ ಸಮುದ್ರದ ಅಲೆಗಳೆ ನನ್ನ ಗೂಡು ಹಾಗೂ ನನ್ನ ಮೊಟ್ಟೆಗಳನ್ನು ಸಮುದ್ರದೊಳಗೆ ಎಳಕೊಂಡು ಹೋಗಿರಬಹುದು ಎಂದು ಕೊಂಡು. ಅತಿ ದುಃಖದಿಂದ ಸಮುದ್ರ ದೇವರೊಂದಿಗೆ ಈ ರೀತಿ ಹೇಳಿತು.
ಹೋ ಸಮುದ್ರ ದೇವ ನಿಮ್ಮ ದಡದಲ್ಲಿ ನಮ್ಮ ಗೂಡು ಅದರೊಳಗೆ ಎರಡು ಮೊಟ್ಟೆಗಳಿತ್ತು . ಆದರೆ ಈಗ ಎರಡು ಮೊಟ್ಟೆಗಳು ಕಾಣಿಸುತ್ತಿಲ್ಲ. ಅವುಗಳನ್ನು ನೀವು ಏನಾದರೂ ನೋಡಿದ್ದೀರಾ. ಬಹುಶಹ ನಿಮ್ಮ ಅಲೆಗಳೆ ನನ್ನ ಮೊಟ್ಟೆಗಳನ್ನು ಸಮುದ್ರ ದೊಳಗೆ ಎಳೆದುಕೊಂಡು ಹೋಗಿರಬಹುದು. ದಯವಿಟ್ಟು ನನಗೆ ಸಮಾಧಾನ ಹೇಳಿ ಎಂದು ಹೇಳಿತು.

ಅದಕ್ಕೆ ಸಮುದ್ರ ದೇವರು ಜೋರಾಗಿ ನಗುತ್ತಾ ಓ ಪಕ್ಷಿ ನೀನೇ ಎಷ್ಟು ನಿನ್ನ ಯೋಗ್ಯತೆ ಎಷ್ಟು ಆದರೂ ನಾನು ಮಹಾಸಮುದ್ರ ಇಂತಹ ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ನಾನುಹೆಚ್ಚಾಗಿ ಯೋಚಿಸುವುದಿಲ್ಲ. ಸುಮ್ಮನೆ ನನ್ನ ತಲೆ ಕೆಡಿಸದೆ ಇಲ್ಲಿಂದ ಹೊರಟುಹೋಗು ಎಂದಾಯಿತು . ಸಮುದ್ರದೇವರ ಆ ಮಾತನ್ನು ಕೇಳಿ ಪಕ್ಷಿ ಎಲ್ಲವೂ ಅರ್ಥವಾಯಿತು. ಖಂಡಿತವಾಗಿಯೂ ನನ್ನ ಮೊಟ್ಟೆಗಳನ್ನು ಈ ಸಮುದ್ರವೇ ನುಂಗಿ ಹಾಕಿದೆ ಎಂದು ತೀರ್ಮಾನಿಸಿಕೊಂಡು ಸಮುದ್ರ ದೇವರೊಂದಿಗೆ ಮತ್ತೆ ಈ ರೀತಿ ಹೇಳಿತು.

ಹೋಸಮುದ್ರ ದೇವ ನಿನ್ನ ಅಲೆಗಳೆ ನನ್ನ ಗೂಡು ಮತ್ತೆ ನನ್ನ ಮೊಟ್ಟೆಗಳನ್ನು ತೆಗೆದುಕೊಂಡು ಹೋಗಿದೆ. ನೀನು ಈ ಕೂಡಲೇ ಸಮುದ್ರದ ನೀರನ್ನು ಹಿಂತೆ ತೆಗೆದುಕೊಳ್ಳಿ. ಆ ರೀತಿ ಮಾಡಿದರೆ ನಿಮ್ಮ ಸಮುದ್ರದೊಳಗಿರುವಂತ ನನ್ನ ಗೂಡು ಹಾಗೂ ನನ್ನ ಮೊಟ್ಟೆಗಳನ್ನು ನಾನು ತೆಗೆದುಕೊಳ್ಳುತ್ತೇನೆ ಎಂದಿತು. ಆ ಪಕ್ಷಿ ಕೂಡಲೆ ಸಮುದ್ರ ದೇವರು ಆ ರೀತಿ ತೆಗೆದುಕೊಳ್ಳಲು ಸಾಧ್ಯವಿಲ್ಲ ನಿನ್ನ ಕೈಲಾದತ್ತು ಮಾಡಿಕೋ ಎಂದರು. ಆಗ ಆ ಚಿಕ್ಕಪಕ್ಷಿ ಹೋ ಸಮುದ್ರವೇ ನೀನು ತುಂಬಾನೆ ದುರಾಂಕಾರದಿಂದ ಮಾತನಾಡುತ್ತಿರುವೆ.

ಒಂದು ವೇಳೆ ನಾನು ಮನಸ್ಸು ಮಾಡಿದರೆ ನಿನ್ನ ಸಮುದ್ರದೊಳಗಿರುವ ನೀರು ಎಲ್ಲವನ್ನು ತೆಗೆದುಹಾಕಿ ನಿನ್ನ ಸಮುದ್ರವನ್ನೇ ಒಣಗಿಸಿ ಬಿಡುತ್ತೇನೆ. ನನ್ನ ಗಾತ್ರ ನೋಡಿ ನನ್ನನ್ನು ಕಡಿಮೆ ಎಂದು ಭಾವಿಸಬೇಡ ಹುಷಾರ್ ಎಂದಿತು. ಆಗ ಸಮುದ್ರ ದೇವರು ಜೋರಾಗಿ ನಗುತ್ತಾ ಓ ಪುಟ್ಟ ಪಕ್ಷಿ ನೀನು ತುಂಬಾ ಚಿಕ್ಕ ಜೀವಿ ನಾನು ವಿಶಾಲವಾದ ಮಹಾಸಮುದ್ರ ನೀನು ನನ್ನನ್ನು ಒಣಗಿಸುತ್ತೀಯಾ. ಇನ್ನು ನೂರು ಜನ್ಮ ಪಡೆದರು ನಿನ್ನಿಂದ ಆ ಕೆಲಸ ಸಾಧ್ಯವಾಗುವುದಿಲ್ಲ ಬೇಕಿದ್ದರೆ ಪ್ರಯತ್ನಿಸಿ ನೋಡು ಎಂದು ಹೇಳಿ ಸಮುದ್ರ ದೇವರು ಮಾಯವಾದರು.
ಅದರ ನಂತರ ಆ ಚಿಕ್ಕ ಪಕ್ಷಿ ಅದರ ಪುಟ್ಟ ಬಾಯಿಯಲ್ಲಿ ಸಮುದ್ರದ ನೀರನ್ನು ತುಂಬಿಕೊಂಡು ಹೋಗಿ. ತುಂಬಾ ದೂರ ಹೋಗಿ ಸುರಿದು ಬರುತ್ತಿತ್ತು. ಹೀಗೆ ಎರಡು ದಿನಗಳು ಕಳೆದ ನಂತರ ಆ ಪಕ್ಷಿ ಮಾಡುತ್ತಿರುವ ಕೆಲಸ ನೋಡಿ ಅಲ್ಲೇ ಇದ್ದ ಇನ್ನು ಕೆಲ ಪಕ್ಷಿಗಳು ಅದರ ಹತ್ತಿರ ಬಂದು ಅದರೊಂದಿಗೆ ಈ ರೀತಿ ಹೇಳಿದವು. ನಿನಗೆ ಏನಾದರೂ ಹುಚ್ಚು ಇಡೀದಿದೆಯಾ ನೀನು ಮಾಡುತ್ತಿರುವ ಕೆಲಸ ಏನು ಸಮುದ್ರ ಒಳಗಿರುವ ನೀರನ್ನು ತೆಗೆದುಕೊಂಡು ಹೋಗಿ ದೂರ ಚೆಲ್ಲಿ ಬರುತ್ತಿರುವೆ. ಈಗೇಕೆ ಮಾಡುತ್ತಿರುವೆ ಎಂದು ಕೇಳಿದವು.

ಆಗ ಆ ಚಿಕ್ಕ-ಪಕ್ಷಿ ನಡೆದ ವಿಷಯವನ್ನಲ್ಲ ಆ ಪಕ್ಷಿಗಳಿಗೆ ವಿವರಿಸಿತ್ತು ಅದನ್ನು ಕೇಳಿದ ಪಕ್ಷಿಗಳು ಅಯ್ಯೋ ಹುಚ್ಚಿ ನಿನಗೆ ನಡೆದಿರುವುದು ದೊಡ್ಡ ಅನ್ಯಾಯವೇ ಆದರೆ ಸಮುದ್ರ ತುಂಬಾ ವಿಶಾಲವಾದದ್ದು ಅಂತಹ ಸಮುದ್ರವನ್ನು ನೀನು ಒಣಗಿಸಲು ಪ್ರಯತ್ನಿಸುತ್ತಿರುವೆ. ಇದು ಎಂದಿಗೂ ನಡೆಯುವುದಿಲ್ಲ ಎಂದು ಹೇಳಿ ಉಳಿದ ಪಕ್ಷಿಗಳೆಲ್ಲ ಅಲ್ಲಿಂದ ಹೊರಟು ಹೋದವು. ಆ ಪಕ್ಷಿಗಳು ಅಷ್ಟು ಹೇಳಿದ ಮೇಲು ಕೂಡ. ಈ ಚಿಕ್ಕ ಪಕ್ಷಿ ಮಾತ್ರ ಅದರ ಸಂಕಲ್ಪ ಬಿಡಲಿಲ್ಲ ಅದರ ಕೆಲಸ ಅದು ಮಾಡುತ್ತಲೇ ಇತ್ತು.

ಅದೇ ರೀತಿ 5 ದಿನಗಳು ಕಳೆದು ಹೋದವು ಈ ರೀತಿ ಆಗಲು ರಾತ್ರಿ ನಿರಂತರವಾಗಿ ಕೆಲಸ ಮಾಡುತ್ತಿದ್ದುದರಿಂದ. ಆ ಚಿಕ್ಕ ಪಕ್ಷಿ ಬಹಳಾನೇ ನೀರಸಗೊಂಡಿತು . ಅದರ ಆರೋಗ್ಯವು ಅದಕ್ಕೆಟ್ಟಿತು ಆ ಚಿಕ್ಕ ಪಕ್ಷಿಯ ಕಷ್ಟ ನೋಡಲಾರದೆ . ಮತ್ತೆ ಉಳಿದ ಪಕ್ಷಿಗಳ ಗುಂಪು ಅದರ ಹತ್ತಿರ ಬಂದು. ಓ ಪಕ್ಷಿಯೇ ನೀನು ಪಡುತ್ತಿರುವ ಕಷ್ಟ ನಿನ್ನ ಮೊಟ್ಟೆಗಳಿಗಾಗಿ ಅನುಭವಿಸುತ್ತಿರುವ ವೇದನೆ ನೋಡುತ್ತಿದ್ದರೆ. ನಮ್ಮೆಲ್ಲರಿಗೂ ತುಂಬಾನೆ ದುಃಖವಾಗುತ್ತಿದೆ. ಆದರೆ ನಾವೆಲ್ಲರೂ ಸೇರಿ ಸಹಾಯ ಮಾಡಿದರೆ ನಮ್ಮೆಲ್ಲರಿಗೂ ತುಂಬಾ ದುಃಖವಾಗುತ್ತಿದೆ. ಆದರೆ ನಾವೆಲ್ಲರೂ ಸೇರಿ ನಿನಗೆ ಸಹಾಯ ಮಾಡಿದರು ಕೂಡ ನಿನ್ನ ಸಂಕಲ್ಪ ಫಲಿಸುವುದಿಲ್ಲ ಈಗೇನು ಮಾಡೋದು ಎಂದು ಎಲ್ಲರೂ ಕೆಲ ಹೊತ್ತು ಯೋಚಿಸಿ.

ಹೀಗೆ ಮಾಡೋಣ ನಾವೆಲ್ಲರೂ ಹೋಗಿ ಪಕ್ಷಿರಾಜ ಗರುಡನನ್ನು ಭೇಟಿಯಾಗಿ ನಮ್ಮ ಕಷ್ಟ ಹೇಳಿಕೊಳ್ಳೋಣ . ಅವರು ತುಂಬಾ ಬಲಶಾಲಿ ನಮಗೆ ತಪ್ಪದೆ ಸಹಾಯ ಮಾಡುತ್ತಾರೆಂದು . ಎಂದು ಹೇಳಿ ಪಕ್ಷಿಗಳೆಲ್ಲವೂ ಗುಂಪು ಕಟ್ಟಿಕೊಂಡು ಗರುಡನ ಬಳಿ ಹೋಗಿ ನಡೆದ ವಿಷಯವನ್ನಲ್ಲ ವಿವರಿಸಿ ಹೇಳಿಕೊಂಡವು ವಿಷಯವಲ್ಲ ಕೇಳಿಸಿಕೊಂಡು ಗರುಡ ಆ ಪಕ್ಷಿಗಳೊಂದಿಗೆ ಆ ಕೆಲಸ ನನ್ನಿಂದಲೂ ಸಾಧ್ಯವಿಲ್ಲ ಆದರೆ ನಾನು ಶ್ರೀ ಮಹಾವಿಷ್ಣುವಿನ ವಾಹನ ನಾನು ನಡೆದದ್ದೆಲ್ಲವನ್ನು ಅವರ ಬಳಿ ಹೇಳುತ್ತೇನೆ. ಅವರು ಹೇಳಿದರೆ ಸಮುದ್ರ ದೇವರು ಖಂಡಿತ ಕೇಳುತ್ತಾನೆ. ನಿಮ್ಮ ಕೆಲಸ ಆದಂತೆ ಎಂದು ಹೇಳಿಕೊಳ್ಳಿ ಎಂದು ಹೇಳಿ ಅವುಗಳನ್ನೆಲ್ಲ ಕಳಿಸಿ
ಗರುಡ ಅಲ್ಲಿಂದ ನೇರವಾಗಿ ಮಹಾವಿಷ್ಣುವಿನ ಬಳಿ ಬಂದು ಓ ದೇವತೀ ದೇವ ಭೂಲೋಕದಲ್ಲಿ ಒಂದು ಚಿಕ್ಕ ಪಕ್ಷಿ ಅದರ ಮೊಟ್ಟೆಗಳನ್ನು ಸಮುದ್ರ ತೆಗೆದುಕೊಂಡು ಹೋಗಿದೆ ಎಂದು ಆ ಮಹಾಸಮುದ್ರವನ್ನೇ ಒಣಗಿಸಲು ಆ ಸಮುದ್ರದಲ್ಲಿ ಇರುವ ನೀರನ್ನು ಅದರ ಚಿಕ್ಕ ಬಾಯಲ್ಲಿ ತುಂಬಿಕೊಂಡು ತುಂಬಾ ದೂರ ಎಸೆದು ಬರುತ್ತಿದೆ. ಆ ಪಕ್ಷಿಯ ಸಂಕಲ್ಪ ತುಂಬಾ ದೊಡ್ಡದು. ಅಂತಹ ವಿಶಾಲವಾದ ಸಮುದ್ರಕ್ಕೂ ಹೆದರದೆ. ಅದರ ಶಕ್ತಿಗೂ ಮೀರಿ ಪ್ರಯತ್ನಿಸುತ್ತಿದೆ. ಇದರಿಂದ ಅದರ ಆರೋಗ್ಯ ಅದಗೆಟ್ಟಿದೆ. ನೀವೇ ಹೇಗಾದರೂ ಅದಕ್ಕೆ ಸಹಾಯ ಮಾಡಬೇಕೆಂದು ಬೇಡಿ ದ ಗರುಡನ ಮಾತುಗಳನ್ನು ಕೇಳಿಸಿಕೊಂಡ ಶ್ರೀ ಮಹಾವಿಷ್ಣುವಿಗೆ ಪಕ್ಷಿಯ ಸಂಕಲ್ಪ ನೋಡಿ ಎಷ್ಟು ಹೆಮ್ಮೆ ಅನಿಸಿತು. ಕೂಡಲೆ ದೇವದೇವನಾದ ಮಹಾವಿಷ್ಣು ಗರುಡನ ಮೇಲೆ ಏರಿ ಕುಳಿತು .
ಆ ಸಮುದ್ರದ ಬಳಿ ಬಂದರು. ಅವರನ್ನು ನೋಡಿದ ಪಕ್ಷಿಗೆ ಎಲ್ಲಿಲ್ಲದಷ್ಟು ಸಂತೋಷ ಉಂಟಾಯಿತು. ಕೂಡಲೇ ಮಹಾವಿಷ್ಣು ಸಮುದ್ರದೇವರನ್ನು ಕರೆದು. ನಿನ್ನ ನೀರನ್ನು ಇನ್ ತೆಗೆದುಕೊಂಡು ಆ ಪಕ್ಷಿಗೆ ಆಧಾರ ಮೊಟ್ಟೆಗಳನ್ನು ಹಿಂತಿರುಗಿಸು ಎಂದು ಆದೇಶಿಸಿದರು. ಆಗ ಸಮುದ್ರ ದೇವರು ಅವರ ನೀರಿನ ಪ್ರವಾಹವನ್ನು ಇನ್ ತೆಗೆದುಕೊಂಡರು . ಆ ರೀತಿ ಸಮುದ್ರ ನೀರಲ್ಲ ಹಿಂದೆ ಹೋಗುತ್ತಿದ್ದಂತೆ. ಆ ಪಕ್ಷಿಗೆ ಅದರ ಗೂಡು ಹಾಗೂ ಅದರ ಎರಡು ಮೊಟ್ಟೆಗಳು ಕಾಣಿಸಿತು. ಕೂಡಲೆ ಆಪಕ್ಷಿ ಎಷ್ಟು ಸಂತೋಷದಿಂದ ಅವುಗಳನ್ನು ದಡಕ್ಕೆ ಎಳೆ ತಂದು ಮತ್ತು ಎಂದಿನಂತೆ ಸಂತೋಷವಾಗಿ ಜೀವನ ಶುರು ಮಾಡಿತು .

ಆ ರೀತಿ ಆ ಚಿಕ್ಕ ಪಕ್ಷಿ ಅದರ ಸಂಕಲ್ಪದಿಂದ ಮಹಾ ಸಮುದ್ರವನ್ನೇ ಗೆದ್ದಿತು. ಈ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಏನೆಂದರೆ. ಕಷ್ಟ ಬಂತೆಂದು ನಾವು ಅಳುತ್ತಾ ನಾವು ಒಂದು ಮೂಲೆಯಲ್ಲಿ ಕುಳಿತುಕೊಳ್ಳದೆ ದೇವರನ್ನು ಪ್ರಾರ್ಥಿಸಿ ಅವರ ಮೇಲೆ ನಂಬಿಕೆ ಇಟ್ಟು ನಮಗೆ ಶಕ್ತಿ ಇರುವವರೆಗೂ ಆ ಕಷ್ಟದಿಂದ ಹೇಗೆ ಹೊರ ಬರಬೇಕೆಂದು ಯೋಚಿಸಬೇಕು.

ನಾವು ಮಾಡುವ ಕೆಲಸ ಧರ್ಮವೇ ಆಗಿದ್ದರೆ ಆ ಭಗವಂತ ತಪ್ಪದೇ ಯಾವುದೇ ಒಂದು ರೂಪದಲ್ಲಿ ಬಂದು ನಮಗೆ ಸಹಾಯ ಮಾಡುತ್ತಾನೆ. ಆ ಪರಮಾತ್ಮ ಸರ್ವಂತರ ಯಾಮಿ ಅವರಿಗೆ ಎಲ್ಲವೂ ಗೊತ್ತು ಯಾರಿಗೆ ಯಾವ ಸಮಯದಲ್ಲಿ ಸಹಾಯ ಮಾಡಬೇಕು ಅವನೇ ಮಾಡುತ್ತಾನೆ. ನಾವು ದೇವರಿಗಾಗಿ ಮಾಡುವ ಪ್ರಾರ್ಥನೆ ಗಳು ಕೂಡ ಯಾವುದೇ ಒಂದು ರೂಪದಲ್ಲಿ ತಪ್ಪದೇ ಅವರಿಗೆ ಸೇರುತ್ತದೆ…. ಅದೇ ರೀತಿ ಪರಮಾತ್ಮ ಕೂಡ ಯಾವುದೋ ಒಂದು ರೂಪದಲ್ಲಿ ಬಂದು ನಮಗೆ ತಪ್ಪದೇ ಸಹಾಯ ಮಾಡುತ್ತಾನೆ .

Leave a Comment